ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 15 ಕೊನೆಯ ದಿನ.

Updated: Aug 9, 2018 , 05:46 PM IST
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ

ನವದೆಹಲಿ: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಸ್ಕೇಲ್ 2, 3, 4 ಮತ್ತು 5ರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.  ippbonline.com ರಲ್ಲಿ ನೇಮಕಾತಿ ಸಂಬಂದಿತ ಮಾಹಿತಿ ಲಭ್ಯವಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲ ವರ್ಷ ಪರೀಕ್ಷಾ ಅವಧಿ(probation period) ಆಗಿರುತ್ತದೆ. ಮಾಹಿತಿ ಪ್ರಕಾರ, ಓರ್ವ ಅಭ್ಯರ್ಥಿಗೆ ಒಂದು ಅರ್ಜಿ ಸಲ್ಲಿಸಲು ಮಾತ್ರ ಅವಕಾಶವಿದ್ದು, ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದ್ದರೆ ಅಂತಿಮವಾಗಿ ಸಲ್ಲಿಸಿದ ಅರ್ಜಿಯನ್ನು ಮಾತ್ರ ಮಾನ್ಯ ಎಂದು ಪರಿಗಣಿಸಲಾಗುತ್ತದೆ. ಈ ಪ್ರಕ್ರಿಯೆಯು ಆಗಸ್ಟ್ 1, 2018 ರಿಂದ ಪ್ರಾರಂಭವಾಗುತ್ತದೆ. ಆಸಕ್ತ ಅಭ್ಯರ್ಥಿಗಳು 15 ಆಗಸ್ಟ್ 2018 ರೊಳಗೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಶುಲ್ಕ:

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ-  750 ರೂ.
  • ಪರಿಶಿಷ್ಟ ಜಾತಿ/ವರ್ಗದ ಅಭ್ಯರ್ಥಿಗಳಿಗೆ- 150 ರೂ.

ಖಾಲಿ ಇರುವ ಹುದ್ದೆಗಳು:

  • ನೇಮಕಗೊಳ್ಳಬೇಕಾದ ಒಟ್ಟು ಪೋಸ್ಟ್ಗಳು: 58
  • ಮ್ಯಾನೇಜರ್ -15
  • ಹಿರಿಯ ವ್ಯವಸ್ಥಾಪಕ -32
  • AGM-04
  • ಮುಖ್ಯ ನಿರ್ವಾಹಕ - 07

ಅರ್ಹತಾ ಮಾನದಂಡ:
ಇಂಡಿಯಾ ಪೋಸ್ಟ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ಈ ಲಿಂಕ್ https://ippbonline.com/documents/31498/132994/1532438871873.PDF ಕ್ಲಿಕ್ ಮಾಡಿ. ಇದರಲ್ಲಿ ಅರ್ಜಿ ಸಲ್ಲಿಸಲು ಬೇಕಾದ ಮಾಹಿತಿ ಲಭ್ಯವಿದೆ.  ಇದರಲ್ಲಿ ಅರ್ಹತೆ, ವಯಸ್ಸಿನ ಮಿತಿ ಮತ್ತು ವೇತನ ಪ್ರಮಾಣದ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ.

ಆಯ್ಕೆ ಪ್ರಕ್ರಿಯೆ:
ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.