ಸುಪ್ರೀಂಕೋರ್ಟ್ ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಬಿ.ಆರ್.ಗವಾಯಿ ನೇಮಕ

ಜಸ್ಟೀಸ್ ಭ‍ೂಷಣ್ ರಾಮಕೃಷ್ಣ ಗವಾಯಿ ಅವರು 1960ರ ನವೆಂಬರ್ 24ರಂದು ಮಹಾರಾಷ್ಟ್ರದ ಅಮರಾವತಿಯಲ್ಲಿ ಜನಿಸಿದರು. 1985ರ ಮಾರ್ಚ್ 16ರಂದು ವಕೀಲ ವೃತ್ತಿಯನ್ನು ಆರಂಭಿಸಿದ ಅವರು, 1987ರಿಂದ 1990ರವರೆಗೆ ಬಾಂಬೆ ಹೈಕೋರ್ಟ್‌ನಲ್ಲಿ ಸ್ವತಂತ್ರ ವಕೀಲರಾಗಿ ಕಾರ್ಯನಿರ್ವಹಿಸಿದರು. 

Written by - Manjunath Naragund | Last Updated : Apr 29, 2025, 11:04 PM IST
  • 2003ರ ನವೆಂಬರ್ 14ರಂದು ಜಸ್ಟೀಸ್ ಭ‍ೂಷಣ್ ರಾಮಕೃಷ್ಣ ಗವಾಯಿ ಅವರನ್ನು ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಉನ್ನತೀಕರಿಸಲಾಯಿತು.
  • 2005ರ ನವೆಂಬರ್ 12ರಂದು ಅವರು ಬಾಂಬೆ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಯಾದರು.
  • 2019ರ ಮೇ 24ರಖದು ಅವರನ್ನು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಉನ್ನತೀಕರಿಸಲಾಯಿತು.
ಸುಪ್ರೀಂಕೋರ್ಟ್ ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಬಿ.ಆರ್.ಗವಾಯಿ ನೇಮಕ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಸ್ಟೀಸ್ ಭ‍ೂಷಣ್ ರಾಮಕೃಷ್ಣ ಗವಾಯಿ ಅವರನ್ನು ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ (CJI) ನೇಮಿಸಿದ್ದಾರೆ. ಈ ನೇಮಕವು 2025ರ ಮೇ 14ರಿಂದ ಜಾರಿಗೆ ಬರಲಿದೆ. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಷಯವನ್ನು ಘೋಷಿಸಿದ್ದಾರೆ.

Add Zee News as a Preferred Source

" ಶ್ರೀ ಜಸ್ಟೀಸ್ ಭ‍ೂಷಣ್ ರಾಮಕೃಷ್ಣ ಗವಾಯಿ ಅವರನ್ನು 2025ರ ಮೇ 14ರಿಂದ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗಿದೆ," ಎಂದು ಅವರು ಬರೆದಿದ್ದಾರೆ.

ಜಸ್ಟೀಸ್ ಬಿ.ಆರ್.ಗವಾಯಿ ಯಾರು?

ಜಸ್ಟೀಸ್ ಬಿಆರ್ ಗವಾಯಿ ಅವರು 1960ರ ನವೆಂಬರ್ 24ರಂದು ಮಹಾರಾಷ್ಟ್ರದ ಅಮರಾವತಿಯಲ್ಲಿ ಜನಿಸಿದರು. 1985ರ ಮಾರ್ಚ್ 16ರಂದು ವಕೀಲ ವೃತ್ತಿಯನ್ನು ಪ್ರಾರಂಭಿಸಿದ ಅವರು, 1987ರಿಂದ 1990ರವರೆಗೆ ಬಾಂಬೆ ಹೈಕೋರ್ಟ್‌ನಲ್ಲಿ ಸ್ವತಂತ್ರವಾಗಿ ವಕೀಲಿಕೆ ಮಾಡಿದರು. 1990ರ ನಂತರ, ಅವರು ಮುಖ್ಯವಾಗಿ ಬಾಂಬೆ ಹೈಕೋರ್ಟ್‌ನ ನಾಗಪುರ ಘಟಕದಲ್ಲಿ ವಕೀಲಿಕೆ ಮುಂದುವರಿಸಿದರು. ಅವರು ನಾಗಪುರ ಮಹಾನಗರ ಪಾಲಿಕೆ, ಅಮರಾವತಿ ಮಹಾನಗರ ಪಾಲಿಕೆ ಮತ್ತು ಅಮರಾವತಿ ವಿಶ್ವವಿದ್ಯಾಲಯದ ಸ್ಥಾಯೀ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: Explainer: ಏನಿದು ಬಲೂಚಿಸ್ತಾನದ ಸಂಘರ್ಷ..? ಆಂತರಿಕ ಸಂಘರ್ಷದ ಕಾವಿನಲ್ಲಿ ಬೆಂದು ಹೋದ ಪಾಕ್..!

ಸರ್ವೋಚ್ಚ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್ ಪ್ರಕಾರ, ಜಸ್ಟೀಸ್ ಗವಾಯಿ ಅವರು 1992ರ ಆಗಸ್ಟ್‌ನಿಂದ 1993ರ ಜುಲೈವರೆಗೆ ಬಾಂಬೆ ಹೈಕೋರ್ಟ್‌ನ ನಾಗಪುರ ಘಟಕದಲ್ಲಿ ಸಹಾಯಕ ಸರ್ಕಾರಿ ವಕೀಲ ಮತ್ತು ಹೆಚ್ಚುವರಿ ಸಾರ್ವಜನಿಕ ಅಭಿಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ. 2000ರ ಜನವರಿ 17ರಂದು ಅವರನ್ನು ನಾಗಪುರ ಘಟಕದ ಸರ್ಕಾರಿ ವಕೀಲ ಮತ್ತು ಸಾರ್ವಜನಿಕ ಅಭಿಯೋಜಕರಾಗಿ ನೇಮಿಸಲಾಯಿತು.

2003ರ ನವೆಂಬರ್ 14ರಂದು ಅವರನ್ನು ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾದರು ಮತ್ತು 2005ರ ನವೆಂಬರ್ 12ರಂದು ಖಾಯಂ ನ್ಯಾಯಮೂರ್ತಿಯಾದರು. 2019ರ ಮೇ 24ರಂದು ಅವರನ್ನು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹುದ್ದೆ ಅಲಂಕರಿಸಿದರು

ಪ್ರಮುಖ ತೀರ್ಪುಗಳು:

ಕಳೆದ ಆರು ವರ್ಷಗಳಲ್ಲಿ ಜಸ್ಟೀಸ್ ಗವಾಯಿ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಸುಮಾರು 700 ಪೀಠಗಳಲ್ಲಿ ಭಾಗವಹಿಸಿದ್ದಾರೆ. ಅವರು ಹಲವಾರು ಸಂವಿಧಾನ ಪೀಠಗಳ ಭಾಗವಾಗಿದ್ದು, ಗಮನಾರ್ಹ ತೀರ್ಪುಗಳನ್ನು ನೀಡಿದ್ದಾರೆ. ಇವುಗಳಲ್ಲಿ 2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ರದ್ದತಿ, 2016ರ ನೋಟು ಅಮಾನ್ಯೀಕರಣ, ಚುನಾವಣಾ ರಾಜಕೀಯ ದೇಣಿಗೆಗಾಗಿ ಬಾಂಡ್‌ಗಳನ್ನು ರದ್ದುಗೊಳಿಸುವಿಕೆಯಂತಹ ಪ್ರಮುಖ ತೀರ್ಪುಗಳು ಸೇರಿವೆ.

ಇದನ್ನೂ ಓದಿ: Explainer: ಭಾರತದ ರಾಜ್ಯಗಳ ಆರ್ಥಿಕತೆ: ಪಾಕಿಸ್ತಾನದೊಂದಿಗೆ ಹೋಲಿಕೆ

ಜಸ್ಟೀಸ್ ಗವಾಯಿ ಅವರ ಅಧಿಕಾರಾವಧಿ

ಜಸ್ಟೀಸ್ ಬಿಆರ್ ಗವಾಯಿ ಅವರು ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಸುಮಾರು ಆರು ತಿಂಗಳ ಕಾಲ ಸೇವೆ ಸಲ್ಲಿಸಲಿದ್ದಾರೆ. ಅವರು 2025ರ ನವೆಂಬರ್ 23ರಂದು ನಿವೃತ್ತರಾಗಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

 

 

About the Author

Trending News