close

News WrapGet Handpicked Stories from our editors directly to your mailbox

ಬಿಜೆಪಿ ತೆಕ್ಕೆಗೆ ವಿಧಾನಸಭಾ ಸೀಟ್, ಶಿವಸೇನಾದಲ್ಲಿ ಬುಗಿಲೆದ್ದ ಆಕ್ರೋಶ

ಅಕ್ಟೋಬರ್ 21 ರಂದು ನಡೆಯಲಿರುವ ಮಹಾರಾಷ್ಟ ವಿಧಾನಸಭಾ ಚುನಾವಣೆಗೆ ಮುನ್ನ ಶಿವಸೇನೆ-ಬಿಜೆಪಿ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆಯಾಗಿದ್ದು, ಕಲ್ಯಾಣ್ ಪೂರ್ವ ಕ್ಷೇತ್ರದ 26 ಶಿವಸೇನೆ ಕಾರ್ಪೋರೇಟರ್‌ಗಳು ಮತ್ತು ಸುಮಾರು 300 ಪಕ್ಷದ ಕಾರ್ಯಕರ್ತರು ತಮ್ಮ ರಾಜೀನಾಮೆಯನ್ನು ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಕಳುಹಿಸಿದ್ದಾರೆ.

Updated: Oct 10, 2019 , 01:50 PM IST
ಬಿಜೆಪಿ ತೆಕ್ಕೆಗೆ ವಿಧಾನಸಭಾ ಸೀಟ್, ಶಿವಸೇನಾದಲ್ಲಿ ಬುಗಿಲೆದ್ದ ಆಕ್ರೋಶ
file photo

ನವದೆಹಲಿ: ಅಕ್ಟೋಬರ್ 21 ರಂದು ನಡೆಯಲಿರುವ ಮಹಾರಾಷ್ಟ ವಿಧಾನಸಭಾ ಚುನಾವಣೆಗೆ ಮುನ್ನ ಶಿವಸೇನೆ-ಬಿಜೆಪಿ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆಯಾಗಿದ್ದು, ಕಲ್ಯಾಣ್ ಪೂರ್ವ ಕ್ಷೇತ್ರದ 26 ಶಿವಸೇನೆ ಕಾರ್ಪೋರೇಟರ್‌ಗಳು ಮತ್ತು ಸುಮಾರು 300 ಪಕ್ಷದ ಕಾರ್ಯಕರ್ತರು ತಮ್ಮ ರಾಜೀನಾಮೆಯನ್ನು ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಕಳುಹಿಸಿದ್ದಾರೆ.

ಕಲ್ಯಾಣ್ ಪೂರ್ವ ವಿಧಾನಸಭಾ ಸೀಟ್ ಬಿಜೆಪಿ ಹೋದ ಹಿನ್ನಲೆಯಲ್ಲಿ ಬಂಡಾಯ ಶಿವಸೇನಾ ಅಭ್ಯರ್ಥಿ ಧನಂಜಯ್ ಬೊಡಾರೆ ಅವರನ್ನು ಬೆಂಬಲಿಸಿ ಪಕ್ಷದ ಕಾರ್ಯಕರ್ತರು ಹಾಗೂ ಕಾರ್ಪೊರೇಟರ್ ಗಳು ರಾಜಿನಾಮೆ ನೀಡಿದ್ದಾರೆ ಎನ್ನಲಾಗಿದೆ. ಈಗ ಚುನಾವಣೆಗೆ ಕೆಲವೇ ದಿನಗಳಿರುವ ಮುನ್ನ ಶಿವಸೇನಾ ಹಾಗೂ ಬಿಜೆಪಿ ಮೈತ್ರಿಕೂಟದಲ್ಲಿ ಅಸಮಾಧಾನ ಬುಗಿಲೆದ್ದಿರುವುದು ಕೇಸರಿ ಪಡೆಗೆ ಹಿನ್ನಡೆಯನ್ನುಂಟು ಮಾಡಿದೆ.

ಬಿಜೆಪಿ ಮತ್ತು ಶಿವಸೇನೆ ಎರಡೂ ಆಯಾ ಪಕ್ಷಗಳಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳಿಕೊಳ್ಳುತ್ತಿದ್ದರೂ, ಮಹಾರಾಷ್ಟ್ರದ ವಿವಿಧ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಹಲವಾರು ಬಂಡಾಯ ಅಭ್ಯರ್ಥಿಗಳಿದ್ದಾರೆ. 'ಶಿವಸೇನೆಯ ನಮ್ಮ ಹಿರಿಯ ನಾಯಕರು ಮುಜುಗರದ ಪರಿಸ್ಥಿತಿಯನ್ನು ಎದುರಿಸಕೂಡದು ಆ ಹಿನ್ನಲೆಯಲ್ಲಿ ನಾವು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇವೆ. ಅವರು ಈಗಾಗಲೇ ಮೈತ್ರಿ ಘೋಷಿಸಿ ಬಿಜೆಪಿಯಿಂದ ಬಂದಿರುವ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ, ಇದನ್ನು ನಾವು ಮಾಡಲು ಸಾಧ್ಯವಿಲ್ಲ, ಆದ್ದರಿಂದದಾಗಿ ನಾವು ರಾಜೀನಾಮೆ ನೀಡಲು ನಿರ್ಧರಿಸಿದ್ದಿವೆ. ನಾವು ಉದ್ಧವ್ ಜಿ, ಸಚಿವ ಏಕನಾಥ್ ಶಿಂಧೆ ಮತ್ತು ಸ್ಥಳೀಯ ಸಂಸದ ಶ್ರೀಕಾಂತ್ ಶಿಂಧೆ ಜಿ ಅವರಿಗೆ ರಾಜೀನಾಮೆ ಕಳುಹಿಸಿದ್ದೇವೆ 'ಎಂದು ಕಲ್ಯಾಣ್ ಮೂಲದ ಶಿವಸೇನ ಶಸ್ನ್ಯೋಜಾಕ್ ಶರದ್ ಪಾಟೀಲ್ ಹೇಳಿದರು.

ಬಂಡಾಯ ಅಭ್ಯರ್ಥಿ ಧನಂಜಯ್ ಬಡೋರ್ ಮಾತನಾಡಿ ' ನಾನು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಏಕೆಂದರೆ ಕಳೆದ 10 ವರ್ಷಗಳಲ್ಲಿ ನಮ್ಮ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಇಲ್ಲ ಮತ್ತು ಜನರು ಕೇವಲ ತೊಂದರೆ ಅನುಭವಿಸುತ್ತಿದ್ದಾರೆ, ನಾವು ಬಿಜೆಪಿ ಅಭ್ಯರ್ಥಿಯನ್ನು ನಮ್ಮ ಶಾಸಕರಾಗಿ ಸ್ವೀಕರಿಸಲು ಸಾಧ್ಯವಿಲ್ಲ ಮತ್ತು ಆದ್ದರಿಂದ ನಾನು  ಅವರ ವಿರುದ್ಧ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದರು.

ಬಿಜೆಪಿ ಮತ್ತು ಶಿವಸೇನೆ ನಡುವಿನ ಸ್ಥಾನ ಹಂಚಿಕೆ ಒಪ್ಪಂದದ ಪ್ರಕಾರ, ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ ಮತ್ತು ಶಿವಸೇನೆ 124 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಇತರ ಮಿತ್ರ ಪಕ್ಷಗಳಿಗೆ 14 ಸ್ಥಾನಗಳು ಸಿಕ್ಕಿವೆ.288 ಸದಸ್ಯರ ವಿಧಾನಸಭೆಯನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಅಕ್ಟೋಬರ್ 21 ರಂದು ಚುನಾವಣೆ ನಡೆಯಲಿದ್ದು , ಅಕ್ಟೋಬರ್ 24 ರಂದು ಮತ ಎಣಿಕೆ ನಡೆಯಲಿದೆ.