ಪ್ರಧಾನಿ ಮೋದಿಯಿಂದಾಗಿ ಕಾಶ್ಮೀರ ಹೊತ್ತಿ ಉರಿಯುತ್ತಿದೆ-ರಾಹುಲ್ ಗಾಂಧಿ

ಪ್ರಧಾನಿ ಮೋದಿ ಇಂದು ಕಾಶ್ಮೀರದಲ್ಲಿ ಉಗ್ರರಿಗೆ ಅವಕಾಶ ನೀಡಿದ ಹಿನ್ನಲೆಯಲ್ಲಿ ಕಾಶ್ಮಿರವು ಹೊತ್ತಿ ಉರಿಯುವಂತಾಗಿದೆ ಎಂದು ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಪ್ರಧಾನಿ ಮೋದಿ ಮೇಲೆ ವಾಗ್ದಾಳಿ ನಡೆಸಿದರು.

Updated: Oct 29, 2018 , 06:50 PM IST
ಪ್ರಧಾನಿ ಮೋದಿಯಿಂದಾಗಿ ಕಾಶ್ಮೀರ ಹೊತ್ತಿ ಉರಿಯುತ್ತಿದೆ-ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ಮೋದಿ ಇಂದು ಕಾಶ್ಮೀರದಲ್ಲಿ ಉಗ್ರರಿಗೆ ಅವಕಾಶ ನೀಡಿದ ಹಿನ್ನಲೆಯಲ್ಲಿ ಕಾಶ್ಮಿರವು ಹೊತ್ತಿ ಉರಿಯುವಂತಾಗಿದೆ ಎಂದು ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಪ್ರಧಾನಿ ಮೋದಿ ಮೇಲೆ ವಾಗ್ದಾಳಿ ನಡೆಸಿದರು.

ಮಧ್ಯಪ್ರದೇಶದ ಉಜ್ಜೆಯಿನಿಯ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ" ಸೇನಾ ಸಿಬ್ಬಂದಿಯು ಮೋದಿ ಕಾರ್ಯಶೈಲಿಗೆ ಹತಾಶರಾಗಿದ್ದಾರೆ, ಇದರಿಂದಾಗಿ ಇಂದು ಜಮ್ಮು ಮತ್ತು ಕಾಶ್ಮಿರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗಿವೆ. ಆದ್ದರಿಂದ ಕಾಶ್ಮೀರ ಹೊತ್ತು ಉರಿಯುತ್ತಿದೆ ಎಂದು ತಿಳಿಸಿದರು. 

ಒಂದು ಶ್ರೇಯಾಂಕ ಒಂದು ಪಿಂಚಣಿ ಯೋಜನೆಯ ವಿಚಾರವಾಗಿ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಮಾಜಿ ರಕ್ಷಣಾ ಸಿಬ್ಬಂಧಿ ತಮಗೆ ಹೇಳಿರುವಂತೆ ಮೋದಿ ಪದೇ ಪದೇ ಇದನ್ನು ಕಾರ್ಯಗೊಳಿಸುವ ವಿಚಾರವಾಗಿ ಸುಳ್ಳು ಹೇಳಿದ್ದಾರೆ. ಆದ್ದರಿಂದ ಈ ಯೋಜನೆ ಅನುಕೂಲ ಇನ್ನು ದೊರೆಯಬೇಕಾಗಿದೆ ಎಂದರು. 

"ಮೋದಿ ಅವರು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತನಾಡುತ್ತಾರೆ, ಆದರೆ ಅವರು ಸೈನಿಕರಿಗೆ ಏನು ಮಾಡಿದ್ದಾರೆಂದು ನಿಮಗೆ ಹೇಳಿಲ್ಲ. ಕಾಶ್ಮೀರದಲ್ಲಿ ಇದುವರೆಗೂ ಪ್ರತಿದಿನ ಸಾಯುತ್ತಿರುವವರು ಸೈನಿಕರೇ ಹೊರತು ಯಾವುದೇ ರಾಜಕಾರಣಿ ಅಥವಾ ಪ್ರಧಾನಮಂತ್ರಿಯಲ್ಲ "ಎಂದು ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.