'ಬಿಹಾರ ಸೋಲಿನ ನಂತರ ರಾಜಕೀಯದ ಜೊತೆ ಕುಟುಂಬ ತ್ಯಜಿಸುತ್ತಿದ್ದೇನೆ' ಎಂದ ಲಾಲೂ ಪುತ್ರಿ

ರೋಹಿಣಿ ಆಚಾರ್ಯ ಕಳೆದ ವರ್ಷ ರಾಜಕೀಯಕ್ಕೆ ಪಾದಾರ್ಪಣೆ ಮಾಡಿ 2024 ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಸರನ್ ಕ್ಷೇತ್ರದಿಂದ ಸ್ಪರ್ಧಿಸಿದರು.

Written by - Manjunath Naragund | Last Updated : Nov 15, 2025, 06:50 PM IST
  • ಲಾಲು ಯಾದವ್ ಕುಟುಂಬದ ರಾಜಕೀಯ ಚಿತ್ರಣವನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ
  • 2024ರ ಲೋಕಸಭಾ ಚುನಾವಣೆಯಲ್ಲಿ ಸರಾನ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು
  • ಆರ್‌ಜೆಡಿ ಕೇವಲ 25 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು
'ಬಿಹಾರ ಸೋಲಿನ ನಂತರ ರಾಜಕೀಯದ ಜೊತೆ ಕುಟುಂಬ ತ್ಯಜಿಸುತ್ತಿದ್ದೇನೆ' ಎಂದ ಲಾಲೂ ಪುತ್ರಿ

Add Zee News as a Preferred Source

ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಭಾರೀ ಸೋಲು ಅನುಭವಿಸಿದ ಒಂದು ದಿನದ ನಂತರ, ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ರಾಜಕೀಯದ ಜೊತೆಗೆ ಕುಟುಂಬದ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳುತ್ತಿದ್ದೇನೆ ಎಂದು ಟ್ವೀಟ್ ಮಾಡಿರುವುದು ಈಗ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.

2022ರಲ್ಲಿ ತಂದೆ ಲಾಲು ಯಾದವ್‌ಗೆ ಮೂತ್ರಪಿಂಡ ದಾನ ಮಾಡಿದ್ದ ಪುತ್ರಿ ರೋಹಿಣಿ ಆಚಾರ್ಯ ಎಕ್ಸ್ (ಟ್ವಿಟರ್) ನಲ್ಲಿ ಟ್ವೀಟ್ ಮಾಡಿ "ನಾನು ರಾಜಕೀಯ ತ್ಯಜಿಸುತ್ತಿದ್ದೇನೆ ಮತ್ತು ನನ್ನ ಕುಟುಂಬವನ್ನು ತ್ಯಜಿಸುತ್ತಿದ್ದೇನೆ... ಸಂಜಯ್ ಯಾದವ್ ಮತ್ತು ರಮೀಜ್ ನನ್ನನ್ನು ಕೇಳಿಕೊಂಡಿದ್ದು ಇದನ್ನೇ... ಮತ್ತು ನಾನು ಎಲ್ಲಾ ಆಪಾದನೆಗಳನ್ನು ಹೊರುತ್ತಿದ್ದೇನೆ" ಎಂದು ಬರೆದಿದ್ದಾರೆ. ಈ ಪೋಸ್ಟ್ ಬಿಹಾರ ಚುನಾವಣಾ ಸೋಲಿನ ಬಗ್ಗೆ ಸೂಚನೆ ನೀಡುತ್ತಿದೆಯೇ ಅಥವಾ ಕುಟುಂಬದ ಇತರ ವಿವಾದಗಳನ್ನು ಉಲ್ಲೇಖಿಸುತ್ತಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: ನಟಿಯರನ್ನಷ್ಟೇ ಅಲ್ಲ ನಟರನ್ನು ಬಿಡದ ಕಾಸ್ಟಿಂಗ್‌ ಕೌಚ್‌ ಭೂತ! ಇಂಡಸ್ಟ್ರಿಯ ಕರಾಳ ಸತ್ಯ ಬಿಚ್ಚಿಟ್ಟ ಸ್ಟಾರ್‌ ಹೀರೋ

ರೋಹಿಣಿ ಆಚಾರ್ಯ ಅವರ ಈ ನಿರ್ಧಾರವು ಲಾಲು ಯಾದವ್ ಕುಟುಂಬದ ರಾಜಕೀಯ ಚಿತ್ರಣವನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಈಗಾಗಲೇ ಲಾಲು ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದ್ದು, ಅವರು ಸ್ವತಂತ್ರವಾಗಿ 'ಜನಶಕ್ತಿ ಜನತಾ ದಳ' ಪಕ್ಷವನ್ನು ಸ್ಥಾಪಿಸಿದ್ದಾರೆ. ಈ ಪಕ್ಷ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿತು ಮತ್ತು ರಾಘೋಪುರ್ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮನಾದ ತೇಜಸ್ವಿ ಯಾದವ್ ವಿರುದ್ಧ ಅಭ್ಯರ್ಥಿಯನ್ನು ನಿಲ್ಲಿಸಿತು. ತೇಜ್ ಪ್ರತಾಪ್ ಸ್ಪರ್ಧಿಸಿದ್ದ ಮಹುವಾ ಸೇರಿದಂತೆ, ಈ ಪಕ್ಷ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಿಲ್ಲ.ತೇಜ್ ಪ್ರತಾಪ್ ಉಚ್ಚಾಟಕ್ಕೆ ರೋಹಿಣಿ ಆಚಾರ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಹಾರ ಚುನಾವಣೆಗೂ ಮುನ್ನವೇ ಪಕ್ಷದ ಬಗ್ಗೆ ತಮ್ಮ ಹತಾಶೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದ್ದರು.

ಸೆಪ್ಟೆಂಬರ್ ತಿಂಗಳಲ್ಲಿ ಅವರು ಎಲ್ಲಾ ರಾಜಕೀಯ ನಾಯಕರು ಮತ್ತು ಕುಟುಂಬ ಸದಸ್ಯರನ್ನು ಸಾಮಾಜಿಕ ಮಾಧ್ಯಮದಲ್ಲಿ ಅನ್‌ಫಾಲೋ ಮಾಡಿ, 'ನನ್ನ ಬಗ್ಗೆ ತಪ್ಪು ಮಾಹಿತಿ ಹರಡಲಾಗುತ್ತಿದೆ' ಎಂದು ಪೋಸ್ಟ್ ಮಾಡಿದ್ದರು.ಅದೇ ಸಮಯದಲ್ಲಿ ಅವರು ಒಂದು ಸವಾಲಿನ ಪೋಸ್ಟ್ ಹಂಚಿಕೊಂಡು: "ದುಷ್ಟ ಆಲೋಚನೆಗಳನ್ನು ಹೊಂದಿರುವ ಎಲ್ಲರಿಗೂ ನಾನು ಬಹಿರಂಗವಾಗಿ ಸವಾಲು ಹಾಕುತ್ತೇನೆ ನನ್ನ ತಂದೆಗೆ ಮೂತ್ರಪಿಂಡವನ್ನು ದಾನ ಮಾಡಿರುವುದು ಸುಳ್ಳು ಎಂದು ಯಾರಾದರೂ ಸಾಬೀತುಪಡಿಸಿದರೆ, ನಾನು ರಾಜಕೀಯ ಮತ್ತು ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುತ್ತೇನೆ.ಇದಲ್ಲದೆ, ಆರೋಪ ಮಾಡುವವರು ತಮ್ಮ ಸುಳ್ಳು ಮತ್ತು ಪ್ರಚಾರವನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ, ಅವರು ನನ್ನಲ್ಲಿ ಮತ್ತು ದೇಶದ ಪ್ರತಿಯೊಬ್ಬ ತಾಯಿ, ಸಹೋದರಿ ಮತ್ತು ಮಗಳಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸುವ ಧೈರ್ಯವನ್ನು ಹೊಂದಿರಬೇಕು... ಮತ್ತು ಅಂತಹ ಸುಳ್ಳು ಮಾಹಿತಿಯನ್ನು ಮತ್ತೆ ಎಂದಿಗೂ ಹರಡುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು" ಎಂದೂ ಹೇಳಿದ್ದರು.

ಇದನ್ನೂ ಓದಿ: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ.. ಕಳೆದ 4 ಚುನಾವಣೆಗಳಲ್ಲಿ ಗೆದ್ದವರು-ಸೋತವರು ಯಾರು.? ಸಂಪೂರ್ಣ ವಿವರ ಇಲ್ಲಿದೆ

ಆರ್‌ಜೆಡಿ‌ಗೆ ದೊಡ್ಡ ಹೊಡೆತ:

243 ಸದಸ್ಯರ ಬಲದ ಬಿಹಾರ ವಿಧಾನಸಭೆಯಲ್ಲಿ ಆರ್‌ಜೆಡಿ ಕೇವಲ 25 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು, ಇದು 2020ರ 75 ಸ್ಥಾನಗಳಿಂದ ಭಾರೀ ಕುಸಿತವಾಗಿದೆ. ವಿರೋಧ ಪಕ್ಷದ ಮಹಾಘಟ ಬಂಧನ್ (ಆರ್‌ಜೆಡಿ-ಕಾಂಗ್ರೆಸ್ ಸಹಿತ) ಒಟ್ಟು 35 ಸ್ಥಾನಗಳಿಗೆ ಸೀಮಿತವಾಯಿತು. ಇದೇ ಸಮಯದಲ್ಲಿ, ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ 202 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಸರ್ಕಾರ ರಚಿಸುತ್ತಿದೆ.ರೋಹಿಣಿ ಆಚಾರ್ಯ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಸರಾನ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. 

About the Author

Trending News