ದೆಹಲಿ NCR ಪ್ರಾಂತ್ಯದಲ್ಲಿ ಮತ್ತೆ ಕಂಪಿಸಿದ ಭೂಮಿ.. ಯಾವುದೇ ರೀತಿಯ ಹಾನಿಯ ಕುರಿತು ವರದಿ ಇಲ್ಲ

ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ಶುಕ್ರವಾರ ಭೂಕಂಪ ಸಂಭವಿಸಿದೆ. ಸುದ್ದಿ ಸಂಸ್ಥೆ ಪಿಟಿಐ ಈ ಕುರಿತು ಮೊದಲ ಅಲರ್ಟ್ ಜಾರಿಗೊಳಿಸಿದೆ. ಲಘು ತೀವ್ರತೆಯ ಭೂಕಂಪ ಇದಾಗಿದೆ ಎಂದು ಸಂಸ್ಥೆ ಹೇಳಿದೆ.

Last Updated : May 15, 2020, 01:53 PM IST
ದೆಹಲಿ NCR ಪ್ರಾಂತ್ಯದಲ್ಲಿ ಮತ್ತೆ ಕಂಪಿಸಿದ ಭೂಮಿ.. ಯಾವುದೇ ರೀತಿಯ ಹಾನಿಯ ಕುರಿತು ವರದಿ ಇಲ್ಲ title=

ನವದೆಹಲಿ:ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ಶುಕ್ರವಾರ ಮತ್ತೆ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ಸುದ್ದಿ ಸಂಸ್ಥೆ ಪಿಟಿಐ ಈ ಕುರಿತು ಮೊದಲ ಅಲರ್ಟ್ ಜಾರಿಗಲಿಸಿದ್ದು, ಇದೊಂದು ಲಘು ತೀವ್ರತೆಯನ್ನು ಭೂಕಂಪ ಎಂದು ಹೇಳಿದೆ. ಭೂಕಂಪನ ಕೇಂದ್ರಬಿಂದು ದೆಹಲಿಯ ಉತ್ತರ ಭಾಗದಲ್ಲಿರುವ ಪಿತಾಂಪುರನಲ್ಲಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಬೆಳಗ್ಗೆ 11: 28 ಕ್ಕೆ ಈ ನಡುಕ ಉಂಟಾಗಿದೆ ಎನ್ನಲಾಗಿದೆ.

ಇದಕ್ಕೂ ಮೊದಲು 10.5.2020 ರ ಸುಮಾರಿಗೆ ಮಧ್ಯಾಹ್ನ 1.45 ರ ಸುಮಾರಿಗೆ ಭೂ ಕಂಪ ಸಂಭವಿಸಿದೆ. ದೆಹಲಿಯ ಹೊರತಾಗಿ, ಗಾಜಿಯಾಬಾದ್, ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ಸೇರಿದಂತೆ  ಎನ್‌ಸಿಆರ್‌ನ ಅನೇಕ ಪ್ರದೇಶಗಳಲ್ಲಿ ಈ ಭೂಕಂಪನ ಸಂಭವಿಸಿದೆ.

ಈ ಭೂಕಂಪವು ರಿಕ್ಟರ್ ಮಾಪಕದಲ್ಲಿ 3.5 ರಷ್ಟಿತ್ತು.ಮತ್ತು ಇದರ  ಕೇಂದ್ರ ಬಿಂದು ದೆಹಲಿಯ ವಾಯುವ್ಯ ಭಾಗದಲ್ಲಿತ್ತು. ಈ ಭೂಕಂಪದ ಕೇಂದ್ರಬಿಂದು ಭೂಮಿಯ ಸುಮಾರು 5 ಕಿಲೋಮೀಟರ್ ಆಳದಲ್ಲಿ ಇತ್ತು ಎನ್ನಲಾಗಿದೆ.

ಭಾರದದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆ ಸಧ್ಯ ದೆಶಾದ್ಯಾತ ಲಾಕ್ ಡೌನ್ ಘೋಷಿಸಲಾಗಿದ್ದು, ದೆಹಲಿ ಮತ್ತು NCR ಪ್ರಾಂತ್ಯದಲ್ಲಿ ಬಹುತೇಕ ಜನರು ತಮ್ಮ ತಮ್ಮ ಮನೆಗಳಲ್ಲಿ ಬಂಧಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭೂಕಂಪ ಸಂಭವಿಸಿದ ಕಾರಣ ಜನರು ಭಯಭೀತರಾತಿ ತಮ್ಮ ಮನೆಗಳಿಂದ ಹೊರಬಂದಿದ್ದಾರೆ.
 

Trending News