ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರ ಹಾಗೂ ಅರ್ಜೆಂಟೀನಾದ ಸ್ಟಾರ್ ಪ್ಲೇಯರ್ ಲಿಯೋನೆಲ್ ಮೆಸ್ಸಿ ಅವರು ನಾಳೆ ಭಾರತಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಅವರ ಅಭಿಮಾನಿಗಳು ಕುತೂಹಲದಿಂದ ಇದ್ದು ಟಿಕೆಟ್ ಖರೀದಿಗೆ ಮುಗಿಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಶಾಕಿಂಗ್ ನ್ಯೂಸ್ ಒಂದು ಬಹಿರಂಗಗೊಂಡಿದ್ದು ಕೇವಲ ಒಂದು ಟಿಕೆಟ್ ಬೆಲೆ ಹತ್ತು ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ.
ಡಿಸೆಂಬರ್ 13 ಅಂದರೆ ನಾಳೆ ಅರ್ಜೆಂಟೀನಾದ ಸ್ಟಾರ್ ಪ್ಲೇಯರ್ ಲಿಯೋನೆಲ್ ಮೆಸ್ಸಿ ಅವರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಇಲ್ಲಿನ ಸಮಯದ ಪ್ರಕಾರ ಬೆಳಗಿನ ಜಾವ 1:30ರ ಸುಮಾರಿಗೆ ಲಿಯೋನೆಲ್ ಮೆಸ್ಸಿ ಅವರು ಕೋಲ್ಕತ್ತಾದ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ. ಬಳಿಕ ಬೆಳಗ್ಗೆ 9:30ಕ್ಕೆ ಕೋಲ್ಕತ್ತಾದ ಹಯಾತ್ ರೀಜೆನ್ಸಿಯಲ್ಲಿ ನಡೆಯುವ ಮೀಟ್ ಮತ್ತು ಗ್ರೀಟ್ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗಲಿದೆ. ಇದಕ್ಕಾಗಿ ಅವರಿಗೆ ದೊಡ್ಡ ಮೊತ್ತದಲ್ಲಿ ಹಣ ಪಾವತಿ ಮಾಡಲಾಗಿದೆ ಎನ್ನಲಾಗದೆ.
ಕಾರ್ಯಕ್ರಮದಲ್ಲಿ ಮೆಸ್ಸಿ ಅವರನ್ನು ಭೇಟಿ ಮಾಡಬೇಕು ಎಂದರೆ ಒಂದು ಟಿಕೆಟ್‌ಗೆ ಬರೋಬ್ಬರಿ ಹತ್ತು ಲಕ್ಷ ರೂಪಾಯಿಗಳನ್ನು ಪಾವತಿ ಮಾಡಬೇಕು. ಲಿಯೋನೆಲ್ ಮೆಸ್ಸಿ ಅವರ ಫ್ಯಾನ್ಸ್‌ಗೆ ಇದು ಆಘಾತಕಾರಿ ನ್ಯೂಸ್ ಆದರೂ ಸಾಕಷ್ಟು ಅಭಿಮಾನಿಗಳು ಈ ಟಿಕೆಟ್ ಖರೀದಿ ಮಾಡಲು ಮುಗಿ ಬಿದ್ದಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಕೆಲವರು ತಮ್ಮ ಟಿಕೆಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಮೆಸ್ಸಿ ಜೊತೆ ಶೇಕ್ ಹ್ಯಾಂಡ್ ಮಾಡೋ ಜೊತೆಗೆ ಪ್ರತಿ ಆರು ಜನರ ಗುಂಪು ಫೋಟೋ ತೆಗೆಸಿಕೊಳ್ಳಬಹುದು.
ಇದನ್ನೂ ಓದಿ: ಮತ್ತೆ ವೈಭವ್ ಸೂರ್ಯವಂಶಿ ಸಿಡಿಲಬ್ಬರ.. 14 ಸಿಕ್ಸರ್ ಚಚ್ಚಿರೋ ಯಂಗ್ ಓಪನರ್, ದ್ವಿಶತಕ ಮಿಸ್!
ಹತ್ತು ಲಕ್ಷ ಪಾವತಿ ಮಾಡೋ ಅಭಿಮಾನಿಗಳು ಬಳಿಕ ಪಾರ್ಟಿಯಲ್ಲಿ ಪಾಲ್ಗೊಳ್ಳಬಹುದು. ಪಾರ್ಟಿಯಲ್ಲಿ ಉತ್ತಮ ಆಹಾರ ಹಾಗೂ ಪಾನೀಯ ಇರುತ್ತದೆ. ಲಿಯೋನೆಲ್ ಮೆಸ್ಸಿ ಅವರು ಕೇವಲ ಕೋಲ್ಕತ್ತಾಕ್ಕೆ ಮಾತ್ರ ಭೇಟಿ ನೀಡಿ ವಾಪಸ್ ಆಗಲ್ಲ. ಬದಲಿಗೆ ಹೈದ್ರಾಬಾದ್, ಮುಂಬೈ ಹಾಗೂ ದೆಹಲಿಗೆ ಭೇಟಿ ನೀಡಲಿದ್ದಾರೆ. ಇದರಲ್ಲಿ ಪ್ರಧಾನಿ ಮೋದಿ ಸೇರಿದಂತೆ ಗಣ್ಯ ವ್ಯಕ್ತಿಗಳನ್ನು ಮೆಸ್ಸಿ ಅವರು ಭೇಟಿ ಮಾಡಲಿದ್ದಾರೆ.
ಇದನ್ನೂ ಓದಿ: IPL 2026 ಮಿನಿ ಆಕ್ಷನ್‌ಗೆ ಶ್ರೇಯಸ್ ಅಯ್ಯರ್ ಎಂಟ್ರಿ.. ಅಬುಧಾಬಿಗೆ ಪಂಜಾಬ್ ಕಿಂಗ್ಸ್ ಕ್ಯಾಪ್ಟನ್ ಹೋಗ್ತಾರಾ..?









