)
October holiday List: ಅಕ್ಟೋಬರ್ ತಿಂಗಳು ಪ್ರಾರಂಭಗೊಂಡಿದೆ. ಇದನ್ನು ಹಬ್ಬದ ತಿಂಗಳೆಂದೇ ಕರೆಯಬಹುದು. ನವರಾತ್ರಿಯಿಂದ ಹಿಡಿದು, ದೀಪಾವಳಿವರೆಗೆ ಈ ಎಲ್ಲವೂ ಅಕ್ಟೋಬರ್ನಲ್ಲೇ ಆಗಮಿಸಿದೆ. ಹೀಗಿರುವಾಗ ಅನೇಕ ಭಾಗಗಳಲ್ಲಿ ಬ್ಯಾಂಕ್ಗಳು, ಶಾಲೆ ಕಾಲೇಜುಗಳು ಸಹ ಬಂದ್ ಆಗಲಿವೆ. ಆ ಬಗ್ಗೆ ಮಾಹಿತಿ ಪಡೆಯೋಣ.
ಅಕ್ಟೋಬರ್ ೭ ರಂದು ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ಅಕ್ಟೋಬರ್ ೧೭ ರಂದು ಕರ್ವಾ ಚೌತ್ ಇರುವ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ಸರ್ಕಾರಿ ರಜಾದಿನಗಳಾಗಿರುತ್ತವೆ. ಈ ಸಂದರ್ಭದಲ್ಲಿ ಬ್ಯಾಂಕ್ ಸೇರಿದಂತೆ ಶಾಲೆ ಕಾಲೇಜುಗಳು ಸಹ ಬಂದ್ ಆಗುವ ಸಾಧ್ಯತೆ ಇದೆ. ಅದೇ ರೀತಿ, ಅಕ್ಟೋಬರ್ ೨೦ ರಿಂದ ಅಕ್ಟೋಬರ್ ೨೩ ರವರೆಗೆ ದೀಪಾವಳಿ ಸಡಗರ ಮನೆ ಮಾಡಲಿದೆ.
ನರಕ ಚತುರ್ದಶಿ, ಲಕ್ಷ್ಮಿ ಪೂಜೆ ಮತ್ತು ಭಾಯಿ ದೂಜ್ ನಂತಹ ಹಲವಾರು ದೀಪಾವಳಿ ಸಂಬಂಧಿತ ದಿನಗಳಲ್ಲಿ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್ ಸೇರಿದಂತೆ ಸರ್ಕಾರಿ ಕಚೇರಿ, ಶಾಲೆಗಳು ಸಹ ಬಂದ್ ಆಗಿರುತ್ತವೆ. ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ಉತ್ತರ ಭಾರತದ ರಾಜ್ಯಗಳಲ್ಲಿ, ವಿಶೇಷವಾಗಿ ಛತ್ ಪೂಜೆಯ ಕಾರಣ, ಅಕ್ಟೋಬರ್ ೨೭ ಮತ್ತು ಅಕ್ಟೋಬರ್ ೨೮ ರಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಪಶ್ಚಿಮ ಬಂಗಾಳ, ಗುಜರಾತ್ ಮತ್ತು ದೆಹಲಿಯಂತಹ ರಾಜ್ಯಗಳು ದೀಪಾವಳಿಗೆ ಹೆಚ್ಚುವರಿ ರಜಾದಿನಗಳು ಇರುತ್ತವೆ.
ರಾಜ್ಯವಾರು ನೋಡುವುದಾದರೆ, ಬಿಹಾರ, ಜಾರ್ಖಂಡ್, ಒಡಿಶಾ, ಕರ್ನಾಟಕ, ಕೇರಳ, ಮೇಘಾಲಯ, ನಾಗಾಲ್ಯಾಂಡ್, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮುಂತಾದ ರಾಜ್ಯಗಳಲ್ಲಿ ನವರಾತ್ರಿ ಮತ್ತು ದಸರಾದಂದು ಬ್ಯಾಂಕ್ಗಳಿಗೆ ವಿಶೇಷ ರಜೆ ಇತ್ತು. ಇದೀಗ ದೀಪಾವಳಿ ಹಬ್ಬದ ಸಂದರ್ಭದಲ್ಲಿಯೂ ಹೆಚ್ಚುವರಿ ರಜೆಗಳನ್ನು ನೀಡಲಾಗುತ್ತಿದೆ. ಸುವುದಿಲ್ಲ.
ಅಕ್ಟೋಬರ್ 2025 ರಲ್ಲಿ ಬ್ಯಾಂಕ್ ರಜಾದಿನಗಳ ದಿನಾಂಕಗಳು ರಾಜ್ಯವಾರು ಈ ಕೆಳಗಿನಂತಿವೆ.
ಹಬ್ಬದ ರಜಾದಿನಗಳನ್ನು ಹೊರತುಪಡಿಸಿ, ಎಲ್ಲಾ ಬ್ಯಾಂಕುಗಳು ಅಕ್ಟೋಬರ್ 5, 12, 19, 26 (ಭಾನುವಾರಗಳು) ಮತ್ತು ಅಕ್ಟೋಬರ್ 11, 25 (ಎರಡನೇ ಮತ್ತು ನಾಲ್ಕನೇ ಶನಿವಾರಗಳು) ಮುಚ್ಚಲ್ಪಡುತ್ತವೆ.