Axiom Mission 4 Launch LIVE Updates: ಬಾಹ್ಯಾಕಾಶದತ್ತ ಭಾರತೀಯ ಶುಭಾಂಶು ಶುಕ್ಲಾ ಐತಿಹಾಸಿಕ ಪಯಣ ಶುರು

 Axiom Mission 4 Launch LIVE Updates: ನಾಸಾ ಮತ್ತು ಸ್ಪೇಸ್‌ಎಕ್ಸ್‌ ಸಹಯೋಗದಲ್ಲಿ ಅಮೆರಿಕದ ಫ್ಲೋರಿಡಾದಿಂದ ʼಆಕ್ಸಿಯಮ್-4 ಮಿಷನ್ʼ ಮೂಲಕ ಅವರು ತಮ್ಮ ಐತಿಹಾಸಿಕ ಪಯಣವನ್ನ ಶುರು ಮಾಡಲಿದ್ದಾರೆ. ಇದು ಭಾರತೀಯ ಬಾಹ್ಯಾಕಾಶ ಯಾನದಲ್ಲಿ ಮತ್ತೊಂದು ಮೈಲಿಗಲ್ಲಾಗಿದೆ. ಕೋಟ್ಯಂತರ ಭಾರತೀಯರ ಕನಸು ಇಂದು ನನಸಾಗುತ್ತಿದೆ. 

Written by - Puttaraj K Alur | Last Updated : Jun 25, 2025, 01:21 PM IST
Axiom Mission 4 Launch LIVE Updates: ಬಾಹ್ಯಾಕಾಶದತ್ತ ಭಾರತೀಯ ಶುಭಾಂಶು ಶುಕ್ಲಾ ಐತಿಹಾಸಿಕ ಪಯಣ ಶುರು
Live Blog

Axiom 4 Live Updates: ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಹೊಸದೊಂದು ಅಧ್ಯಾಯ ಆರಂಭವಾಗುತ್ತಿದೆ. ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್‌ ಹಾಗೂ ಗಗನಯಾತ್ರಿ ಶುಭಾಂಶು ಶುಕ್ಲಾ ಇದೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ತಮ್ಮ ಐತಿಹಾಸಿಕ ಪಯಣವನ್ನ ಆರಂಭಿಸುತ್ತಿದ್ದಾರೆ. ನಾಸಾ ಮತ್ತು ಸ್ಪೇಸ್‌ಎಕ್ಸ್‌ ಸಹಯೋಗದಲ್ಲಿ ಅಮೆರಿಕದ ಫ್ಲೋರಿಡಾದಿಂದ ʼಆಕ್ಸಿಯಮ್-4 ಮಿಷನ್ʼ ಮೂಲಕ ಅವರು ತಮ್ಮ ಐತಿಹಾಸಿಕ ಪಯಣವನ್ನ ಶುರು ಮಾಡಲಿದ್ದಾರೆ. ಇದು ಭಾರತೀಯ ಬಾಹ್ಯಾಕಾಶ ಯಾನದಲ್ಲಿ ಮತ್ತೊಂದು ಮೈಲಿಗಲ್ಲಾಗಿದೆ. ಕೋಟ್ಯಂತರ ಭಾರತೀಯರ ಕನಸು ಇಂದು ನನಸಾಗುತ್ತಿದೆ. ರಾಕೇಶ್‌ ಶರ್ಮಾ ಬಳಿಕ ಬಾಹ್ಯಾಕಾಶಕ್ಕೆ ತೆರಳುತ್ತಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಶುಭಾಂಶು ಶುಕ್ಲಾ ಪಾತ್ರರಾಗುತ್ತಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುತ್ತಿರುವ ಮೊದಲ ಭಾರತೀಯನಾಗಿ ಅವರು ಹೊಸ ಇತಿಹಾಸವನ್ನು ಸೃಷ್ಟಿಸಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

 

25 June, 2025

  • 25 June, 2025 13:19 PM

    Axiom Mission 4 Launch LIVE Updates: ʼನನ್ನ ಹೆಗಲ ಮೇಲೆ ತ್ರಿವರ್ಣ ಧ್ವಜವಿದೆʼ

    'ಆ್ಯಕ್ಸಿಯಂ-4' ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಇಂದು (ಜೂನ್ 25) ಮಧ್ಯಾಹ್ನ 12.01ಕ್ಕೆ (ಭಾರತೀಯ ಕಾಲಮಾನ) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಮೂಲಕ ಅಂತರಿಕ್ಷಯಾನ ಕೈಗೊಂಡಿರುವ ಭಾರತದ ಎರಡನೇ ಗಗನಯಾನಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

    1984ರಲ್ಲಿ ಭಾರತದ ರಾಕೇಶ್ ಶರ್ಮಾ ಅವರು ರಷ್ಯಾದ ಗಗನನೌಕೆಯಲ್ಲಿ ಗಗನಯಾನ ಕೈಗೊಂಡಿದ್ದರು. 41 ವರ್ಷಗಳ ಬಳಿಕ ಇದೀಗ ಭಾರತದ ಮತ್ತೊಬ್ಬ ಗಗನಯಾನಿ ಬಾಹ್ಯಾಕಾಶಕ್ಕೆ ತೆರಳಿದಂತಾಗಿದೆ. ಸ್ಪೇಸ್‌ಎಕ್ಸ್‌ನ 'ಫಾಲ್ಕನ್-9' ರಾಕೆಟ್ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಯಶಸ್ವಿಯಾಗಿ ಚಿಮ್ಮಿತು. ಈ ಸಂದರ್ಭದಲ್ಲಿ ವಿಶೇಷ ಸಂದೇಶ ತಿಳಿಸಿರುವ ಶುಭಾಂಶು ಶುಕ್ಲಾ, 'ನಮಸ್ಕಾರ ದೇಶದ ಜನರೇ, 41 ವರ್ಷಗಳ ನಂತರ ನಾವು ಬಾಹ್ಯಾಕಾಶ ತಲುಪುತ್ತಿದ್ದೇವೆ. ನನ್ನ ಹೆಗಲ ಮೇಲೆ ತ್ರಿವರ್ಣ ಧ್ವಜವಿದೆ. ತ್ರಿವರ್ಣ ಧ್ವಜವು ನಾವು ನಿಮ್ಮೆಲ್ಲರೊಂದಿಗೆ ಇದ್ದೇನೆಂಬ ಸಂದೇಶವನ್ನ ಸಾರುತ್ತದೆ. ಇದು ISSಗೆ ನನ್ನ ಪ್ರಯಾಣದ ಆರಂಭ ಮಾತ್ರವಲ್ಲ. ಭಾರತದ ಮಾನವಸಹಿತ ಅಂತರಿಕ್ಷಯಾನದ ಪ್ರಾರಂಭವೂ ಆಗಿದೆ. ನಾವು ಭೂಮಿಯ ಸುತ್ತ ಸೆಕೆಂಡಿಗೆ 7.5 KM ವೇಗದಲ್ಲಿ ಸುತ್ತುತ್ತಿದ್ದೇವೆ' ಎಂದು 
    ಹೇಳಿದ್ದಾರೆ.

     

    form.twitter.com/widgets.js" charset="utf-8">

  • 25 June, 2025 13:05 PM

    Axiom Mission 4 Launch LIVE Updates: 41 ವರ್ಷಗಳ ಬಳಿಕ ಶುಭಾಂಶು ಶುಕ್ಲಾ ಅಂತರಿಕ್ಷಯಾನ 

    'ಆ್ಯಕ್ಸಿಯಂ-4' ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಇಂದು (ಜೂನ್ 25) ಮಧ್ಯಾಹ್ನ 12.01ಕ್ಕೆ (ಭಾರತೀಯ ಕಾಲಮಾನ) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಪ್ರಯಾಣ ಬೆಳೆಸಿದ್ದಾರೆ. ಶುಭಾಂಶು ಅಲ್ಲದೆ ಹಂಗರಿ ಮತ್ತು ಪೋಲೆಂಡ್‌ನ ಗಗನಯಾತ್ರಿಗಳಿರುವ ಗಗನನೌಕೆಯನ್ನು ಹೊತ್ತ ಸ್ಪೇಸ್‌ಎಕ್ಸ್‌ನ 'ಫಾಲ್ಕನ್-9' ರಾಕೆಟ್ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮಿದೆ. ಗಗನಯಾತ್ರಿ ಶುಭಾಂಶು ಶುಕ್ಲಾಅಂತರಿಕ್ಷಯಾನ ಕೈಗೊಂಡ ಎರಡನೇ ಭಾರತೀಯ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 1984ರಲ್ಲಿ ಭಾರತದ ರಾಕೇಶ್ ಶರ್ಮಾ ರಷ್ಯಾದ ಗಗನನೌಕೆಯಲ್ಲಿ ಗಗನಯಾನ ಕೈಗೊಂಡಿದ್ದರು. ಅದಾದ 41 ವರ್ಷಗಳ ಬಳಿಕ ಶುಕ್ಲಾ ಅಂತರಿಕ್ಷಯಾನ ಕೈಗೊಂಡಿದ್ದಾರೆ.

  • 25 June, 2025 12:55 PM

    Axiom Mission 4 Launch LIVE Updates:'ಆ್ಯಕ್ಸಿಯಂ-4' ಅಂತರಿಕ್ಷ ಕಾರ್ಯಕ್ರಮ

    'ಆ್ಯಕ್ಸಿಯಂ-4' ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಇಂದು (ಜೂನ್ 25) ಮಧ್ಯಾಹ್ನ 12.01ಕ್ಕೆ (ಭಾರತೀಯ ಕಾಲಮಾನ) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಪ್ರಯಾಣ ಬೆಳೆಸುವರು ಎಂದು ನಾಸಾ ಮಂಗಳವಾರ ತಿಳಿಸಿತ್ತು.

  • 25 June, 2025 12:53 PM

    Axiom Mission 4 Launch LIVE Updates: ಒಟ್ಟು ಆರು ಬಾರಿ ಮುಂದೂಡಲಾಗಿತ್ತು

    ಭಾರತೀಯ ಶುಭಾಂಶು ಶುಕ್ಲಾ ಅಲ್ಲದೆ, ಹಂಗರಿ ಮತ್ತು ಪೋಲೆಂಡ್‌ನ ಗಗನಯಾತ್ರಿಗಳಿರುವ ಗಗನನೌಕೆಯನ್ನು ಹೊತ್ತ ಸ್ಪೇಸ್‌ಎಕ್ಸ್‌ನ 'ಫಾಲ್ಕನ್-9' ರಾಕೆಟ್ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮಿದೆ. 'ನಾಸಾ, ಆ್ಯಕ್ಸಿಯಂ ಸ್ಪೇಸ್ ಹಾಗೂ ಇಲಾನ್ ಮಸ್ಕ್ ಒಡೆತನ ಸ್ಪೇಸ್‌ಸ್ಎಕ್ಸ್ ಜಂಟಿಯಾಗಿ ಈ ಬಾಹ್ಯಾಕಾಶ ಕಾರ್ಯಕ್ರಮವನ್ನ ರೂಪಿಸಿವೆ. ವಿವಿಧ ಕಾರಣಗಳಿಗಾಗಿ ಒಟ್ಟು ಆರು ಬಾರಿ ಈ ಬಾಹ್ಯಾಕಾಶ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಕಮಾಂಡರ್ ಪೆಗ್ಗಿ ವಿಟ್ಸನ್ ನೇತೃತ್ವದಲ್ಲಿ ಶುಕ್ಲಾ, ಹಂಗರಿಯ ಟಿಬೊರ್ ಕಾಪು, ಪೋಲೆಂಡ್‌ನ ಸ್ಲಾವೋಜ್ ವಿಸ್‌ನೀವ್‌ಸ್ಕಿ ಕೂಡ ISSಗೆ ತೆರಳಲಿದ್ದಾರೆ.

  • 25 June, 2025 12:34 PM

    Axiom Mission 4 Launch LIVE Updates: ಪುತ್ರನ ಸಾಧನೆಗೆ ಭಾವುಕರಾದ ತಾಯಿ 

    ಐಎಎಫ್ ಗ್ರೂಪ್ ಕ್ಯಾಪ್ಟನ್ ಮತ್ತು ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ತಾಯಿ ಆಶಾ ಶುಕ್ಲಾ ಅವರು #AxiomMission4ನ ಭಾಗವಾಗಿರುವ ತಮ್ಮ ಮಗನ ಸಾಧನೆ ಕಂಡು ಭಾವುಕರಾದರು.

  • 25 June, 2025 12:33 PM

    Axiom Mission 4 Launch LIVE Updates: ಆಕ್ಸಿಯಮ್ 4ರ ಸಿಬ್ಬಂದಿ ಬಾಹ್ಯಾಕಾಶ ನಿಲ್ದಾಣಕ್ಕೆ ಯಾವಾಗ ಇಳಿಯುತ್ತಾರೆ?

    ಎಲ್ಲವೂ ಯೋಜಿಸಿದಂತೆ ನಡೆದರೆ ಗುರುವಾರ ಬೆಳಗ್ಗೆ ಆಕ್ಸಿಯಮ್ 4ರ ಸಿಬ್ಬಂದಿಯನ್ನು ಬಾಹ್ಯಾಕಾಶ ಪ್ರಯೋಗಾಲಯದ ಏಳು ಪ್ರಸ್ತುತ ನಿವಾಸಿಗಳು ಅಂದರೆ ಮೂವರು ಅಮೇರಿಕನ್ ಗಗನಯಾತ್ರಿಗಳು, ಒಬ್ಬ ಜಪಾನಿನ ಗಗನಯಾತ್ರಿ ಮತ್ತು ಮೂವರು ರಷ್ಯಾದ ಗಗನಯಾತ್ರಿಗಳು ಸ್ವಾಗತಿಸುತ್ತಾರೆ.

  • 25 June, 2025 12:30 PM

    Axiom Mission 4 Launch LIVE Updates: Axiom 4 Mission ಯಶಸ್ವಿ ಉಡಾವಣೆ

    ಅಮೆರಿಕದ ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ #Axiom4Mission ಯಶಸ್ವಿಯಾಗಿ ಉಡಾವಣೆಯಾಗಿದೆ. ಈ ಕಾರ್ಯಾಚರಣೆಯನ್ನು ಭಾರತದ IAF ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಪೈಲಟ್ ಮಾಡುತ್ತಿದ್ದಾರೆ. ಇವರು ಸೇರಿದಂತೆ ನಾಲ್ಕು ಜನ ಸಿಬ್ಬಂದಿ ಕಂಪನಿಯ ಫಾಲ್ಕನ್ 9 ರಾಕೆಟ್‌ನಲ್ಲಿ ಹೊಸ SpaceX ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಪ್ರಯಾಣಿಸುತ್ತಿದ್ದಾರೆ.

    ಈ ಕಾರ್ಯಾಚರಣೆಯನ್ನು ಅಮೆರಿಕದ ಕಮಾಂಡರ್ ಪೆಗ್ಗಿ ವಿಟ್ಸನ್ ನೇತೃತ್ವ ವಹಿಸಿದ್ದಾರೆ, ಭಾರತದ IAF ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮಿಷನ್ ಪೈಲಟ್ ಆಗಿ ಮತ್ತು ಹಂಗೇರಿಯನ್ ಗಗನಯಾತ್ರಿ ಟಿಬೋರ್ ಕಾಪು ಮತ್ತು ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿವ್ಸ್ಕಿ ಮಿಷನ್ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

  • 25 June, 2025 12:24 PM

    Axiom Mission 4 Launch LIVE Updates: ಆಕ್ಸಿಯಮ್ ಮಿಷನ್‌ನ 2ನೇ ಹಂತ ಪ್ರಾರಂಭ

    ಆಕ್ಸಿಯಮ್ ಕಾರ್ಯಾಚರಣೆಯ ಎರಡನೇ ಹಂತವನ್ನು ಸಕ್ರಿಯಗೊಳಿಸಲಾಗಿದೆ ಎಂದು ನಾಸಾ ಹೇಳಿದೆ. ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ (SpaceX) ತನ್ನ ಟ್ವಿಟರ್‌ ಖಾತೆಯಲ್ಲಿ ಆಕ್ಸಿಯಮ್ ಮಿಷನ್ 4ರ ಉಡಾವಣೆಯ ವಿಡಿಯೋವನ್ನ ಹಂಚಿಕೊಂಡಿದೆ. 

  • 25 June, 2025 12:20 PM

    Axiom Mission 4 Launch LIVE Updates: ಶುಭಾಂಶು ಶುಕ್ಲಾ ಅವರ ಬಾಹ್ಯಾಕಾಶ ನೌಕೆ ಹಾರಾಟ ನಡೆಸಿತು

    ಶುಭಾಂಶು ಶುಕ್ಲಾ ಅವರ ಬಾಹ್ಯಾಕಾಶ ನೌಕೆ ಭಾರತೀಯ ಸಮಯ ಮಧ್ಯರಾತ್ರಿ 12:01ಕ್ಕೆ ಯಶಸ್ವಿಯಾಗಿ ಉಡಾವಣೆಯಾಯಿತು. ಹಲವಾರು ಅಡೆತಡೆಗಳ ನಡುವೆ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶಕ್ಕೆ ತೆರಳಿದ್ದಾರೆ. ಫಾಲ್ಕನ್ 9 ಆಕ್ಸಿಯಮ್-4 ಯಶಸ್ವಿಯಾಗಿ ನಭಕ್ಕೆ ಹಾರಿದೆ.

     

  • 25 June, 2025 12:19 PM

    Axiom Mission 4 Launch LIVE Updates: 140 ಕೋಟಿ ಭಾರತೀಯರಿಗೆ ಹೆಮ್ಮೆಯ ವಿಷಯ  

    ಆಕ್ಸಿಯಮ್ -4 ಮಿಷನ್ ಉಡಾವಣೆಯ ಬಗ್ಗೆ ಮಾತನಾಡಿದ ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಡಾ.ಬಿ.ಆರ್.ಗುರುಪ್ರಸಾದ್, ʼಇದು 140 ಕೋಟಿ ಭಾರತೀಯರಿಗೆ ಬಹಳ ಮಹತ್ವದ್ದಾಗಿದೆ. ಇದು ನಮಗೆ ಹೆಮ್ಮೆ, ಸಂತೋಷ ಮತ್ತು ಉತ್ಸಾಹದ ವಿಷಯವಾಗಿದೆ. ಏಕೆಂದರೆ ನಮ್ಮ ದೇಶದ ಶುಭಾಂಶು ಶುಕ್ಲಾ ಈ ಕಾರ್ಯಾಚರಣೆಯಲ್ಲಿ ಪೈಲಟ್ ಆಗಿದ್ದಾರೆ. ಈ ಮಿಷನ್‌ನ ಕಮಾಂಡರ್ ಪೆಗ್ಗಿ ವಿಟ್ಸನ್, ನಾಸಾದಲ್ಲಿ ವ್ಯಾಪಕ ಅನುಭವ ಹೊಂದಿರುವ ಮಹಿಳೆ. ಈಗ ಖಾಸಗಿ ಕಂಪನಿಯಾದ ಆಕ್ಸಿಯೋಮ್ -4ನಲ್ಲಿ ಮಾನವ ಬಾಹ್ಯಾಕಾಶ ಹಾರಾಟ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತರ ಇಬ್ಬರು ಸಿಬ್ಬಂದಿ ಸದಸ್ಯರಾದ ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಇಬ್ಬರೂ ಮಿಷನ್ ತಜ್ಞರು. ಅಂದರೆ ಅವರು ಪ್ರಯೋಗಗಳನ್ನು ಮಾಡುತ್ತಾರೆ. ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಸ್ವಯಂಚಾಲಿತವಾಗಿದ್ದರೂ, ಪೈಲಟ್ ಮತ್ತು ಕಮಾಂಡರ್ ಅನೇಕ ಜವಾಬ್ದಾರಿಗಳನ್ನು ಹೊಂದಿದ್ದಾರೆ...ʼ ಎಂದು ಹೇಳಿದ್ದಾರೆ.

  • 25 June, 2025 12:15 PM

    Axiom Mission 4 Launch LIVE Updates: ಪುತ್ರನ ಸಾಧನೆ ಬಗ್ಗೆ ಅಪ್ಪನ ಹೆಮ್ಮೆಯ ಮಾತುಗಳು  

    Axiom Mission 4 ಬಗ್ಗೆ ಮಾತನಾಡಿದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರ ತಂದೆ ಶಂಭು ದಯಾಳ್ ಶುಕ್ಲಾ ಅವರು ಮಗನ ಐತಿಹಾಸಿಕ ಸಾಧನೆಯ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ʼಇದು ನಮಗೆ ತುಂಬಾ ಸಂತೋಷವನ್ನು ತಂದಿದೆ. ನಾನು ಶುಭಾಂಶು ತಂದೆಯಾಗಿರುವುದು ತುಂಬಾ ಹೆಮ್ಮೆಯನ್ನು ತಂದಿದೆ. ಇದು ನನ್ನ ಜೀವನದ ಅತ್ಯಂತ ಸಂತೋಷದಾಯಕ ದಿನ...ʼ ಎಂದು ಹೇಳಿದ್ದಾರೆ.

  • 25 June, 2025 12:11 PM

    Axiom Mission 4 Launch LIVE Updates: ಪ್ರಧಾನಿ ಮೋದಿ ಜೊತೆಗೆ ಶುಭಾಂಶು ಶುಕ್ಲಾ ಮಾತು

    ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುವ ಮೂಲಕ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ರಾಷ್ಟ್ರೀಯ ಹೆಮ್ಮೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದಾರೆ. ISSನಿಂದಲೇ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. 

     

  • 25 June, 2025 12:07 PM

    Axiom Mission 4 Launch LIVE Updates: ಎಷ್ಟು ಜನರ ISSಗೆ ಹೋಗಲಿದ್ದಾರೆ?

    ಆಕ್ಸಿಯಮ್ ಮಿಷನ್ ಅಡಿಯಲ್ಲಿ ನಾಲ್ವರು ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ಕ್ಕೆ ಹೋಗಲಿದ್ದಾರೆ. ಇದರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಗಗನಯಾತ್ರಿ ಶುಭಾಂಶು ಶುಕ್ಲಾ ಪೈಲಟ್ ಆಗಿ ಕೆಲಸ ಮಾಡಲಿದ್ದಾರೆ, ಮಾಜಿ ನಾಸಾ ಗಗನಯಾತ್ರಿ ಮತ್ತು ಆಕ್ಸಿಯಮ್ ಸ್ಪೇಸ್‌ನಲ್ಲಿ ಮಾನವ ಬಾಹ್ಯಾಕಾಶ ಹಾರಾಟದ ನಿರ್ದೇಶಕಿ ಪೆಗ್ಗಿ ವಿಟ್ಸನ್ ಈ ಕಾರ್ಯಾಚರಣೆಯನ್ನು ಮುನ್ನಡೆಸಲಿದ್ದಾರೆ, ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಯೋಜನೆಯ ಗಗನಯಾತ್ರಿ ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿವ್ಸ್ಕಿ ಮತ್ತು ಹಂಗೇರಿಯನ್ ಗಗನಯಾತ್ರಿ ಟಿಬೋರ್ ಕಾಪು ಇಬ್ಬರೂ ಮಿಷನ್ ತಜ್ಞರಾಗಿ ಕೆಲಸ ಮಾಡಲಿದ್ದಾರೆ.

     

Trending News