Kedarnath Plane Crash Live Updates: ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನ: ಪೈಲಟ್ ಸೇರಿ 7 ಮಂದಿ ದುರ್ಮರಣ!

Helicopter crash in kedarnath Live Updates: ಗೌರಿಕುಂಡ್‌ದ ಬಳಿ ಭಾನುವಾರ ಬೆಳಗಿನ ಜಾವ 5.30ರ ವೇಳೆಗೆ ಹೆಲಿಕಾಪ್ಟರ್ ಪತವಾಗಿದೆ ಎನ್ನಲಾಗಿದೆ. ಹವಾಮಾನ ವೈಪರೀತ್ಯದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.

Written by - Puttaraj K Alur | Last Updated : Jun 15, 2025, 04:38 PM IST
Kedarnath Plane Crash Live Updates: ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನ: ಪೈಲಟ್ ಸೇರಿ 7 ಮಂದಿ ದುರ್ಮರಣ!
Live Blog

Kedarnath Plane Crash Live Updates: ಉತ್ತರಾಖಂಡದ ಡೆಹ್ರಾಡೂನ್‌ನಿಂದ ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್‌ವೊಂದು ಗೌರಿಕುಂಡದ ಬಳಿ ಪತನಗೊಂಡದ್ದು, ದುರ್ಘಟನೆಯಲ್ಲಿ ಪೈಲಟ್ ಸೇರಿ 7 ಮಂದಿ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.  ಅಹಮದಾಬಾದ್‌ ಭೀಕರ ವಿಮಾನ ದುರಂತದ ಘಟನೆ ಮಾಸುವ ಮುನ್ನವೇ ಕೇದಾರನಾಥದಲ್ಲಿ ಹೆಲಿಕಾಪ್ಟರ್‌ ದುರ್ಘಟನೆ ಸಂಭವಿಸಿದೆ. ದೇವರ ದರ್ಶನಕ್ಕೆಂದು ಹೋಗುತ್ತಿದ್ದ ಭಕ್ತರು ಮಸಣ ಸೇರಿದ್ದಾರೆ. ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಗುರುವಾರ ಮಧ್ಯಾಹ್ನ ಪತನಗೊಂಡು ಒಟ್ಟು 270ಕ್ಕೂ ಹೆಚ್ಚು ಜನರು ದುರಂತ ಸಾವನ್ನಪ್ಪಿದ್ದರು. ಈ ಘಟನೆಯ ಬೆನ್ನಲ್ಲೇ ಮತ್ತೊಂದು ದುರ್ಘಟನೆ ಸಂಭವಿಸಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

15 June, 2025

  • 15 June, 2025 16:37 PM

    Kedarnath Plane Crash Live Updates: ಸಾವನ್ನಪ್ಪಿದವರ ಗುರುತು ಪತ್ತೆ 

    ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನದ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಗುರುತುಗಳು ಪತ್ತೆಯಾಗಿವೆ. ಮೃತರನ್ನು ಕ್ಯಾಪ್ಟನ್ ರಾಜಬೀರ್ ಸಿಂಗ್ ಚೌಹಾಣ್ (39), ಜೈಪುರ ನಿವಾಸಿ ವಿಕ್ರಮ್ ರಾವತ್ (47), ಬದರಿನಾಥ-ಕೇದಾರನಾಥ ದೇವಸ್ಥಾನ ಸಮಿತಿ (BKTC) ಉದ್ಯೋಗಿ ಉತ್ತರ ಪ್ರದೇಶದ ನಿವಾಸಿಗಳಾದ ವಿನೋದ್ ದೇವಿ (66), ತೃಷ್ಟಿ ಸಿಂಗ್ (19), ಮಹಾರಾಷ್ಟ್ರದ ಯವತ್ಮಾಲ್‌ನ 41 ವರ್ಷದ ರಾಜ್‌ಕುಮಾರ್ ಸುರೇಶ್ ಜೈಸ್ವಾಲ್, ಅವರ ಪತ್ನಿ ಶ್ರದ್ಧಾ ಜೈಸ್ವಾಲ್ ಮತ್ತು ಅವರ 23 ತಿಂಗಳ ಪುತ್ರಿ ಕಾಶಿ ರಾಜ್‌ಕುಮಾರ್ ಜೈಸ್ವಾಲ್ ಎಂದು ಗುರುತಿಸಲಾಗಿದೆ.
     

  • 15 June, 2025 16:30 PM

    Kedarnath Plane Crash Live Updates: ಸುಟ್ಟು ಕರಕಲಾಗಿರುವ ಶವಗಳ  ಡಿಎನ್‌ಎ ಪರೀಕ್ಷೆ

    ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನವಾಗಿದ್ದು, ಪೈಲಟ್ ಸೇರಿ 7 ಮಂದಿ ದುರ್ಮರಣ ಹೊಂದಿದ್ದಾರೆ. ಈ ದುರ್ಘಟನೆಯಲ್ಲಿ ಸುಟ್ಟು ಕರಕಲಾದ ಶವಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಕುಟುಂಬಗಳಿಗೆ ಹಸ್ತಾಂತರಿಸುವ ಮೊದಲು ಡಿಎನ್‌ಎ ಪರೀಕ್ಷೆ ನಡೆಸಲಾಗುವುದು ಎಂದು ಇನ್ಸ್‌ಪೆಕ್ಟರ್ ಜನರಲ್ ರಾಜೀವ್ ಸ್ವರೂಪ್ ಹೇಳಿದ್ದಾರೆ.
     

  • 15 June, 2025 12:42 PM

    Kedarnath Plane Crash Live Updates: ತಾತ್ಕಾಲಿಕವಾಗಿ ಹೆಲಿಕಾಪ್ಟರ್‌‌ ಸೇವೆ ಬಂದ್

    ಕೆಟ್ಟ ಹವಾಮಾನದಿಂದ ಇಂದು ಬೆಳಗ್ಗೆ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರಿಗಾಗಿ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ತಕ್ಷಣವೇ ತುರ್ತು ಸಭೆ ಕರೆಯಲಾಗಿದ್ದು, ನಮ್ಮ ಡಿಜಿಸಿಎ (ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ) ನಿಯಮಗಳನ್ನು ಉಲ್ಲಂಘಿಸಬಾರದು ಮತ್ತು ಮೇಲಿನ ಹಿಮಾಲಯ ಪ್ರದೇಶಗಳಲ್ಲಿ ಹಾರುವ ಪೈಲಟ್‌ಗಳು ಈ ಪ್ರದೇಶದ ಅನುಭವವನ್ನು ಹೊಂದಿರಬೇಕು ಎಂದು ಸೂಚನೆಗಳನ್ನು ನೀಡಲಾಗಿದೆ. ವಿಮಾನಯಾನ ಕಂಪನಿಗಳು ಸಹ ಇದನ್ನು ಖಚಿತಪಡಿಸಿಕೊಳ್ಳಬೇಕು. ನಿಯಂತ್ರಣ ಮತ್ತು ಕಮಾಂಡ್ ಕೇಂದ್ರವನ್ನು ಸ್ಥಾಪಿಸಬೇಕು. ಈ ಅಪಘಾತದ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು... ಹೆಲಿಕಾಪ್ಟರ್ ಸೇವೆಗಳು ಇಂದು ಅಥವಾ ನಾಳೆ ಇರುವುದಿಲ್ಲ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವವರೆಗೆ ಈ ಸೇವೆಗಳನ್ನ ತಾತ್ಕಾಲಿಕವಾಗಿ ಬಂದ್‌ ಮಾಡಲಾಗುತ್ತಿದೆʼ ಎಂದು ಉತ್ತರಾಖಂಡ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಹೇಳಿದ್ದಾರೆ.  
     

  • 15 June, 2025 12:41 PM

    Kedarnath Plane Crash Live Updates: ಸಿಎಂ ಪುಷ್ಕರ್‌ ಸಿಂಗ್ ಧಾಮಿ ಸಂತಾಪ ‌

    ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನವಾಗಿ ಪೈಲಟ್ ಸೇರಿ 7 ಮಂದಿ ಸಾವನ್ನಪ್ಪಿರುವ ಘಟನೆಗೆ ಉತ್ತರಾಖಂಡ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ʼರುದ್ರಪ್ರಯಾಗ ಜಿಲ್ಲೆಯಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದ ಬಗ್ಗೆ ತುಂಬಾ ದುಃಖಕರ ಸುದ್ದಿ ಬಂದಿದೆ. ಎಸ್‌ಡಿಆರ್‌ಎಫ್, ಸ್ಥಳೀಯ ಆಡಳಿತ ಮತ್ತು ಇತರ ರಕ್ಷಣಾ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಎಲ್ಲಾ ಪ್ರಯಾಣಿಕರ ಸುರಕ್ಷತೆಗಾಗಿ ನಾನು ಬಾಬಾ ಕೇದಾರರನ್ನು ಪ್ರಾರ್ಥಿಸುತ್ತೇನೆʼ ಎಂದು ಹೇಳಿದ್ದಾರೆ.

  • 15 June, 2025 12:35 PM

    Kedarnath Plane Crash Live Updates: ಸಿಎಂ ಪುಷ್ಕರ್ ಸಿಂಗ್ ಧಾಮಿ ಉನ್ನತ ಮಟ್ಟದ ಸಭೆ

    ಕೇದಾರನಾಥ-ಗೌರಿಕುಂಡ್ ಬಳಿ ಹೆಲಿಕಾಪ್ಟರ್ ಅಪಘಾತದ ನಂತರ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಸಿಎಂ ನಿವಾಸದಿಂದ ಹಿರಿಯ ಅಧಿಕಾರಿಗಳೊಂದಿಗೆ ವರ್ಚುವಲ್ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ರಾಜ್ಯ ಮುಖ್ಯ ಕಾರ್ಯದರ್ಶಿ, ವಿಪತ್ತು ನಿರ್ವಹಣಾ ಕಾರ್ಯದರ್ಶಿ, ಯುಸಿಡಿಎ ಸಿಇಒ, ಗರ್ವಾಲ್ ಆಯುಕ್ತರು ಮತ್ತು ಇತರ ಹಿರಿಯ ಅಧಿಕಾರಿಗಳು ಉನ್ನತ ಮಟ್ಟದ ಸಭೆಯಲ್ಲಿ ಹಾಜರಿದ್ದರು.
     

  • 15 June, 2025 12:33 PM

    Kedarnath Plane Crash Live Updates: ದುರ್ಗಮ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ

    ಭಾನುವಾರ ಕೇದಾರನಾಥದಿಂದ ಗುಪ್ತಕಾಶಿಗೆ ಹಾರಾಟ ನಡೆಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಈ ಹೆಲಿಕಾಪ್ಟರ್‌ನಲ್ಲಿ ಒಟ್ಟು 7 ಜನರಿದ್ದರು, ಎಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎಸ್‌ಡಿಆರ್‌ಎಫ್ ಕಮಾಂಡರ್ ಅರ್ಪಣ್ ಯಾದವ್ ಅವರ ನಿರ್ದೇಶನದ ಮೇರೆಗೆ ರಕ್ಷಣಾ ತಂಡಗಳನ್ನು ತಕ್ಷಣವೇ ರವಾನಿಸಲಾಯಿತು. ಘಟನಾ ಸ್ಥಳವು ಅತ್ಯಂತ ದುರ್ಗಮ ಮತ್ತು ದಟ್ಟವಾದ ಅರಣ್ಯ ಪ್ರದೇಶದಲ್ಲಿದ್ದು, ಅಲ್ಲಿ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮತ್ತು ಸ್ಥಳೀಯ ಪೊಲೀಸರ ಜಂಟಿ ತಂಡಗಳು ತ್ವರಿತ ಮತ್ತು ಸಂಘಟಿತ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ.

  • 15 June, 2025 12:32 PM

    Kedarnath Plane Crash Live Updates: ಬಿಕೆಟಿಸಿ ಉದ್ಯೋಗಿ ವಿಕ್ರಮ್ ರಾವತ್ ನಿಧನ

    ಉತ್ತರಾಖಂಡ ಹೆಲಿಕಾಪ್ಟರ್ ಅಪಘಾತದಲ್ಲಿ 47 ವರ್ಷದ ಬಿಕೆಟಿಸಿ ಉದ್ಯೋಗಿ ವಿಕ್ರಮ್ ರಾವತ್ ನಿಧನರಾದರು. ದೇವಾಲಯ ಸಮಿತಿಯ ಎಲ್ಲಾ ಕಚೇರಿಗಳಲ್ಲಿ ನೌಕರರು ಸಂತಾಪ ಸೂಚಿಸಿದರು. ಬದರಿನಾಥ ಕೇದಾರನಾಥ ದೇವಾಲಯ ಸಮಿತಿಯ ವಕ್ತಾರ ಹರೀಶ್ ಗೌರ್ ಕೂಡ ದುರ್ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. 
     

  • 15 June, 2025 12:22 PM

    Kedarnath Plane Crash Live Updates: ಹೆಲಿಕ್ಯಾಪ್ಟರ್ ಅಪಘಾತದ ಬಗ್ಗೆ DGCA ತನಿಖೆ

    ಇಂದು ಕೇದಾರನಾಥದ  ಜಿ-ಆರ್ಯನ್ ಹೆಲಿಪ್ಯಾಡ್, ಗುಪ್ತ್ಕಾನ್ಶಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರ್ಯನ್ ಏವಿಯೇಷನ್ ​​ಬೆಲ್ 407 ಹೆಲಿಕಾಪ್ಟರ್ VT-BKA ವಿಮಾನ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ ಐದು ಪ್ರಯಾಣಿಕರು, ಒಂದು ಶಿಶು ಮತ್ತು ಒಬ್ಬ ಸಿಬ್ಬಂದಿ ಇದ್ದರು. ಹೆಲಿಕಾಪ್ಟರ್ ಬೆಳಗ್ಗೆ 05:19 ಗಂಟೆಗೆ ಗುಪ್ತ್ಕಾನ್ಶಿಗೆ ಹೊರಟು ಗೌರಿಕುಂಡ್ ಬಳಿ ಅಪಘಾತಕ್ಕೀಡಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ DGCA ಈಗಾಗಲೇ ಚಾರ್ ಧಾಮ್‌ಗೆ ಹೆಲಿಕಾಪ್ಟರ್ ಕಾರ್ಯಾಚರಣೆಗಳ ಆವರ್ತನವನ್ನು ಕಡಿಮೆ ಮಾಡಿದೆ. ವರ್ಧಿತ ಕಣ್ಗಾವಲು ನಡೆಸುತ್ತಿದ್ದು, ಮುಂದಿನ ಕ್ರಮಕ್ಕಾಗಿ ಕಾರ್ಯಾಚರಣೆಯನ್ನು ಪರಿಶೀಲಿಸುತ್ತಿದೆ. AAIB ಅಪಘಾತದ ಬಗ್ಗೆ ತನಿಖೆ ನಡೆಸುತ್ತದೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ತಿಳಿಸಿದೆ. 
     

  • 15 June, 2025 12:21 PM

    Kedarnath Plane Crash Updates: ಬೆಳಗ್ಗೆ 5:30ರ ಸುಮಾರಿಗೆ ದುರ್ಘಟನೆ

    ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಉತ್ತರಾಖಂಡ್ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ (ಯುಸಿಎಡಿಎ) ಸಿಇಒ ಸೋನಿಕಾ, ʼಇಂದು ಬೆಳಗ್ಗೆ 5:30ರ ಸುಮಾರಿಗೆ ಕೇದಾರನಾಥ ಧಾಮದಿಂದ ಗುಪ್ತಕಾಶಿಗೆ ಹೋಗುತ್ತಿದ್ದ ಹೆಲಿಕಾಪ್ಟರ್ ಪತ್ತೆಯಾಗಿಲ್ಲ ಎಂಬ ಮಾಹಿತಿ ನಮಗೆ ಸಿಕ್ಕಿತು. ಸ್ವಲ್ಪ ಸಮಯದ ನಂತರ ಅದು ಗೌರಿಕುಂಡ್ ಬಳಿ ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ, ಎಸ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ತಲುಪಿವೆ. ಹೆಲಿಕಾಪ್ಟರ್‌ನಲ್ಲಿ ಒಟ್ಟು 6 ಪ್ರಯಾಣಿಕರು ಮತ್ತು ಒಬ್ಬ ಪೈಲಟ್ ಇದ್ದರು...ʼ ಎಂದು ತಿಳಿಸಿದ್ದಾರೆ.
     

  • 15 June, 2025 12:17 PM

    Kedarnath Plane Crash Updates: ಅಹಮದಾಬಾದ್‌ ದುರಂತದ ಬೆನಲ್ಲೇ ಮತ್ತೊಂದು ದುರ್ಘಟನೆ  

    ಆರ್ಯನ್ ಅವಿಯೇಷನ್ ಕಂಪನಿಗೆ ಸೇರಿದ ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್ ಸೇರಿದಂತೆ ಒಟ್ಟು 7 ಮಂದಿ ಇದ್ದರು ಎನ್ನಲಾಗಿದೆ. ಈ ದುರ್ಘಟನೆಯಲ್ಲಿ ಎಲ್ಲರೂ ಸಾವನ್ನಪ್ಪಿದ್ದಾರೆಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ. ಅಹಮದಾಬಾದ್‌ ವಿಮಾನ ದುರಂತದ ಬೆನ್ನಲ್ಲೇ ಮತ್ತೊಂದು ದುರ್ಘಟನೆ ಸಂಭಿಸಿದೆ. 
     

  • 15 June, 2025 12:11 PM

    Kedarnath Plane Crash Updates: ಹವಾಮಾನ ವೈಪರೀತ್ಯದಿಂದ ದುರ್ಘಟನೆ!!

    ಆರ್ಯನ್ ಅವಿಯೇಷನ್ ಕಂಪನಿಗೆ ಸೇರಿದ ಹೆಲಿಕಾಪ್ಟರ್ 6 ಮಂದಿ ಪ್ರಯಾಣಿಕರನ್ನು ಹೊತ್ತು ಗುಪ್ತಕಾಶಿಗೆ ಹೊತ್ತು ತೆರಳುತ್ತಿತ್ತು. ಈ ವೇಳೆ ಗೌರಿಕುಂಡ್ ಬಳಿ ಭಾನುವಾರ ಬೆಳಗಿನ ಜಾವ 5.30ರ ಸುಮಾರಿಗೆ ಪತವಾಗಿದೆ. ಹವಾಮಾನ ವೈಪರೀತ್ಯದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಹೆಲಿಕಾಪ್ಟರ್ ಪತನವನ್ನು ಹೆಲಿಕಾಪ್ಟರ್ ನೋಡಲ್ ಅಧಿಕಾರಿ ರಾಹುಲ್ ಚೌಬೆ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವರ್  ದೃಢಪಡಿಸಿದ್ದಾರೆ.
     

Trending News