ಜಾರ್ಖಂಡ್‌ನಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬರಲಿದೆ: ಸಂಜಯ್ ಪಾಸ್ವಾನ್

ಖನಿಜ ಸಮೃದ್ಧ ರಾಜ್ಯದಲ್ಲಿ 'ಮಹಾಘಟಬಂಧನ್' ಅಧಿಕಾರಕ್ಕೆ ಬರಲಿದೆ ಎಂದು ಜಾರ್ಖಂಡ್ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಸಂಜಯ್ ಪಾಸ್ವಾನ್ ಹೇಳಿಕೊಂಡಿದ್ದಾರೆ.  

Updated: Nov 18, 2019 , 03:42 PM IST
ಜಾರ್ಖಂಡ್‌ನಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬರಲಿದೆ: ಸಂಜಯ್ ಪಾಸ್ವಾನ್
File Image

ನವದೆಹಲಿ: ಖನಿಜ ಸಮೃದ್ಧ ರಾಜ್ಯದಲ್ಲಿ 'ಮಹಾಘಟಬಂಧನ್' ಅಧಿಕಾರಕ್ಕೆ ಬರಲಿದೆ ಎಂದು ಜಾರ್ಖಂಡ್ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಸಂಜಯ್ ಪಾಸ್ವಾನ್ ಹೇಳಿಕೊಂಡಿದ್ದಾರೆ. ಕಳೆದ ವರ್ಷ ಜಾರ್ಖಂಡ್‌ನಲ್ಲಿ ಆಡಳಿತ ನಡೆಸಿರುವ ಬಿಜೆಪಿ ಸರ್ಕಾರಕ್ಕೆ ಯಾವುದೇ ಮನ್ನಣೆಯಿಲ್ಲ ಎಂಬುದಕ್ಕೆ ಜನರೇ ಸಾಕ್ಷಿಯಾಗಿದ್ದಾರೆ ಎಂದವರು ತಿಳಿಸಿದರು.

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಂತಹ ಪ್ರಾದೇಶಿಕ ಪಕ್ಷಕ್ಕಿಂತ ಕಡಿಮೆ ಸ್ಥಾನಗಳಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಏಕೆ ಸ್ಪರ್ಧಿಸುತ್ತಿದೆ ಎಂದು ಕೇಳಿದಾಗ, "ಕಾಂಗ್ರೆಸ್ ಯಾವಾಗಲೂ ಸಮ್ಮಿಶ್ರ ಧರ್ಮವನ್ನು ನಂಬುತ್ತದೆ. ನಾವು ಬಲಶಾಲಿ ಎಂದು ಭಾವಿಸಿದಲ್ಲೆಲ್ಲಾ ನಾವು ಸ್ಪರ್ಧಿಸುತ್ತಿದ್ದೇವೆ. (ಜೆಎಂಎಂ, ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾದಳ) ಒಂದೇ ಸಿದ್ಧಾಂತವನ್ನು ಹಂಚಿಕೊಳ್ಳುತ್ತವೆ ಎಂದು ಪಾಸ್ವಾನ್ ಪ್ರತಿಕ್ರಿಯಿಸಿದರು.

"ನಾವು ಬಿಜೆಪಿಗೆ ಹೆದರುತ್ತಿದ್ದೇವೆ ಎಂದು ಅವರು ಭಾವಿಸಿದರೆ, ಅದು ಅವರ ತಪ್ಪುಗ್ರಹಿಕೆಯಾಗಿದೆ. ಕಳೆದ ಐದು ವರ್ಷಗಳಲ್ಲಿ ಜಾರ್ಖಂಡ್ ಜನರು ಅವರನ್ನು ನೋಡಿದ್ದಾರೆ. ಪರಿಣಾಮಕಾರಿಯಾಗಿ, ಐದು ಹಂತಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ಬಿಜೆಪಿಗೆ ಸ್ವತಃ ಸೋಲುವ ಭೀತಿಯಿದೆ. ನಮ್ಮ ರಾಜ್ಯದಿಂದ 'ನಕ್ಸಲಿಸಂ' ಅನ್ನು ತೆಗೆದುಹಾಕುವುದಾಗಿ ಬಿಜೆಪಿ ವಚನ ನೀಡಿತ್ತು. ಆದರೆ, ನಮ್ಮ ರಾಜ್ಯದಲ್ಲಿ ನಕ್ಸಲಿಸಂ ತೊಡೆದು ಹಾಕಿದ್ದಿದ್ದರೆ ಇಂದು ನಾಲ್ಕೈದು ಹಂತಗಳಲ್ಲಿ ಏಕೆ ಚುನಾವಣೆ ನಡೆಯುತ್ತಿತ್ತು? ಎಂದವರು ಪ್ರಶ್ನಿಸಿದರು.

"ಅವರು (ಎಜೆಎಸ್‌ಯು) ಹೆಚ್ಚು ಕಡಿಮೆ ಒಂದೇ. ಫಲಿತಾಂಶಗಳ ನಂತರ ಅವರು ಮತ್ತೆ ಅವರೊಂದಿಗೆ (ಬಿಜೆಪಿ) ಕೈ ಬದಲಾಯಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಕಳೆದ 19 ವರ್ಷಗಳಿಂದ ನಾವು ಅವರನ್ನು ನೋಡಿದ್ದೇವೆ, ಅವರ ಬಗ್ಗೆ ನಮಗೆ ತಿಳಿದಿಲ್ಲವೇ" ಎಂದು ಪಾಸ್ವಾನ್ ವ್ಯಂಗ್ಯವಾಡಿದರು.

ಜಾರ್ಖಂಡ್‌ನಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ರಾಜ್ಯವನ್ನು ದೇಶದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುವುದು ನಮ್ಮ ಮಾರ್ಗಸೂಚಿ ಆಗಿರಲಿದೆ ಎಂದು ಪಾಸ್ವಾನ್ ಭರವಸೆ ನೀಡಿದರು.

"ಮೊದಲನೆಯದಾಗಿ, ನಾವು ಜಾರ್ಖಂಡ್‌ನ ಯುವಕರಿಗೆ ಉದ್ಯೋಗವನ್ನು ಒದಗಿಸುತ್ತೇವೆ. ಇದರಿಂದಾಗಿ ರಾಜ್ಯದ ಯುವ ಪೀಳಿಗೆ ನಮ್ಮ ರಾಜ್ಯದಿಂದ ದೂರ ಹೋಗಬೇಕಾಗಿಲ್ಲ. ಪ್ರಸ್ತುತ ಬಿಜೆಪಿ ನೇತೃತ್ವದ ಸರ್ಕಾರವು ಯುವಕರನ್ನು ಲೂಟಿ ಮಾಡುವುದನ್ನು ಹೊರತುಪಡಿಸಿ ಏನನ್ನೂ ಮಾಡಲಿಲ್ಲ. ನಮ್ಮ ಯುವಕರು ಉದ್ಯೋಗಕ್ಕಾಗಿ ಹೆಣಗಾಡುತ್ತಿರುವಾಗ ಅವರು ಖನಿಜ ಸಮೃದ್ಧವಾಗಿರುವ ಎಲ್ಲಾ ಭೂಮಿಯನ್ನು ಲಾಭ ಪಡೆಯುತ್ತಿರುವ ಕೈಗಾರಿಕೋದ್ಯಮಿಗಳಿಗೆ ನೀಡಿದ್ದಾರೆ ಎಂದವರು ಆರೋಪಿಸಿದರು.

"ಹಿಂದೆ ಆಗಿರುವ ತಪ್ಪುಗಳನ್ನು ನಾವು ಬದಲಾಯಿಸುತ್ತೇವೆ. ನಾವು ಅಧಿಕಾರ ವಹಿಸಿಕೊಂಡಾಗ ಜಾರ್ಖಂಡ್‌ನ ಪ್ರತಿಯೊಬ್ಬ ವ್ಯಕ್ತಿಯು ಸಂತೋಷವಾಗಿರುತ್ತಾನೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜಾರ್ಖಂಡ್‌ನಲ್ಲಿ ನವೆಂಬರ್ 30 ರಿಂದ ಐದು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ರಾಷ್ಟ್ರೀಯ ಜನತಾದಳದೊಂದಿಗೆ ಮೈತ್ರಿ ಮಾಡಿಕೊಂಡು ರಾಜ್ಯದ 81 ಸ್ಥಾನಗಳಲ್ಲಿ ಕಾಂಗ್ರೆಸ್ 31, ಜೆಎಂಎಂ 43 ಮತ್ತು ಆರ್‌ಜೆಡಿ ಏಳು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.