ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಶಿವಸೇನಾ ಬೇಡಿಕೆಯನ್ನು ನಾವು ಎಂದಿಗೂ ಒಪ್ಪಿಲ್ಲ -ಶಾ ಸ್ಪಷ್ಟನೆ

ನೂತನ ಮಹಾರಾಷ್ಟ್ರ ಸರ್ಕಾರದಲ್ಲಿ ಶಿವಸೇನಾಗೆ 50:50 ಸೂತ್ರದ ಅನುಸಾರವಾಗಿ ಮುಖ್ಯಮಂತ್ರಿ ಹುದ್ದೆ ನೀಡುವ ಭರವಸೆಯನ್ನು ಬಿಜೆಪಿ ಮುಖ್ಯಸ್ಥ ಅಮಿತ್ ಶಾ ತಿರಸ್ಕರಿಸಿದ್ದಾರೆ. ಅಲ್ಲದೆ ಚುನಾವಣಾ ಫಲಿತಾಂಶದ ನಂತರ ಸ್ಥಿತಿಯಲ್ಲಿ ಈ ಸೂತ್ರಕ್ಕೆ ಅಂಟಿಕೊಳ್ಳಲು ಸಾಧ್ಯವಿಲ್ಲ ಎಂದು ಅಮಿತ್ ಶಾ ತಿಳಿಸಿದ್ದಾರೆ.

Updated: Nov 13, 2019 , 09:25 PM IST
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಶಿವಸೇನಾ ಬೇಡಿಕೆಯನ್ನು ನಾವು ಎಂದಿಗೂ ಒಪ್ಪಿಲ್ಲ -ಶಾ ಸ್ಪಷ್ಟನೆ

ನವದೆಹಲಿ: ನೂತನ ಮಹಾರಾಷ್ಟ್ರ ಸರ್ಕಾರದಲ್ಲಿ ಶಿವಸೇನಾಗೆ 50:50 ಸೂತ್ರದ ಅನುಸಾರವಾಗಿ ಮುಖ್ಯಮಂತ್ರಿ ಹುದ್ದೆ ನೀಡುವ ಭರವಸೆಯನ್ನು ಬಿಜೆಪಿ ಮುಖ್ಯಸ್ಥ ಅಮಿತ್ ಶಾ ತಿರಸ್ಕರಿಸಿದ್ದಾರೆ. ಅಲ್ಲದೆ ಚುನಾವಣಾ ಫಲಿತಾಂಶದ ನಂತರ ಸ್ಥಿತಿಯಲ್ಲಿ ಈ ಸೂತ್ರಕ್ಕೆ ಅಂಟಿಕೊಳ್ಳಲು ಸಾಧ್ಯವಿಲ್ಲ ಎಂದು ಅಮಿತ್ ಶಾ ತಿಳಿಸಿದ್ದಾರೆ.

"ಚುನಾವಣೆಗೆ ಮೊದಲು, ಮೈತ್ರಿಕೂಟ ಗೆದ್ದಲ್ಲಿ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ನಾನು ಇಬ್ಬರೂ ಅನೇಕ ಬಾರಿ ಸಾರ್ವಜನಿಕವಾಗಿ ಹೇಳಿದ್ದೆವು. ಆಗ ಯಾರೂ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಈಗ ಅವರು ನಮಗೆ ಸ್ವೀಕಾರಾರ್ಹವಲ್ಲದ ಹೊಸ ಬೇಡಿಕೆಗಳೊಂದಿಗೆ ಬಂದಿದ್ದಾರೆ' ಎಂದು ಅಮಿತ್ ಶಾ ಶಿವಸೇನಾದ ಜೊತೆಗಿನ ಮೈತ್ರಿ ಕೊನೆಗೊಳಿಸಿದ ನಂತರ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಮುಚ್ಚಿದ ಬಾಗಿಲುಗಳ ಹಿಂದೆ ಏನಾಗುತ್ತದೆ ಎಂಬುದನ್ನು ಬಹಿರಂಗಪಡಿಸುವುದು ನಮ್ಮ ಪಕ್ಷದ ಸಂಪ್ರದಾಯದಲ್ಲಿಲ್ಲ' ಎಂದು ಅವರು ಹೇಳಿದರು.'ಅದು ದಂಗೆ ಮತ್ತು ಜನರ ಸಹಾನುಭೂತಿಯನ್ನು ಪಡೆಯಬಹುದು ಎಂದು ಸೇನಾ ಭಾವಿಸಿದರೆ, ಅವರಿಗೆ ನಿಜವಾಗಿಯೂ ಸಾರ್ವಜನಿಕರ ಬಗ್ಗೆ ತಿಳಿದಿಲ್ಲವೆಂದರ್ಥ' ಎಂದು ಹೇಳಿದರು.

ಅಕ್ಟೋಬರ್ 21ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಸುಲಭವಾಗಿ ಬಹುಮತವನ್ನು ಸಾಧಿಸಿದ್ದರೂ, ಎರಡು ಮಿತ್ರ ಪಕ್ಷಗಳು ಅಧಿಕಾರಕ್ಕಾಗಿ ಜಗಳವಾಡಿದ ನಂತರ ಮಹಾರಾಷ್ಟ್ರ ರಾಜಕೀಯ ಅನಿಶ್ಚಿತತೆಗೆ ತಲುಪಿತು. ಚುನಾವಣೆಯಲ್ಲಿ ಗೆದ್ದ ನಂತರ ರಾಜ್ಯದಲ್ಲಿ 50:50 ಅಧಿಕಾರ ಹಂಚಿಕೆ ಒಪ್ಪಂದದ ಭರವಸೆ ಇದೆ ಎಂದು ಶಿವಸೇನೆ ಹೇಳಿಕೊಂಡರೆ, ಬಿಜೆಪಿ ಅಂತಹ ಯಾವುದೇ ಭರವಸೆ ನೀಡುವುದನ್ನು ನಿರಾಕರಿಸಿತು.

ಪ್ರತಿಪಕ್ಷದ ಕಾಂಗ್ರೆಸ್-ಎನ್‌ಸಿಪಿ ಒಗ್ಗೂಡಿಸುವಿಕೆಯೊಂದಿಗೆ ಶಿವಸೇನೆ ಸರ್ಕಾರ ರಚನೆಗೆ ಪ್ರಯತ್ನಿಸುತ್ತಿದ್ದಂತೆಯೇ ಮಹಾರಾಷ್ಟ್ರದಲ್ಲಿ ಮಂಗಳವಾರದಂದು ರಾಷ್ಟ್ರಪತಿ ಆಳ್ವಿಕೆಯನ್ನು ಘೋಷಿಸಲಾಯಿತು.