ಮಹಿಳೆಯ ಪೋಷಾಕು ಧರಿಸಿ ಕೋರ್ಟ್ ಗೆ ಬಂದ ಪುರುಷ ಆರೋಪಿ..ಕಾರಣ?

ಲೈಂಗಿಕ ಡಿಸ್ಫೊರಿಯಾ ಎನ್ನುವುದು ಒಬ್ಬ ವ್ಯಕ್ತಿಯು ತನ್ನ ಜೈವಿಕ ಲಿಂಗಕ್ಕೆ ವಿರುದ್ಧವಾಗಿ ಸ್ತ್ರೀ ಅಥವಾ ಪುರುಷ ಎಂದು ತನ್ನ ಗುರುತನ್ನು ಹೇಳಿಕೊಳ್ಳುವ ಕಾಯಿಲೆ. ಇದಕ್ಕಾಗಿ ಮಹಿಳೆಯರಂತೆ ಬಟ್ಟೆ, ಮೇಕಪ್ ಮತ್ತು ಹೇರ್ ಸ್ಟೈಲಿಂಗ್ ಮಾಡಿಕೊಂಡು ಆರೋಪಿ ನ್ಯಾಯಾಲಯಕ್ಕೆ ತಲುಪಿದ್ದ.

Nitin Tabib - | Updated: Dec 25, 2019 , 12:44 PM IST
ಮಹಿಳೆಯ ಪೋಷಾಕು ಧರಿಸಿ ಕೋರ್ಟ್ ಗೆ ಬಂದ ಪುರುಷ ಆರೋಪಿ..ಕಾರಣ?

ನವದೆಹಲಿ:ಮಹಿಳಾ ಸಹೋದ್ಯೋಗಿಗೆ ಕಿರುಕುಳ ನೀಡಿದ ಆರೋಪದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ತಾನು ಎಂದಿಗೂ ಮಹಿಳೆಯರ ಬಗ್ಗೆ ಯಾವುದೇ ಆಕರ್ಷಣೆಯನ್ನು ಹೊಂದಿಲ್ಲ ಮತ್ತು ಸ್ವತಃ ಮಹಿಳೆಯಾಗುವ ಪ್ರಕ್ರಿಯೆಯಲ್ಲಿದ್ದೇನೆ ಎಂದು ಆರೋಪಿ ಹೇಳಿಕೊಂಡಿದ್ದಾನೆ. ಬಾಲ್ಯದಿಂದಲೂ ತಾನು ಲೈಂಗಿಕ ಡಿಸ್ಫೊರಿಯಾ ಕಾಯಿಲೆಯಿಂದ ಬಳಲುತ್ತಿರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆ.

ನ್ಯಾಯಾಲಯದ ಮುಂದೆ, ತನ್ನನ್ನು ಓರ್ವ ಮಹಿಳೆ ಎಂದು ಹೇಳಿಕೊಂಡಿರುವ ಆರೋಪಿ, ದೂರು ನೀಡಿರುವ ಮಹಿಳಾ ಸಹೋದ್ಯೋಗಿ ಜೊತೆ ತಾನು 'ಸಹೋದರಿ' ಸಂಬಂಧ ಹೊಂದಿದ್ದು ಆಕೆಗೆ ತಾನು ಕಿರುಕುಳ ನೀಡುವುದು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಲೈಂಗಿಕ ಡಿಸ್ಫೊರಿಯಾ ಎನ್ನುವುದು ಒಬ್ಬ ವ್ಯಕ್ತಿಯು ತನ್ನ ಜೈವಿಕ ಲಿಂಗಕ್ಕೆ ವಿರುದ್ಧವಾಗಿ ಸ್ತ್ರೀ ಅಥವಾ ಪುರುಷ ಎಂದು ತನ್ನ ಗುರುತನ್ನು ಹೇಳಿಕೊಳ್ಳುವ ಕಾಯಿಲೆ. ಇದಕ್ಕಾಗಿ ಮಹಿಳೆಯರಂತೆ ಬಟ್ಟೆ, ಮೇಕಪ್ ಮತ್ತು ಹೇರ್ ಸ್ಟೈಲಿಂಗ್ ಮಾಡಿಕೊಂಡು ಆರೋಪಿ ನ್ಯಾಯಾಲಯಕ್ಕೆ ತಲುಪಿದ್ದ.

ತನ್ನ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವಂತೆ ಕೋರಿ ಅವನು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದ.  ಹಾಗೂ  ದೂರುದಾರರು ಪ್ರಕರಣವನ್ನು ಇತ್ಯರ್ಥಗೊಳಿಸಲು ಸಿದ್ಧರಾಗಿರುವುದಾಗಿ ಆತ ಅರ್ಜಿಯಲ್ಲಿ ಹೇಳಿಕೊಂಡಿದ್ದ.

ಸಂತ್ರಸ್ತೆಗೆ ಕಿರುಕುಳ ನೀಡಿದ ಆರೋಪದ ವಿರುದ್ಧ  ದೆಹಲಿಯ ಕನೌಟ್  ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಲ್ಟಿಪಲ್ ಸ್ಕ್ಲೆರೋಸಿಸ್ ಕಾಯಿಲೆಯಿಂದ ಬಳಲುತ್ತಿರುವ 33 ವರ್ಷದ ಸಂತ್ರಸ್ತೆಯನ್ನುವೀಲ್ ಚೇರ್ ಮೇಲೆ ನ್ಯಾಯಾಲಯಕ್ಕೆ ಕರೆತರಲಾಗಿದ್ದು,ಅವರು ಈ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಲು ನಿರಾಕರಿಸಿದ್ದಾರೆ. ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಆರೋಪಿಯ ಮನವಿಯನ್ನು ವಜಾಗೊಳಿಸಿ, ಸಂತ್ರಸ್ತೆ ಪ್ರಕರಣ ಇತ್ಯರ್ಥಕ್ಕೆ ಯಾವುದೇ ರೀತಿಯ ಒಪ್ಪಿಗೆ ನೀಡಿಲ್ಲ ಎಂದುತೀರ್ಪು ನೀಡಿದ್ದಾರೆ.

ಮಹಿಳೆಯ ಪರವಾಗಿ ಹಾಜರಾದ ವಕೀಲ ಉಮೇಶ್ ಜೋಶಿ, ಕೊನೆಯ ವಿಚಾರಣೆಯ ಸಮಯದಲ್ಲಿ, ಆರೋಪಿ ತಮಗೆ ಹಾಗೂ ಸಂತ್ರಸ್ತೆಗೆ ಅರಿವಿಲ್ಲದಂತ ಸಂತ್ರಸ್ತೆಯ ಪರವಾಗಿ ವಾದಮಂಡಿಸಲು ಇನ್ನೊಬ್ಬ ವಕೀಲನನ್ನುಸಹಾಯ ಪಡೆದಿದ್ದಾನೆ ಹಾಗೂ ಸಂತ್ರಸ್ತೆಯ ನಕಲಿ ಸಹಿಯನ್ನೂ ಸಹ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ "ನಾನು ಪ್ರಕರಣದಲ್ಲಿ ಮುಂದುವರಿಯಲು ಬಯಸುತ್ತೇನೆ" ಎಂದು ಸಂತ್ರಸ್ತೆಯ ಸಹೋದರಿ ಸಂತ್ರಸ್ತೆಯ ಪರವಾಗಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದು, "ಪ್ರಕರಣದಲ್ಲಿ ಯಾವುದೇ ಒಪ್ಪಂದ ಮಾಡಿಕೊಳ್ಳಲಾಗುವುದಿಲ್ಲ" ಎಂದು ತಿಳಿದ್ದಾರೆ.

2016 ರ ಅಕ್ಟೋಬರ್‌ನಲ್ಲಿ ದಾಖಲಾದ ಎಫ್‌ಐಆರ್ ಪ್ರಕಾರ, ದೆಹಲಿಯ ಕನೌಟ್ ಪ್ಲೇಸ್‌ನಲ್ಲಿರುವ ಪಬ್‌ವೊಂದರಲ್ಲಿ ಪಾರ್ಟಿ ವೇಳೆ ಆರೋಪಿ ಮಹಿಳೆಗೆ ಕಿರುಕುಳ ನೀಡಿದ್ದ ಎನ್ನಲಾಗಿದೆ. ಸಂತ್ರಸ್ತೆ ಮತ್ತು ಆರೋಪಿ ಇಬ್ಬರು 2014 ರಲ್ಲಿ ನೋಯ್ಡಾದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ತನಗೆ ನೀಡಿರುವ ಕಿರುಕುಳದ ಕುರಿತು ತಾವು ಕಂಪನಿಗೆ ಹಲವಾರು ಬಾರಿ ದೂರು ನೀಡಿರುವುದಾಗಿ ಹೇಳಿರುವ ಸಂತ್ರಸ್ತೆ, ಕಂಪನಿ ಇದುವರೆಗೆ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಕಂಪನಿಯ ಅಧಿಕಾರಿಗಳು ಆರೋಪಿಯ ಪರವಾಗಿ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.