)
prayag raj floods video: ದೇಶದಲ್ಲಿ ಅನೇಕ ಕಡೆಗಳಲ್ಲಿ ವರುಣಾರ್ಭಟಕ್ಕೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಹೊಳೆಗಳು ಮತ್ತು ಕಾಲುವೆಗಳು ತುಂಬಿ ಹರಿಯುತ್ತಿವೆ. ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಜನರು ಹೊರಗೆ ಹೋಗಲು ಭಯ ಪಡುತ್ತಿದ್ದಾರೆ.
ಎಲ್ಲಾ ರಸ್ತೆಗಳು ನೀರಿನಿಂದ ತುಂಬಿದ ಕೊಚ್ಚೆ ಗುಂಡಿಗಳಂತೆ ಕಾಣುತ್ತಿವೆ. ನಿರಂತರ ಮಳೆಯಿಂದಾಗಿ ಗಂಗಾ ನದಿ ಉಕ್ಕಿ ಹರಿಯುತ್ತಿದೆ. ಉತ್ತರ ಪ್ರದೇಶದ ಅನೇಕ ನಗರಗಳು ಪ್ರವಾಹದಿಂದಾಗಿ ನೀರಿನಲ್ಲಿ ಸಿಲುಕಿಕೊಂಡಿವೆ.
ವಿಶೇಷವಾಗಿ ಪ್ರಯಾಗ್ರಾಜ್ನಲ್ಲಿ, ಭಾರೀ ಪ್ರವಾಹದ ನೀರು ವಸತಿ ಪ್ರದೇಶಕ್ಕೆ ಪ್ರವೇಶಿಸಿದೆ. ಒಂದು ಸ್ಥಳದಲ್ಲಿ ಪೋಷಕರು ಪುಟ್ಟ ಶಿಶುವನ್ನು ಕುತ್ತಿಗೆಯವರೆಗೆ ಇದ್ದ ನೀರಿನ ಮಧ್ಯದಲ್ಲೇ ನಡೆದುಕೊಂಡು ಮತ್ತೊಂದು ಸ್ಥಳಕ್ಕೆ ಕರೆದೊಯ್ದ ದೃಶ್ಯ ವೈರಲ್ ಆಗಿದೆ.
ಛೋಟಾ ಬಘಾಡಾ ಪ್ರದೇಶದ ದಂಪತಿಗಳು ತಮ್ಮ ನವಜಾತ ಶಿಶುವನ್ನು ಆಸ್ಪತ್ರೆಗೆ ಕರೆದೊಯ್ಯ ಬೇಕಿತ್ತು. ಆದರೆ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದ ಕಾರಣ ಅವರು ತೊಂದರೆಗಳನ್ನು ಎದುರಿಸಿದರು. ಹೆಚ್ಚುತ್ತಿರುವ ಪ್ರವಾಹದ ನೀರಿನಲ್ಲಿ ಮಗುವನ್ನು ಹೊತ್ತೊಯ್ದರು. ಕೆಲವರು ಅಲ್ಲಿನ ಪರಿಸ್ಥಿತಿಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋ ನೋಡಿದರೆ ನಿಮಗೆ ಬಾಹುಬಲಿ ಸಿನಿಮಾದ ಮೊದಲ ಸೀನ್ ನೆನೆಪಿಗೆ ಬರತ್ತದೆ. ಈ ವ್ಯಕ್ತಿ ವಸುದೇವ ಶ್ರೀಕೃಷ್ಣನನ್ನು ತಲೆ ಮೇಲೆ ಬುಟ್ಟಿಯಲ್ಲಿ ಹೊತ್ತು ನದಿ ದಾಟಿಸಿದ ರೀತಿಯಲ್ಲೇ ಮದುವನ್ನು ತನ್ನ ಕೈಗಳಿಂದ ಮೇಲೆ ಎತ್ತಿಕೊಂಡು ಸಾಗಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.
ये न्यू इंडिया है।
ये धार्मिक नगरी प्रयागराज है।
यहाँ मासूम बच्चे को माँ-बाप नाले से लेकर जाते हैं। pic.twitter.com/MX2QJTykSN— Sanjay Singh AAP (@SanjayAzadSln) August 3, 2025
ಯುಪಿ ಸಿಎಂ 20 ಕೋಟಿ ರೂಪಾಯಿ ಖರ್ಚು ಮಾಡಿ ಮಾಡಿದ ಅಭಿವೃದ್ಧಿ ಇದೇನಾ..? ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ವ್ಯಂಗ್ಯ ಮಾಡುತ್ತಿದ್ದಾರೆ. ಆಡಂಬರದ ಕೆಲಸಗಳಿಗೆ ಸಾವಿರಾರು ಕೋಟಿ ಖರ್ಚು ಮಾಡುವ ಯೋಗಿ ಸರ್ಕಾರ ಜನರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ದೂರುತ್ತಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.