Ayodhya news : ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀ ರಾಮಚಂದ್ರನ ಅಯೋಧ್ಯೆಯಲ್ಲಿ ಪಾಪದ ಕೆಲಸ ನಡೆದಿದೆ. ಸೌರಭ್ ಎಂಬ ಯುವಕ ಸ್ನಾನಗೃಹದಲ್ಲಿ ಸ್ನಾನ ಮಾಡುತ್ತಿದ್ದ ಮಹಿಳಾ ಭಕ್ತರ ವಿಡಿಯೋಗಳನ್ನು ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.. ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ..
ಮಹಿಳಾ ಭಕ್ತೆಯೊಬ್ಬರು ಸ್ನಾನ ಗೃಹದಲ್ಲಿ ಸ್ನಾನ ಮಾಡುವಾಗ ಸೌರಭ್ ವಿಡಿಯೋ ಮಾಡುವುದನ್ನು ಗಮನಿಸಿದ್ದಾರೆ. ಇದರಿಂದ ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಹ್ರೈಚ್‌ನ ನಿವಾಸಿ ಆರೋಪಿ ಸೌರಭ್ ಮೊಬೈಲ್ ಫೋನ್ ವಶಕ್ಕೆ ಪಡೆದು ನೋಡಿದಾಗ, ಹಲವು ಮಹಿಳೆಯರ ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳನ್ನು ಪತ್ತೆಯಾಗಿವೆ..
ಇದನ್ನೂ ಓದಿ:2 ಡಿವೋರ್ಸ್ ಆದ್ರೂ ಸುಮ್ಮನಿರದೆ.. 18ರ ಹರೆಯದ ಬಾಲಕನನ್ನೇ ಪ್ರೀತಿಸಿ ಮದುವೆಯಾದ 30 ವರ್ಷದ ಅಂಟಿ..!
ಘಟನೆಯ ವಿವರ : ಮಾಹಿತಿಯ ಪ್ರಕಾರ, ಶುಕ್ರವಾರ ಬೆಳಿಗ್ಗೆ 6:30 ಕ್ಕೆ, ಮಹಿಳಾ ಭಕ್ತೆ ಅತಿಥಿ ಗೃಹದ ಸ್ನಾನಗೃಹದಲ್ಲಿ ಸ್ನಾನ ಮಾಡುತ್ತಿದ್ದಾಗ ಆರೋಪಿ ಸೌರಭ್‌ನ ನೆರಳು ಕಂಡಿತು. ಸೌರಭ್ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾನೆಂದು ಅರಿತುಕೊಂಡು, ಭಯದಿಂದ ಕಿರುಚುತ್ತಾ ಬಾತ್ರೂಮ್‌ನಿಂದ ಹೊರಬಂದಿದ್ದಾಳೆ. ಮಹಿಳೆಯ ಧ್ವನಿ ಕೇಳಿ ಅತಿಥಿ ಗೃಹದಲ್ಲಿ ತಂಗಿದ್ದ ಭಕ್ತರು ಕೂಡ ಹೊರಗೆ ಬಂದು, ಆರೋಪಿಯನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ.. ಆರೋಪಿಯ ಫೋನ್‌ನಲ್ಲಿ ಮಹಿಳೆಯರು ಸ್ನಾನ ಮಾಡುತ್ತಿರುವ 10 ವೀಡಿಯೊಗಳು ಕಂಡುಬಂದಿವೆ.
ಇದನ್ನೂ ಓದಿ:ಭಾರತದ ಟಾಪ್ 3 ಶ್ರೀಮಂತ ರಾಜ್ಯಗಳು ಇವು.. ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತೆ..?
ಸಂತ್ತಸ್ತೆ ಹೇಳಿಕೆ : ನಾನು ಸ್ನಾನ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ನನ್ನ ಗಮನ ಗೋಡೆ ಮೇಲೆ ಬಿದ್ದ ನೆರಳಿನತ್ತ ಹೊಯಿತು.. ಯಾರೋ ಒಬ್ಬರು ಮೊಬೈಲ್ ಫೋನ್‌ನಲ್ಲಿ ನಾನು ಸ್ನಾನ ಮಾಡುತ್ತಿದ್ದ ದೃಶ್ಯವನ್ನು ವಿಡಿಯೋ ರೆಕಾರ್ಡ್ ಮಾಡುತ್ತಿರುವುದು ಗಮನಕ್ಕೆ ಬಂತು. ಆಗ ನಾನು ಭಯಭೀತರಾಗಿ ಬಟ್ಟೆ ಧರಿಸಿ ಹೊರಗೆ ಬಂದೆ ಎಂದು ಹೇಳಿಕೊಂಡಿದ್ದಾರೆ.
ಈ ಘಟನೆ ನಡೆದ ಅತಿಥಿ ಗೃಹವು ರಾಮ ಮಂದಿರದ ಗೇಟ್ ಸಂಖ್ಯೆ 3 ರಿಂದ 50 ಮೀಟರ್ ದೂರದಲ್ಲಿದೆ. ವಾರಣಾಸಿಯ ಕೆಲವು ಭಕ್ತರು ರಾಮ ದೇವಾಲಯಕ್ಕೆ ಭೇಟಿ ನೀಡಲು ಬಂದಿದ್ದರು. ಸಂಜೆಯಾಗಿದ್ದರಿಂದ, ಅವರು ರಾಮ ಮಂದಿರದ ಹತ್ತಿರವಿರುವ ರಾಜಾ ಅತಿಥಿ ಗೃಹದಲ್ಲಿ 2 ಕೊಠಡಿಗಳನ್ನು ಕಾಯ್ದಿರಿಸಿದರು. ಸೌರಭ್ ಈ ಮಹಿಳೆಯರಲ್ಲಿ ಒಬ್ಬರ ವಿಡಿಯೋ ತೆಗೆದಿದ್ದಾನೆ. ಪೊಲೀಸರು ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









