close

News WrapGet Handpicked Stories from our editors directly to your mailbox

400 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಮಣಿಪುರ ಪೊಲೀಸರು

 ಮಣಿಪುರ ಪೊಲೀಸರು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 400 ಕೋಟಿ ರೂ. ಮೌಲ್ಯವನ್ನು ಹೊಂದಿರುವ 40 ಲಕ್ಷ ಟ್ಯಾಬ್ಲೆಟ್ ಕಂಟ್ರಾಬ್ಯಾಂಡ್ ಡಬ್ಲ್ಯುವೈ (ವರ್ಲ್ಡ್ ಈಸ್ ಯುವರ್ಸ್) ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Updated: Aug 25, 2019 , 03:18 PM IST
400 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಮಣಿಪುರ ಪೊಲೀಸರು
ANI PHOTO

ನವದೆಹಲಿ:  ಮಣಿಪುರ ಪೊಲೀಸರು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 400 ಕೋಟಿ ರೂ. ಮೌಲ್ಯವನ್ನು ಹೊಂದಿರುವ 40 ಲಕ್ಷ ಟ್ಯಾಬ್ಲೆಟ್ ಕಂಟ್ರಾಬ್ಯಾಂಡ್ ಡಬ್ಲ್ಯುವೈ (ವರ್ಲ್ಡ್ ಈಸ್ ಯುವರ್ಸ್) ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

"ಥೌಬಲ್ ಜಿಲ್ಲಾ ಪೊಲೀಸರ ಸಂಯೋಜಿತ ತಂಡಕ್ಕೆ ಸ್ಥಳೀಯ ಯುವ ಕ್ಲಬ್‌ಗಳು ಮತ್ತು ಮಹಿಳಾ ಕಲ್ಯಾಣ ಸಂಘವು ನಿಷಿದ್ಧ ವಸ್ತುವನ್ನು ವಶಪಡಿಸಿಕೊಳ್ಳಲು ಸಹಾಯ ಮಾಡಿದೆ" ಎಂದು ಎಸ್‌ಪಿ ಡಾ ಎಸ್ ಎಸ್ ಇಬೊಮ್ಚಾ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಆಗಸ್ಟ್ 24 ರಂದು ವಾಹನವು ಅನುಮಾನಾಸ್ಪದ ರೀತಿಯಲ್ಲಿ ಚಲಿಸುತ್ತಿರುವುದನ್ನು ಗುರುತಿಸಲಾಗಿದೆ. ಇದನ್ನು ಪ್ರತಿಬಂಧಿಸಿದಾಗ ಅದರಲ್ಲಿ ಕೆಲವು ಮಾದಕ ವಸ್ತುಗಳನ್ನು ವಾಹನದಲ್ಲಿ ಮರೆಮಾಡಲಾಗಿತ್ತು ಎಂದು ತಿಳಿದುಬಂದಿದೆ. ತದನಂತರ ಚಾಲಕನನ್ನು ಥೌಬಲ್ ಪೋಲಿಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಯಿತು ಎನ್ನಲಾಗಿದೆ.ವಾಹನದಲ್ಲಿ 100 ಕಾರ್ಪೆಟ್ ರೋಲ್‌ಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ, ಅದರೊಳಗೆ 40 ಲಕ್ಷ ಡಬ್ಲ್ಯುವೈ ಮಾತ್ರೆಗಳಿವೆ. ವಶಪಡಿಸಿಕೊಂಡ ಡಬ್ಲ್ಯುವೈ ಮಾತ್ರೆಗಳ ಒಟ್ಟು ಮೌಲ್ಯ ಸುಮಾರು 400 ಕೋಟಿ ರೂಪಾಯಿಗಳು ಎಂದು ಇಂಫಾಲ್‌ನ ಕಸ್ಟಮ್ಸ್ ವಿಭಾಗದ ಕಳ್ಳಸಾಗಣೆ ವಿರೋಧಿ ಘಟಕ ತಿಳಿಸಿದೆ.

ಚಾಲಕ ಮೊಹಮ್ಮದ್ ಹುಸೇನ್ ಎಂದು ಗುರುತಿಸಲಾಗಿದ್ದು, ಆತನ ಸಹಚರರ ಹೆಸರನ್ನು ಬಹಿರಂಗಪಡಿಸಿದ್ದು, ಅದರ ನಂತರ ಪೊಲೀಸ್ ತಂಡಗಳು ಇಂಫಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಧಾವಿಸಿ ಅಯೂಬ್ ಖಾನ್ (41), ಎಂಡಿ ಅಬ್ದುಲ್ ರಜಾಕ್ (35) ಮತ್ತು ಅಬ್ದುಲ್ ರಹೀಮ್ (33) ಅವರನ್ನು ಬಂಧಿಸಿದ್ದಾರೆ.