ಸೈನಿಕ ಹುತಾತ್ಮನಾದ ನಂತರ ಲೆಫ್ಟಿನೆಂಟ್ ಆಗಿ ಆರ್ಮಿಗೆ ಸೇರಿದ ಪತ್ನಿ!

ಜೀವನದಲ್ಲಿ ಬರುವ ಸವಾಲುಗಳನ್ನು ಧೈರ್ಯವಾಗಿ ಎದುರಸಬೇಕು ಎನ್ನುವ ಉದಾಹರಣೆಗೆ ನೀರು ಸಂಬ್ಯಾಲ್ ಅವರೇ ಸಾಕ್ಷಿ.ಇವರ ಜೀವನ ಕಥೆ ನಿಜಕ್ಕೂ ಎಲ್ಲರಿಗೂ ಹುಬ್ಬೇರಿಸುವಂತೆ ಮಾಡುತ್ತದೆ.

Last Updated : Sep 23, 2018, 11:04 AM IST
ಸೈನಿಕ ಹುತಾತ್ಮನಾದ ನಂತರ ಲೆಫ್ಟಿನೆಂಟ್ ಆಗಿ ಆರ್ಮಿಗೆ ಸೇರಿದ ಪತ್ನಿ! title=
Photo:ANI

ಸಾಂಬಾ(ಜಮ್ಮು ಕಾಶ್ಮೀರ): ಜೀವನದಲ್ಲಿ ಬರುವ ಸವಾಲುಗಳನ್ನು ಧೈರ್ಯವಾಗಿ ಎದುರಸಬೇಕು ಎನ್ನುವ ಉದಾಹರಣೆಗೆ ನೀರು ಸಂಬ್ಯಾಲ್ ಅವರೇ ಸಾಕ್ಷಿ.ಇವರ ಜೀವನ ಕಥೆ ನಿಜಕ್ಕೂ ಎಲ್ಲರಿಗೂ ಹುಬ್ಬೇರಿಸುವಂತೆ ಮಾಡುತ್ತದೆ.

ನೀರು ಪತಿ ರವಿಂದರ್ ರೆಜಿಮೆಂಟ್ ನಲ್ಲಿ ಕಾರ್ಯನಿರ್ವಹಿಸುತ್ತಿರಬೇಕಾದರೆ 2015 ರಲ್ಲಿ ಮೃತಪಟ್ಟರು. ನೀರು ಅವರನ್ನು 2013 ರಲ್ಲಿ ಮದುವೆಯಾಗಿದ್ದರು ಅಲ್ಲದೆ ಈಗ ಅವಳಿಗೆ ಎರಡು ವರ್ಷದ ಮಗಳು ಸಹ ಇದ್ದಾಳೆ. ಈಕೆ ತನ್ನ ಪತಿ ಸೇವೆಯಲ್ಲಿರಬೇಕಾದರೆ ಮೃತಪಟ್ಟ ಸುದ್ದಿಯನ್ನು ತಿಳಿದು ದಿಕ್ಕು ತೋಚದಂತಾದರು. ಇದಾದನಂತರ ಆಕೆ ಗಂಡನ ಹಾದಿಯನ್ನು ತುಳಿಯುವ ನಿರ್ಧಾರವನ್ನು ಕೈಗೊಂಡರು.ಈಗ ಅವರು ಯಶಸ್ವಿಯಾಗಿ ಮಿಲಿಟರಿ ಟ್ರೇನಿಂಗ್ ಪಡೆದುಕೊಂಡು ಲೆಫ್ಟಿನೆಂಟ್ ಆಗಿ ಸೈನ್ಯಕ್ಕೆ ಸೇರಲಿದ್ದಾರೆ.

ಈಗ ತಮ್ಮ ನಿರ್ಧಾರಕ್ಕೆ ಸ್ಪೂರ್ತಿಯಾದ ಸಂಗತಿಗಳ ಬಗ್ಗೆ ಮಾತನಾಡಿದ ಅವರು ಲೆಫ್ಟಿನೆಂಟ್ ನೀರೂ, "ನಾನು ಏಪ್ರಿಲ್ 2013 ರಲ್ಲಿ ಲೆಫ್ಟಿನೆಂಟ್ ರೈಫಲ್ಮೆನ್ ರವೀಂದರ್ ಸಿಂಗ್ ಸಂಬ್ಯಾಲ್ ರನ್ನು ಮದುವೆಯಾದೆ. ನನ್ನ ಪತಿ ಸೈನ್ಯದಲ್ಲಿದ್ದಾಗ,ಹುತಾತ್ಮರಾದರು. ಇದಾದ ನಂತರ ವಾಸ್ತವಿಕತೆಯನ್ನು ಸ್ವೀಕರಿಸುವುದು ನಿಜಕ್ಕೂ ಕಷ್ಟಕರವಾಗಿತ್ತು. ಆದರೆ ನನಗೆ, ನನ್ನ ಮಗಳು ನನ್ನ ಸ್ಫೂರ್ತಿಯಾಗಿದ್ದು, ಆದ್ದರಿಂದ  ನಾನು ಅವಳ ತಂದೆಯ ಅನುಪಸ್ಥಿತಿಯನ್ನು ತುಂಬಲು ನಿರ್ಧರಿಸಿದೆ. ಇದಕ್ಕೆ ನನಗೆ ತಂದೆ ತಾಯಿಗಳು ಸಹ ಬೆಂಬಲ ನೀಡಿದರು. ಮುಂದೆ ನಾನು 49 ವಾರಗಳ ಮಿಲಿಟರಿ ತರಬೇತಿಯನ್ನು ಪೂರ್ಣಗೊಳಿಸಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

Trending News