ಮಾರುತಿಯಿಂದ ಎರ್ಟಿಗಾ ಟೂರ್ M ಡೀಸೆಲ್ ಕಾರು ಬಿಡುಗಡೆ; ವೈಶಿಷ್ಟ್ಯಗಳೇನು ತಿಳಿಯಿರಿ!

ಹೊಸ ಮಾರುತಿ ಎರ್ಟಿಗಾ ಟೂರ್ ಎಂ ಡೀಸೆಲ್‌ ಕಾರು ಪ್ರತಿ ಲೀಟರ್ ಗೆ 24.2 ಕಿ.ಮೀ. ಮೈಲೇಜ್ ನೀಡಲಿದೆ. ಅದರ ಸಿಎನ್‌ಜಿ ರೂಪಾಂತರ ಕಾರಿನ ಮೈಲೇಜ್ 26.20 ಕಿ.ಮೀ ಆಗಿದ್ದರೆ, ಪೆಟ್ರೋಲ್ ರೂಪಾಂತರವು ಪ್ರತಿ ಲೀಟರ್‌ಗೆ 18.18 ಕಿ.ಮೀ ಮೈಲೇಜ್ ನೀಡುತ್ತದೆ.

Last Updated : Oct 14, 2019, 07:58 PM IST
ಮಾರುತಿಯಿಂದ ಎರ್ಟಿಗಾ ಟೂರ್ M ಡೀಸೆಲ್ ಕಾರು ಬಿಡುಗಡೆ; ವೈಶಿಷ್ಟ್ಯಗಳೇನು ತಿಳಿಯಿರಿ! title=

ನವದೆಹಲಿ: ಅತಿದೊಡ್ಡ ಕಾರು ಉತ್ಪಾದನಾ ಕಂಪನಿ ಮಾರುತಿ ಸುಜುಕಿ ಬಿಡುಗಡೆ ಮಾಡಿದ ಎರ್ಟಿಗಾ ಕಾರು ಯಶಸ್ಸು ಗಳಿಸಿದ ಬೆನ್ನಲ್ಲೇ, ಎರ್ಟಿಗಾ ಟೂರ್ ಎಂ ನ ಡೀಸೆಲ್ ರೂಪಾಂತರವನ್ನು ಬಿಡುಗಡೆ ಮಾಡಿದೆ. 

ಕಂಪನಿಯು ಎರ್ಟಿಗಾ ಟೂರ್ ಎಂ ನ ಡೀಸೆಲ್ ರೂಪಾಂತರದ ಆರಂಭಿಕ ಶೋ ರೂಂ ಬೆಲೆಯನ್ನು 9.81 ಲಕ್ಷ ರೂ. ನಿಗದಿಗೊಳಿಸಿದೆ. ಈ ವರ್ಷದ ಮೇ ತಿಂಗಳಲ್ಲಿ ಕಂಪನಿಯು ಈ ಕಾರಿನ ಪೆಟ್ರೋಲ್ ರೂಪಾಂತರವನ್ನು ಕೇವಲ 8 ಲಕ್ಷ ರೂಪಾಯಿಗಳಿಗೆ ಬಿಡುಗಡೆ ಮಾಡಿತ್ತು. ಬಳಿಕ ಜುಲೈನಲ್ಲಿ ಸಿಎನ್‌ಜಿ ರೂಪಾಂತರವನ್ನು ಪರಿಚಯಿಸಿದ್ದ ಕಂಪನಿ  8.83 ಲಕ್ಷ ರೂ. ಬೆಲೆ ನಿಗದಿ ಮಾಡಿದೆ. ಈ ಕಾರು ವಿಡಿ ಟ್ರಿಮ್ ಅನ್ನು ಆಧರಿಸಿದ್ದು, ವಿಶೇಷವಾಗಿ ವಾಣಿಜ್ಯ ಉದ್ದೇಶದಿಂದ ಬೇಡಿಕೆಯಿದೆ. ಈ ಕಾರು ಡೀಸೆಲ್ ರೂಪಾಂತರದಲ್ಲಿ  ಬಿಳಿ, ಸಿಲ್ವರ್ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ.

ಪ್ರಬಲ ಎಂಜಿನ್
1.5 ಲೀಟರ್ DDiS 225 ಟರ್ಬೋಚಾರ್ಜ್ ಮೋಟಾರ್ ಹೊಂದಿರುವ ನೂತನ  ಎರ್ಟಿಗಾ ಟೂರ್ ಎಂ ಕಾರು, 95 ಎಚ್‌ಪಿ ಪವರ್ ಮತ್ತು 225 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ.

ಉತ್ತಮ ಮೈಲೇಜ್
ಹೊಸ ಮಾರುತಿ ಎರ್ಟಿಗಾ ಟೂರ್ ಎಂ ಡೀಸೆಲ್‌ ಕಾರು ಪ್ರತಿ ಲೀಟರ್ ಗೆ 24.2 ಕಿ.ಮೀ. ಮೈಲೇಜ್ ನೀಡಲಿದೆ. ಅದರ ಸಿಎನ್‌ಜಿ ರೂಪಾಂತರ ಕಾರಿನ ಮೈಲೇಜ್ 26.20 ಕಿ.ಮೀ ಆಗಿದ್ದರೆ, ಪೆಟ್ರೋಲ್ ರೂಪಾಂತರವು ಪ್ರತಿ ಲೀಟರ್‌ಗೆ 18.18 ಕಿ.ಮೀ ಮೈಲೇಜ್ ನೀಡುತ್ತದೆ.

ಈ ಕಾರಿನ ವಿಶೇಷ ಲಕ್ಷಣಗಳು
ಮಾರುತಿ ಎರ್ಟಿಗಾ ಟೂರ್ ಎಂ ಡೀಸೆಲ್‌ ಕಾರು ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌, ಬಾಡಿ ಕಲರ್ ಡೋರ್ ಹ್ಯಾಂಡಲ್‌ಗಳನ್ನು ಹೊಂದಿದೆ. ಈ ಏಳು ಆಸನಗಳ ಕಾರಿನಲ್ಲಿ ಮ್ಯಾನುಯಲ್ ಎಸಿ, ಏರ್ ಕೂಲ್ಡ್ ಟ್ವಿನ್ ಕಪ್ ಇದೆ. ಸುರಕ್ಷತೆಯ ದೃಷ್ಟಿಯಿಂದ, ಎರಡು ಏರ್‌ಬ್ಯಾಗ್‌, ಸೆಂಟ್ರಲ್ ಲಾಕಿಂಗ್ ಅಳವಡಿಸಲಾಗಿದ್ದು, ಗರಿಷ್ಠ ವೇಗ ಮಿತಿ ವ್ಯವಸ್ಥೆ, ವೇಗ ಸಂವೇದನೆ, ಆಟೋ ಡೋರ್ ಲಾಕ್ ವ್ಯವಸ್ಥೆಯಿದೆ. ಇದಲ್ಲದೆ, ಡಿಜಿಟಲ್ ಲಾಕ್-ಅನ್ಲಾಕ್ ಸಿಸ್ಟಮ್, ಡಿಜಿಟಲ್ ಕ್ಲಾಕ್ ಸೌಲಭ್ಯ ಸಹ ಈ ನೂತನ ಕಾರಿನಲ್ಲಿದೆ. 

Trending News