ಮಾರುತಿ ಸುಜುಕಿ ಮಾರಾಟದಲ್ಲಿ ಶೇಕಡಾ 3.6 ರಷ್ಟು ಕುಸಿತ

ದೀರ್ಘಕಾಲದ ಮಂದಗತಿಯು ಇನ್ನೂ ವಾಹನ ಮಾರಾಟದ ಮೇಲೆ ಪರಿಣಾಮ ಬೀರುತ್ತಿದೆ. ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ 2020 ರ ಫೆಬ್ರವರಿಯಲ್ಲಿ 3.6 ಶೇಕಡಾ ಮಾರಾಟ ಕುಸಿತವನ್ನು ದಾಖಲಿಸಿದೆ.

Last Updated : Mar 1, 2020, 01:44 PM IST
ಮಾರುತಿ ಸುಜುಕಿ ಮಾರಾಟದಲ್ಲಿ ಶೇಕಡಾ 3.6 ರಷ್ಟು ಕುಸಿತ   title=
ಸಾಂದರ್ಭಿಕ ಚಿತ್ರ

ನವದೆಹಲಿ: ದೀರ್ಘಕಾಲದ ಮಂದಗತಿಯು ಇನ್ನೂ ವಾಹನ ಮಾರಾಟದ ಮೇಲೆ ಪರಿಣಾಮ ಬೀರುತ್ತಿದೆ. ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ 2020 ರ ಫೆಬ್ರವರಿಯಲ್ಲಿ 3.6 ಶೇಕಡಾ ಮಾರಾಟ ಕುಸಿತವನ್ನು ದಾಖಲಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಮಾರಾಟವಾದ 139,100 ಯುನಿಟ್‌ಗಳಿಗೆ ಹೋಲಿಸಿದರೆ ದೇಶೀಯ ಮಾರುಕಟ್ಟೆಯಲ್ಲಿ 134,150 ಯುನಿಟ್ ಮಾರಾಟವಾಗಿದೆ. ಕಂಪನಿಯು ಗ್ಲ್ಯಾನ್ಜಾ ಎಂದು ಕರೆಯಲ್ಪಡುವ ಬಾಲೆನೊದ 2699 ಯುನಿಟ್‌ಗಳನ್ನು ಟೊಯೋಟಾಗೆ ರವಾನಿಸಿದೆ ಮತ್ತು ಅದರ ರಫ್ತು ಶೇಕಡಾ 7.1 ರಷ್ಟು ಏರಿಕೆಯಾಗಿ 10,261 ಯುನಿಟ್‌ಗಳಿಗೆ ತಲುಪಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಮಾರಾಟವಾದ 148,682 ಯುನಿಟ್‌ಗಳಿಗೆ ಹೋಲಿಸಿದರೆ. ಒಟ್ಟಾರೆ ಮಾರಾಟವು ಶೇಕಡಾ 1.1 ರಷ್ಟು ಕುಸಿದು 147,110 ಯುನಿಟ್‌ಗಳಿಗೆ ತಲುಪಿದೆ.

ಆಲ್ಟೊ ಮತ್ತು ಎಸ್-ಪ್ರೆಸ್ಸೊ ಸೇರಿದಂತೆ ಮಿನಿ ವಿಭಾಗವು ಕಳೆದ ವರ್ಷ ಇದೇ ತಿಂಗಳಲ್ಲಿ ಮಾರಾಟವಾದ 24,751 ಯುನಿಟ್‌ಗಳಿಗೆ ಹೋಲಿಸಿದರೆ ಗಣನೀಯ ಸುಧಾರಣೆ 27,499 ಯುನಿಟ್‌ಗಳಲ್ಲಿ 11.1 ಶೇಕಡಾ ಏರಿಕೆಯಾಗಿದೆ. ವಿಟಾರಾ ಬ್ರೆಜಾ ಬಿಎಸ್ 6 ಪೆಟ್ರೋಲ್ ಫೇಸ್‌ಲಿಫ್ಟ್ ಮತ್ತು ಎಸ್-ಕ್ರಾಸ್ ಬಿಎಸ್ 6 ಪೆಟ್ರೋಲ್‌ನಂತಹ ಯುಟಿಲಿಟಿ ವೆಹಿಕಲ್ ವಿಭಾಗವು ಅಸ್ತಿತ್ವದಲ್ಲಿರುವ ಎರ್ಟಿಗಾ ಮತ್ತು ಎಕ್ಸ್‌ಎಲ್ 6 ರೊಂದಿಗೆ 3.5 ಶೇಕಡಾ ಏರಿಕೆ ದಾಖಲಿಸಿದ್ದು, ಒಂದು ವರ್ಷದ ಹಿಂದೆ ಮಾರಾಟವಾದ 21,834 ಯುನಿಟ್‌ಗಳ ವಿರುದ್ಧ 22,604 ಯುನಿಟ್ ಮಾರಾಟವಾಗಿದೆ

ಮಾರುತಿ ಸುಜುಕಿ ಇಕೊ ವ್ಯಾನ್  ಕಳೆದ ವರ್ಷ ಇದೇ ತಿಂಗಳಲ್ಲಿ ಮಾರಾಟವಾದ 14,565 ಯುನಿಟ್‌ಗಳಿಗೆ ಹೋಲಿಸಿದರೆ 11,227 ಯುನಿಟ್‌ಗಳಲ್ಲಿ 22.9 ರಷ್ಟು ಕುಸಿತ ಕಂಡಿದೆ.ಸೂಪರ್ ಕ್ಯಾರಿ ವಾಣಿಜ್ಯ ವಾಹನದ ಮಾರಾಟವು 2019 ರ ಫೆಬ್ರವರಿಯಲ್ಲಿ ಮಾರಾಟವಾದ 2188 ಯುನಿಟ್‌ಗಳ ವಿರುದ್ಧ ಕೇವಲ 448 ಯುನಿಟ್‌ಗಳನ್ನು ಮಾರಾಟ ಮಾಡುವ ಶೇಕಡಾ 79.5 ರಷ್ಟು ಕುಸಿತ ಕಂಡಿದೆ. ವಿಭಾಗದಾದ್ಯಂತದ ಮಾರಾಟದಲ್ಲಿನ ಕುಸಿತವು ಗ್ರಾಹಕರ ಋಣಾತ್ಮಕ ಮನೋಭಾವದಿಂದಾಗಿ ಮಾರುಕಟ್ಟೆಯಲ್ಲಿ ಕಡಿಮೆ ಬೇಡಿಕೆಗೆ ಕಾರಣವಾಗಿದೆ ಎನ್ನಲಾಗಿದೆ.

Trending News