ಮಹಾರಾಷ್ಟ್ರದ ಆರ್ಡಿನೆನ್ಸ್ ಫ್ಯಾಕ್ಟರಿಯಲ್ಲಿ ಭಾರೀ ಸ್ಪೋಟ !ಹಲವು ಮಂದಿ ಸಾವನ್ನಪ್ಪಿರುವ ಶಂಕೆ

ವರದಿಯ ಪ್ರಕಾರ, ನಾಗ್ಪುರ ಬಳಿಯ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಬೃಹತ್ ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.  

Written by - Ranjitha R K | Last Updated : Jan 24, 2025, 02:16 PM IST
  • ಮಹಾರಾಷ್ಟ್ರದ ಬಾಂದ್ರಾ ಜಿಲ್ಲೆಯ ಆರ್ಡಿನೆನ್ಸ್ ಫ್ಯಾಕ್ಟರಿಯಲ್ಲಿ ಬೆಂಕಿ
  • ಕಾರ್ಮಿಕರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ
  • ಸ್ಫೋಟದ ಅಪಾಯಕಾರಿ ವಿಡಿಯೋ
ಮಹಾರಾಷ್ಟ್ರದ ಆರ್ಡಿನೆನ್ಸ್ ಫ್ಯಾಕ್ಟರಿಯಲ್ಲಿ ಭಾರೀ ಸ್ಪೋಟ !ಹಲವು ಮಂದಿ  ಸಾವನ್ನಪ್ಪಿರುವ ಶಂಕೆ

ಮಹಾರಾಷ್ಟ್ರದ ಬಾಂದ್ರಾ ಜಿಲ್ಲೆಯ ಆರ್ಡಿನೆನ್ಸ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಘಟನೆಯ ವೇಳೆ ಕಾರ್ಖಾನೆಯಲ್ಲಿದ್ದ ಕಾರ್ಮಿಕರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಬೆಳಗ್ಗೆ 10.30ರ ಸುಮಾರಿಗೆ ಆರ್ಡಿನೆನ್ಸ್ ಕಾಂಪ್ಲೆಕ್ಸ್‌ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜಯ್ ಕೋಲ್ಟೆ ತಿಳಿಸಿದ್ದಾರೆ.

Add Zee News as a Preferred Source

ಸ್ಫೋಟದ ಅಪಾಯಕಾರಿ ವಿಡಿಯೋ ನೋಡಿ-

 

ವರದಿಯ ಪ್ರಕಾರ, ನಾಗ್ಪುರ ಬಳಿಯ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಬೃಹತ್ ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.  ಸ್ಫೋಟದ ವೇಳೆ ಛಾವಣಿ ಕುಸಿದು ಕನಿಷ್ಠ 12 ಮಂದಿಅದರೊಳಗೆ ಸಿಲುಕಿದ್ದಾರೆ ಎಂದು  ಜಿಲ್ಲಾಧಿಕಾರಿ ಸಂಜಯ್ ಕೋಲ್ಟೆ ತಿಳಿಸಿದ್ದಾರೆ. ಈ ಪೈಕಿ ಇಬ್ಬರನ್ನು ರಕ್ಷಿಸಲಾಗಿದ್ದು, ಉಳಿದವರನ್ನು ಹೊರ ತೆಗೆಯುವ ಕಾರ್ಯ ಮುಂದುವರೆದಿದೆ.  ಸ್ಫೋಟದ ತೀವ್ರತೆಯು 5 ಕಿಮೀ ದೂರದವರೆಗೆ ಕೇಳಿ ಬಂದಿತ್ತು. 

ಇದನ್ನೂ ಓದಿ : ಕಸದ ತೊಟ್ಟಿಯಲ್ಲಿ ನಟಿಯ ಕೈ-ಕಾಲು ಪತ್ತೆ..! ಭೀಕರ ಕೊಲೆ ರಹಸ್ಯ ಭೇದಿಸಿದ ಸಾಕ್ಷಾತ್‌ "ಶಿವ-ಪಾವರ್ತಿ".. ಆದ್ರೆ ತಲೆ ನಾಪತ್ತೆ..

“ಭಾಂದ್ರಾದಲ್ಲಿನ ಶಸ್ತ್ರಾಸ್ತ್ರ ಕಾರ್ಖಾನೆಯ ಸ್ಫೋಟದಲ್ಲಿ ಮೇಲ್ಛಾವಣಿ ಕುಸಿದು 13 ರಿಂದ 14 ಕಾರ್ಮಿಕರು ಸಿಲುಕಿರುವ ಸುದ್ದಿ ಇದೆ. ಇಲ್ಲಿಯವರೆಗೆ ಬಂದಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸ್ಥಳದಲ್ಲಿದ್ದಾರೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಎಸ್‌ಡಿಆರ್‌ಎಫ್ ಮತ್ತು ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್ ತಂಡಗಳನ್ನು ಸಹ ಕರೆಯಲಾಗಿದ್ದು, ರಕ್ಷಣಾ ಪಡೆಗಳೊಂದಿಗೆ ಸಮನ್ವಯತೆಯಿಂದ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದ್ದಾರೆ. 

ಪೊಲೀಸರು ಹೇಳಿದ್ದೇನು?
ಅಗ್ನಿಶಾಮಕ ದಳ, ಪೊಲೀಸರು ಮತ್ತು ಸ್ಥಳೀಯ ವಿಪತ್ತು ತಂಡಗಳು ಸ್ಥಳದಲ್ಲಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜವಾಹರ್ ನಗರ ಪ್ರದೇಶದಲ್ಲಿರುವ ಕಾರ್ಖಾನೆಯ ಎಲ್‌ಟಿಪಿ ವಿಭಾಗದಲ್ಲಿ ಸ್ಫೋಟ ಸಂಭವಿಸಿದೆ ಎಂದು ಹೇಳಿದ್ದಾರೆ. ಸ್ಫೋಟದ ಸಮಯದಲ್ಲಿ, 14 ನೌಕರರು 'ಎಲ್‌ಟಿಪಿ ವಿಭಾಗದಲ್ಲಿ' ಕೆಲಸ ಮಾಡುತ್ತಿದ್ದರು.ಅದರಲ್ಲಿ ಮೂವರು ಜೀವಂತವಾಗಿ ಉಳಿಸಲ್ಪಟ್ಟರು ಮತ್ತು ಒಬ್ಬರು ಸಾವನ್ನಪ್ಪಿದರು ಎಂದು ಅಧಿಕಾರಿ ಹೇಳಿದರು.

ಇದನ್ನೂ ಓದಿ : ಪತ್ನಿಯ ದೇಹವನ್ನು ತುಂಡು ತುಂಡು ಮಾಡಿ ಕುಕ್ಕರ್‌ನಲ್ಲಿ ಬೇಯಿಸಿ ಅಡುಗೆ ಮಾಡಿದ ಪತಿ..! ಮುಂದಾಗಿದ್ದು ರೋಚಕ..

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

 

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News