close

News WrapGet Handpicked Stories from our editors directly to your mailbox

ಈ ರಾಜ್ಯದ 2100 ರೈತರ ಸಾಲ ತೀರಿಸಿದ ಅಮಿತಾಬ್ ಬಚ್ಚನ್ ..!

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಈಗ ಬಿಹಾರದಲ್ಲಿನ ಸುಮಾರು 2100 ರೈತರ ಸಾಲವನ್ನು ತಿರಿಸುವುದರ ಮೂಲಕ ಗಮನ ಸೆಳೆದಿದ್ದಾರೆ.

Updated: Jun 12, 2019 , 03:35 PM IST
ಈ ರಾಜ್ಯದ 2100 ರೈತರ ಸಾಲ ತೀರಿಸಿದ ಅಮಿತಾಬ್ ಬಚ್ಚನ್ ..!
Photo courtesy: https://srbachchan.tumblr.com

ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಈಗ ಬಿಹಾರದಲ್ಲಿನ ಸುಮಾರು 2100 ರೈತರ ಸಾಲವನ್ನು ತಿರಿಸುವುದರ ಮೂಲಕ ಗಮನ ಸೆಳೆದಿದ್ದಾರೆ.

ಅಮಿತಾಬ್ ಈ ವಿಷಯವನ್ನು ಈಗ ತಮ್ಮ ಬ್ಲಾಗ್ ವೊಂದರಲ್ಲಿ ಬರೆದುಕೊಂಡಿದ್ದಾರೆ." ಈಗ ರೈತರಿಗೆ ನೀಡಿದ ಭರವಸೆಯನ್ನು ಈಡೇರಿಸಲಾಗಿದೆ. ಸಾಲವನ್ನು ಹೊಂದಿರುವ 2100 ರೈತರ ಸಾಲವನ್ನು ಮರುಪಾವತಿಸಲಾಗಿದೆ. ಕೆಲವರನ್ನು ಜನಕ್ ಗೆ ವೈಯಕ್ತಿಕವಾಗಿ ಕರೆದು ಶ್ವೇತಾ ಹಾಗೂ ಅಭಿಷೇಕ್ ಅವರ ಮೂಲಕ ಹಂಚಲಾಗಿದೆ " ಎಂದು ಅಮಿತಾಬ್ ಬಚ್ಚನ್ ಬರೆದುಕೊಂಡಿದ್ದಾರೆ.

ಅಷ್ಟಕ್ಕೂ ಅಮಿತಾಬ್ ಬಚ್ಚನ್ ರೈತರಿಗೆ ಸಹಾಯ ಮಾಡುತ್ತಿರುವುದು ಇದೇ ಮೊದಲೇನಲ್ಲ, ಕಳೆದ ವರ್ಷಉತ್ತರ ಪ್ರದೇಶದಲ್ಲಿ ಒಂದು ಸಾವಿರಕ್ಕೂ ಅಧಿಕಾರ ರೈತರ ಸಾಲವನ್ನು ತಿರಿಸಿದ್ದರು.