ಬಾಯ್‌ ಫ್ರೇಂಡ್‌ ಇದ್ದೂ ಮದುವೆ ನಾಟಕ.. ಅಮಾಯಕನ ಕೊಂದಳು ರಾಕ್ಷಸಿ..! ಘೋರ ದುರಂತದ ಸತ್ಯ ಕೊನೆಗೂ ಬಹಿರಂಗ..

Meghalaya honeymoon murder : ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಮೇಘಾಲಯ ಪೊಲೀಸರು ಸೋನಮ್ ರಘುವಂಶಿ ಮತ್ತು ಆಕೆಯ ಗೆಳೆಯ ರಾಜ್ ಕುಶ್ವಾಹ ಅವರನ್ನು ಮುಖಾಮುಖಿ ಕುರಿಸಿ ವಿಚಾರಣೆ ನಡೆಸಿದರು.. ಈ ವೇಳೆ ಸೋನಮ್ ತನ್ನ ಪತಿ ರಾಜಾ ಅವರನ್ನು ಕೊಲ್ಲುವ ಸಂಚನ್ನು ಎಳೆಎಳೆಯಾಗಿ ಬಿಚ್ಚಿಟ್ಟರು..

Written by - Krishna N K | Last Updated : Jun 11, 2025, 08:55 PM IST
    • ರಾಜಾ ರಘುವಂಶಿ ಕೊಲೆ ಪ್ರಕರಣದ ಅಚ್ಚರಿ ಬೆಳವಣಿಗೆ
    • ತಪ್ಪೊಪ್ಪಿಕೊಂಡ ಸೋನಮ್ ರಘುವಂಶಿ ಮತ್ತು ಆಕೆಯ ಗೆಳೆಯ ರಾಜ್ ಕುಶ್ವಾಹ
    • ದೇಶವನ್ನೇ ಬೆಚ್ಚಿ ಬೀಳಿಸಿದ ಮೇಘಾಲಯ ಕೊಲೆ ಪ್ರಕರಣದ ಕೊನೆಗೂ ಸತ್ಯ ಬಟಾ ಬಯಲು
ಬಾಯ್‌ ಫ್ರೇಂಡ್‌ ಇದ್ದೂ ಮದುವೆ ನಾಟಕ.. ಅಮಾಯಕನ ಕೊಂದಳು ರಾಕ್ಷಸಿ..! ಘೋರ ದುರಂತದ ಸತ್ಯ ಕೊನೆಗೂ ಬಹಿರಂಗ..

Raja Raghuvanshi murder case : ದೇಶವನ್ನೇ ಬೆಚ್ಚಿ ಬೀಳಿಸಿದ ಮೇಘಾಲಯ ಕೊಲೆ ಪ್ರಕರಣದ ಕೊನೆಗೂ ಸತ್ಯ ಬಟಾ ಬಯಲಾಗಿದೆ. ನಗು ನಗುತ್ತಾ.. ಅದ್ಧೂರಿಯಾಗಿ ಮದುವೆಯಾಗಿ.. ಹನಿಮೂನ್‌ಗೆ ಬಂದು ಬಾಯ್‌ ಫ್ರೇಂಡ್‌ ಜೊತೆಗೂಡಿ ಗಂಡನನ್ನು ಮುಗಿಸಿದ ಕ್ರೂರಿ ಹೆಂಡತಿಯ ನೀಜ ಕೃತ್ಯ ಕೊನೆಗೂ ಬಹಿರಂಗವಾಗಿದೆ..

Add Zee News as a Preferred Source

ಹೌದು.. ರಾಜಾ ರಘುವಂಶಿ ಕೊಲೆ ವಿಚಾರಣೆಯ ಸಮಯದಲ್ಲಿ, ಪೊಲೀಸರು ತಮ್ಮಲ್ಲಿದ್ದ ಪುರಾವೆಗಳನ್ನು ತೋರಿಸಿ ಸೋನಮ್‌ ಮತ್ತು ಆಕೆಯ ಗೆಳೆಯ ರಾಜ್‌ ಕುಶ್ವಾಹನನ್ನು ಮುಖಾಮುಖಿಯಾಗಿ ಕೂರಿಸಿದರು. ಸಾಕ್ಷಿ ಆಧಾರಗಳನ್ನು ನೋಡಿದ ನಂತರ, ಸೋನಮ್ ಇನ್ನು ಸುಳ್ಳು ಹೇಳಲು ಏನೂ ಉಳಿದಿಲ್ಲ ಅಂತ ತಿಳಿದು, ಕೊನೆಗೂ ತಪ್ಪೊಪ್ಪಿಕೊಂಡಿದ್ದಾಳೆ..

ಇದನ್ನೂ ಓದಿ:ಗೂಗಲ್ ಮ್ಯಾಪ್ ನಂಬಿ ಕಾರು ಚಲಾವಣೆ, ಸೇತುವೆ ಮೇಲೆ ನೇತಾಡಿದ ಕಾರು..! ವಿಡಿಯೋ ವೈರಲ್..!

'ಆಪರೇಷನ್ ಹನಿಮೂನ್' ಅಡಿಯಲ್ಲಿ ಮೇಘಾಲಯ ಪೊಲೀಸರ ಮೇ 23 ರಂದು ಶಿಲ್ಲಾಂಗ್‌ನ ಸೊಹ್ರಾದಲ್ಲಿ ನಡೆದ ರಾಜಾ ರಘುವಂಶಿ ಹತ್ಯೆಯ ತನಿಖೆಯಲ್ಲಿ ಪ್ರಮುಖ ಸಂಗತಿ ಬೆಳಕಿಗೆ ಬಂದಿದೆ. ಪೊಲೀಸರು ಸೋನಮ್ ಮತ್ತು ರಾಜ್ ಕುಶ್ವಾಹ ಅವರನ್ನು ಮುಖಾಮುಖಿ ವಿಚಾರಣೆ ನಡೆಸಿದರು.

42 ಸಿಸಿಟಿವಿ ದೃಶ್ಯಾವಳಿಗಳು, ರಕ್ತಸಿಕ್ತ ಜಾಕೆಟ್‌ಗಳು, ಸೋನಮ್‌ನ ರೇನ್‌ಕೋಟ್ ಮತ್ತು ಇತರ ಸಾಕ್ಷ್ಯಗಳನ್ನು ಅವರ ಮುಂದೆ ಇಡಲಾಯಿತು. ಸಾಕ್ಷ್ಯಗಳನ್ನು ನೋಡಿದ ಸೋನಮ್ ಮತ್ತು ಗೆಳೆಯ ರಾಜ್ ಕುಶ್ವಾಹ... ಹಂತಕರಾದ ಆಕಾಶ್ ರಜಪೂತ್, ವಿಶಾಲ್ ಅಲಿಯಾಸ್ ವಿಕ್ಕಿ ಠಾಕೂರ್ ಮತ್ತು ಆನಂದ್ ಕುರ್ಮಿ ​​ಅವರೊಂದಿಗೆ ರಾಜಾ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದಾಗಿ ಕೊನೆಗೂ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ:ಪ್ರವಾಹದ ಸಾಗರದಲ್ಲಿ ಕಂಡು ಬಂದ ದೈತ್ಯ ಹಸಿರು ಹಾವು...! ಬೆಚ್ಚಿ ಬಿದ್ದ ಜನತೆ, ವಿಡಿಯೋ ವೈರಲ್..!

ಪೊಲೀಸ್ ತನಿಖೆಯಲ್ಲಿ ಸೋನಮ್ ರಾಜನನ್ನು ಹನಿಮೂನ್‌ಗಾಗಿ ಸೊಹ್ರಾದಲ್ಲಿನ ಏಕಾಂತ ಸ್ಥಳಕ್ಕೆ ಕರೆದೊಯ್ದಿದ್ದಾಳೆ. ನಂತರ ಕೊಲೆಗಾರರಿಗೆ ಅವನ ಲೋಕೆಶನ್‌ ಕಳುಹಿಸಿದ್ದಾಳೆ ಎಂದು ತಿಳಿದುಬಂದಿದೆ. ಕೊಲೆಯ ನಂತರ, ಸೋನಮ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ 'ಸಾತ್ ಜನ್ಮೋಂ ಕಾ ಸಾಥ್ ಹೈ' ಎಂದು ಪೋಸ್ಟ್ ಮಾಡುವ ಮೂಲಕ ತನಿಖೆಯನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದಳು. ಗುವಾಹಟಿ ರೈಲ್ವೆ ನಿಲ್ದಾಣದ ಬಳಿ ಪೊಲೀಸರು ಕೊಲೆ ಆಯುಧವನ್ನು ಸಹ ಪತ್ತೆಹಚ್ಚಿದ್ದಾರೆ.

ಸಧ್ಯ ಪ್ರಕರಣಕ್ಕೆ ಸಂಬಂಧಿಸಿ ಮೇಘಾಲಯ ಪೊಲೀಸರು ಸೋನಮ್, ರಾಜ್ ಕುಶ್ವಾಹ ಮತ್ತು ಮೂವರು ಹಂತಕರನ್ನು ಬಂಧಿಸಿದ್ದಾರೆ. ಸೋನಮ್ ಜೂನ್ 9 ರಂದು ಘಾಜಿಪುರದಲ್ಲಿ (ಉತ್ತರ ಪ್ರದೇಶ) ಶರಣಾದಳು.. ಪೊಲೀಸರ ಪ್ರಕಾರ, ರಾಜಾನನ್ನು ಹತ್ಯಗೈದು ರಾಜ್ ಕುಶ್ವಾಹ ಜೊತೆ ಹೊಸ ಜೀವನ ಆರಂಭಿಸುವುದು ಸೋನಮ್‌ನ ಉದ್ದೇಶವಾಗಿತ್ತು ಎಂದು ತಿಳಿದು ಬಂದಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News