ಭಾರತದ ಕೋಟ್ಯಂತರ ಜನರ ಮೇಲೆ ಬಡತನ ಹಾಗೂ ನಿರುದ್ಯೋಗದ ಕಾರ್ಮೋಡ: UN ವರದಿ

ಕೊರೊನಾ ವೈರಸ್ ಪ್ರಕೊಪದಿಂದ ಸದ್ಯ ಚೀನಾ ಹೊರಬರುತ್ತಿದ್ದು, ಚೀನಾದ ಕಾರ್ಮಿಕರು ಕೆಲಸಕ್ಕೆ ಮರಳುತ್ತಿದ್ದಾರೆ ಹಾಗೂ ಅಲ್ಲಿ ಲಾಕ್ ಡೌನ್ ಕೂಡ ತೆರವುಗೋಳಿಸಲಾಗುತ್ತಿದೆ. 

Last Updated : Apr 8, 2020, 04:14 PM IST
ಭಾರತದ ಕೋಟ್ಯಂತರ ಜನರ ಮೇಲೆ ಬಡತನ ಹಾಗೂ ನಿರುದ್ಯೋಗದ ಕಾರ್ಮೋಡ: UN ವರದಿ title=

ನವದೆಹಲಿ:ಕೊರೊನಾ ವೈರಸ್ ಪ್ರಕೊಪದಿಂದ ಸದ್ಯ ಚೀನಾ ಹೊರಬರುತ್ತಿದ್ದು, ಚೀನಾದ ಕಾರ್ಮಿಕರು ಕೆಲಸಕ್ಕೆ ಮರಳುತ್ತಿದ್ದಾರೆ ಹಾಗೂ ಅಲ್ಲಿ ಲಾಕ್ ಡೌನ್ ಕೂಡ ತೆರವುಗೋಳಿಸಲಾಗುತ್ತಿದೆ. ಆದರೆ ಇದಕ್ಕೆ ವಿಪರೀತ ಎಂಬಂತೆ ಕೊರೊನಾ ವೈರಸ್ ಇದೀಗ ಭಾರತವನ್ನು ಒಂದೇ ತಿಂಗಳ ಅವಧಿಯೊಳಗೆ ಜನರನ್ನು ಆಗಸದೆತ್ತರದಿಂದ ನೆಲಕ್ಕೆ ತಂದು ಅಪ್ಪಳಿಸಿದೆ. ಲಾಕ್ ಡೌನ್ ಹಾಗೂ ಕೊರೊನಾ ವೈರಸ್ ಕಾರಣ ದೇಶದ ಅರ್ಥಿಕ ವ್ಯವಸ್ಥೆ ಹಿನ್ನಡೆ ಅನುಭವಿಸುತ್ತಿದೆ ಎಂದು ಹಲವು ಸಂಸ್ಥೆಗಳು ಈಗಾಗಲೇ ಹೇಳಿವೆ. ಆದರೆ ಇದೀಗ ಈ ಕುರಿತು ವಿಶ್ವ ಸಂಸ್ಥೆ ಮತ್ತೊಂದು ವರದಿಯನ್ನು ನೀಡಿದ್ದು, ಈ ವರದಿ ಗಂಭೀರ ಮುನ್ಸೂಚನೆಯನ್ನು ನೀಡುತ್ತಿದೆ.

ದೇಶದ ಸುಮಾರು 40 ಕೋಟಿಗೂ ಅಧಿಕ ಕಾರ್ಮಿಕರು ಬಡತನದಲ್ಲಿ ಸಿಲುಕಿಕೊಳ್ಳಲಿದ್ದಾರೆ
ವಿಶ್ವ ಸಂಸ್ಥೆಯ ಕಾರ್ಮಿಕ ವಿಭಾಗ ಈ ಕುರಿತು ಎಚ್ಚರಿಕೆ ನೀಡಿದ್ದು, ಕೊರೊನಾ ವೈರಸ್ ಸಂಕಷ್ಟದ ಕಾರಣ ಭಾರತದ ಅಸಂಘಟಿತ ವಲಯದಲ್ಲಿ ಕಾರ್ಯ ನಿರ್ವಹಿಸುವ ಸುಮಾರು 40 ಕೋಟಿಗೂ ಅಧಿಕ ಜನರು ಬಡತನದಲ್ಲಿ ಸಿಲುಕಿಕೊಳ್ಳಲಿದ್ದು, ವಿಶ್ವಾದ್ಯಂತ ಸುಮಾರು 19.5 ಕೋಟಿ ನೌಕರರು ಫುಲ್ ಟೈಮ್ ನೌಕರಿ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಕುರಿತು ತನ್ನ ವರದಿ 'ILO ಮಾನಿಟರಿಂಗ್-ಎರಡನೇ ಆವೃತ್ತಿ: ಕೊವಿಡ್ 19 ಹಾಗೂ ಜಾಗತಿಕ ಕ್ರಿಯಾಶೀಲತೆ' ಯಲ್ಲಿ ಉಲ್ಲೇಖಿಸಿರುವ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ  (ILO), ಕೊರೊನಾ ವೈರಸ್ ಸಂಕಷ್ಟ ಎರಡನೇ ಜಾಗತಿಕ ಯುದ್ಧದ ಬಳಿಕ ಬಂದ ಅತಿ ದೊಡ್ಡ ಸಂಕಟ ಎಂದು ಹೇಳಿದೆ.

ಈ ಕುರಿತು ತನ್ನ ವರದಿಯಲ್ಲಿ ಹೇಳಿರುವ ILO, " ಭಾರತ, ನೈಜೀರಿಯಾ ಹಾಗೂ ಬ್ರೆಜಿಲ್ ರಾಷ್ಟ್ರಗಳಲ್ಲಿ ಲಾಕ್ ಡೌನ್ ಹಾಗೂ ಇತರೆ ನಿಯಂತ್ರಣ ಉಪಾಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಅನೌಪಚಾರಿಕ ಅರ್ಥವ್ಯವಸ್ಥೆ ಕಾರ್ಮಿಕರು ಪ್ರಭಾವಿತರಾಗಿದ್ದಾರೆ ಹಾಗೂ ಭಾರತದಲ್ಲಿನ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವವರ ಪಾಲ್ಗೊಳ್ಳುವಿಕೆ ಶೇ.90 ರಷ್ಟಿದ್ದು, ಇದರಲ್ಲಿ ಸುಮಾರು 40 ಕೋಟಿ ಕಾರ್ಮಿಕರು ಬಡತನದಲ್ಲಿ ಸಿಲುಕಿಕೊಳ್ಳುವ ಸಂಕಷ್ಟ ಎದುರಿಸುತ್ತಿದ್ದಾರೆ" ಎಂದು ಹೇಳಿದೆ. ಅಂದರೆ, ಭಾರತದಲ್ಲಿ ಜಾರಿಗೊಳಿಸಲಾಗಿರುವ ದೇಶವ್ಯಾಪಿ ಬಂದ್ ನಿಂದ ಈ ಕಾರ್ಮಿಕರು ವಿಪರೀತ ಪ್ರಭಾವಕ್ಕೆ ಒಳಗಾಗಿದ್ದು, ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಲು ಆಣಿಯಾಗಿದ್ದಾರೆ ಎಂದು ವರದಿ ಹೇಳಿದೆ.

ಈ ಕುರಿತು ಮಂಗಳವಾರ ಹೇಳಿಕೆ ನೀಡಿರುವ ಐಎಲ್ಒ ಮಹಾನಿರ್ದೇಶಕ ಗೈ ರೈಡರ್, "ಇದು ಕಳೆದ 75 ವರ್ಷಗಳಲ್ಲಿ ಅಂತರರಾಷ್ಟ್ರೀಯ ಸಹಕಾರಕ್ಕಾಗಿ ಅತಿದೊಡ್ಡ ಪರೀಕ್ಷೆಯಾಗಿದೆ. ಒಂದು ದೇಶ ವಿಫಲವಾದರೆ, ನಾವೆಲ್ಲರೂ ವಿಫಲರಾಗುತ್ತೇವೆ. ನಮ್ಮ ಜಾಗತಿಕ ಸಮಾಜದ ಎಲ್ಲಾ ವರ್ಗಗಳಿಗೆ ಸಹಾಯ ಮಾಡುವ ಪರಿಹಾರಗಳನ್ನು ನಾವು ಕಂಡುಕೊಳ್ಳಬೇಕಾಗಿದೆ, ಅದರಲ್ಲೂ ವಿಶೇಷವಾಗಿ ದುರ್ಬಲರು ಅಥವಾ ತಮ್ಮನ್ನು ತಾವು ಸಹಾಯ ಮಾಡುವ ಸಾಮರ್ಥ್ಯ ಹೊಂದಿರುವವರು' ಎಂದು ಹೇಳಿದ್ದಾರೆ.

Trending News