)
Minor killed Beggar : ಅಪ್ರಾಪ್ತ ಬಾಲಕನೊಬ್ಬ ನಡು ರಸ್ತೆಯಲ್ಲಿ ಭಿಕ್ಷುಕನನ್ನು ಕಲ್ಲಿನಿಂದ ಹೊಡೆದು ಕೊಂದಿದ್ದಾನೆ. ಅಷ್ಟೇ ಅಲ್ಲ, ಆತನ ಶವದ ಮುಂದೆ ನಿಂತು ನೃತ್ಯ ಮಾಡಿದ್ದಾನೆ. ಈ ಭಯಾನಕ ದೃಶ್ಯಗಳು ಕ್ಯಾಮೆರಾದಲ್ಲಿ ದಾಖಲಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಮಹಾರಾಷ್ಟ್ರದಲ್ಲಿ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ನಾಸಿಕ್ನ ತ್ರಿಂಬಕ್ ನಾಕಾ ಪ್ರದೇಶದಲ್ಲಿ, ಅಪ್ರಾಪ್ತ ಬಾಲಕನೊಬ್ಬ ರಸ್ತೆಯಲ್ಲಿ ಭಿಕ್ಷುಕನನ್ನು ಕಲ್ಲಿನಿಂದ ಹೊಡೆದು ಭೀಕರವಾಗಿ ಕೊಂದು ಹಾಕಿದ್ದಾನೆ. ಬಿಕ್ಷುಕನ ರಕ್ತಸಿಕ್ತ ಶವದ ಮುಂದೆ ನಿಂತು ನೃತ್ಯ ಮಾಡಿದ್ದಾನೆ.
ಪ್ತಸ್ತುತ ಪೊಲೀಸರು ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಆತ ಮಾನಸಿಕವಾಗಿ ಅಸ್ವಸ್ಥ ಎಂದು ಹೇಳುತ್ತಿದ್ದರೂ, ವೃದ್ಧ ವ್ಯಕ್ತಿಯೊಂದಿಗೆ ಇರುವ ವಿಡಿಯೋ ಕಾಣಿಸಿಕೊಂಡ ನಂತರ ಪೊಲೀಸರು ಈ ಅನುಮಾನದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ವಿವರಗಳಿಗೆ ಹೋದರೆ, ಅಪ್ರಾಪ್ತ ಬಾಲಕ ನಾಸಿಕ್ನ ಥಕ್ಕರ್ ಮಾರುಕಟ್ಟೆ ಬಳಿಯ ಹೋಟೆಲ್ನ ಹೊರಗೆ ತನ್ನ ಗೆಳತಿಯೊಂದಿಗೆ ನಿಂತಿದ್ದ. ಅವನ ಗೆಳತಿ ನೀರಿನ ಬಾಟಲಿ ತರಲು ಹೋದಾಗ, ಒಬ್ಬ ಭಿಕ್ಷುಕ ಆಕೆಯ ಜೊತೆ ಮಾತನಾಡುತ್ತಿದ್ದ ಇದನ್ನು ನೋಡಿದ ಬಾಲಕ ಭಿಕ್ಷುಕ ತನ್ನ ಗೆಳತಿಯೊಂದಿಗೆ ಏನೋ ಮಾಡುತ್ತಿದ್ದಾನೆ ಎಂಬ ಅನುಮಾನದಿಂದ ಕೋಪಗೊಂಡಿದ್ದಾನೆ
ತಕ್ಷಣ ಒಂದು ದೊಡ್ಡ ಕಲ್ಲನ್ನು ಎತ್ತಿಕೊಂಡು ಭಿಕ್ಷುಕನ ತಲೆಯ ಮೇಲೆ ಎಸೆದಿದ್ದಾನೆ. ಭಿಕ್ಷುಕ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿ ಅಪ್ರಾಪ್ತನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.