ಮೊಳಗಿತು ವಾರ್‌ ಸೈರನ್‌..! ಬೆಂಗಳೂರು, ದೆಹಲಿ ಸೇರಿದಂತೆ ಹಲವು ಮಹಾ ನಗರಗಳಲ್ಲಿ ಮಾಕ್‌ ಡ್ರಿಲ್‌.. 

Mock Drill in India : "ಆಪರೇಷನ್ ಸಿಂಧೂರ್" ಹೆಸರಿನಲ್ಲಿ ಭಾರತ ಮಧ್ಯರಾತ್ರಿ ಪಾಕಿಸ್ತಾನದ ಮೇಲೆ ವಾಯುದಾಳಿ ನಡೆಸಿತು. ಈ ದಾಳಿಯಲ್ಲಿ, ಪಿಒಕೆ ಮತ್ತು ಪಾಕಿಸ್ತಾನದಲ್ಲಿನ 9 ಭಯೋತ್ಪಾದಕ ಶಿಬಿರಗಳನ್ನು ನಾಶ ಮಾಡಲಾಗಿದೆ. ಇದೀಗ ಮುಂಜಾಗ್ರತಾ ಕ್ರಮವಾಗಿ ಗೃಹ ಸಚಿವಾಲಯದ ಆದೇಶದಂತೆ, ಯುದ್ಧ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಅಣಕು ಕವಾಯತುಗಳನ್ನು ಆಯೋಜಿಸಲಾಯಿತು. ಯುದ್ಧ ಭುಗಿಲೆದ್ದರೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಮತ್ತು ವಾಯುದಾಳಿಯ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದರ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಲಾಯಿತು. 

Written by - Krishna N K | Last Updated : May 7, 2025, 08:39 PM IST
    • "ಆಪರೇಷನ್ ಸಿಂಧೂರ್" ಹೆಸರಿನಲ್ಲಿ ಭಾರತ ಮಧ್ಯರಾತ್ರಿ ಪಾಕಿಸ್ತಾನದ ಮೇಲೆ ವಾಯುದಾಳಿ ನಡೆಸಿತು.
    • ಪಿಒಕೆ ಮತ್ತು ಪಾಕಿಸ್ತಾನದಲ್ಲಿನ 9 ಭಯೋತ್ಪಾದಕ ಶಿಬಿರಗಳನ್ನು ನಾಶ ಮಾಡಲಾಗಿದೆ
    • ಯುದ್ಧ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಅಣಕು ಕವಾಯತುಗಳನ್ನು ಆಯೋಜಿಸಲಾಯಿತು.
ಮೊಳಗಿತು ವಾರ್‌ ಸೈರನ್‌..! ಬೆಂಗಳೂರು, ದೆಹಲಿ ಸೇರಿದಂತೆ ಹಲವು ಮಹಾ ನಗರಗಳಲ್ಲಿ ಮಾಕ್‌ ಡ್ರಿಲ್‌.. 

Operation Sindoor live : ಬುಧವಾರ ದೆಹಲಿಯ ಖಾನ್ ಮಾರುಕಟ್ಟೆಯಲ್ಲಿ ಅಣಕು ಪ್ರದರ್ಶನ ನಡೆಸಲಾಯಿತು. ಇದರಲ್ಲಿ ಭದ್ರತಾ ಪಡೆಗಳು ಮತ್ತು ವಿಪತ್ತು ನಿರ್ವಹಣಾ ಇಲಾಖೆ ಭಾಗವಹಿಸಿದ್ದವು. ಮತ್ತೊಂದೆಡೆ, ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಅಣಕು ಪ್ರದರ್ಶನವನ್ನೂ ನಡೆಸಲಾಯಿತು. 

Add Zee News as a Preferred Source

ಬೆಂಗಳೂರಿನ ಹಲಸೂರು ಲೇಕ್‌, ಜೈಪುರದ ಎಎಐ ರಸ್ತೆ, ಪುಣೆಯ ಕೌನ್ಸಿಲ್ ಹಾಲ್ ಮತ್ತು ಹೈದರಾಬಾದ್‌ನ ಕಾಚೆಗುಡ ರೈಲು ನಿಲ್ದಾಣದಲ್ಲಿ ಮಾಕ್‌ ಡ್ರೀಲ್‌ ನಡೆಸಲಾಯಿತು. ವಾಯುದಾಳಿಯಿಂದ ಹೇಗೆ ರಕ್ಷಿಸಿಕೊಳ್ಳುವುದು ಎಂಬುದನ್ನು ಪ್ರದರ್ಶಿಸಲು ಮುಂಬೈನ ಕ್ರಾಸ್ ಮೈದಾನ ಮತ್ತು ಸಿಎಸ್‌ಎಂಟಿಯಲ್ಲಿ ಅಣಕು ಕವಾಯತುಗಳನ್ನು ನಡೆಸಲಾಯಿತು.

ಇದನ್ನೂ ಓದಿ:'ಆಪರೇಷನ್ ಸಿಂಧೂರ್'..! ಪಾಕ್‌ ಗಡಿದಾಟದೇ 9 ಭಯೋತ್ಪಾದಕ ಶಿಬಿರಗಳನ್ನು ಭಾರತ ನಾಶಪಡಿಸಿತು ಹೇಗೆ..?

ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಸ್ವಪ್ನಿಲ್ ನಿಲಾ ಈ ಬಗ್ಗೆ ಮಾಹಿತಿ ನೀಡಿದರು. ಮುಂಬೈನ ಸಿಎಸ್‌ಎಂಟಿ ನಿಲ್ದಾಣದಲ್ಲಿ ಅಣಕು ಡ್ರಿಲ್ ನಡೆಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರೈಲ್ವೆ ಸನ್ನದ್ಧತೆಯ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಯಿತು ಮತ್ತು ಸಾರ್ವಜನಿಕರಿಗೆ ಎಚ್ಚರದಿಂದಿರುವಂತೆ ಸಂದೇಶವನ್ನು ನೀಡಲಾಯಿತು. 

ಆಪರೇಷನ್‌ ಸಿಂಧೂರ : ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, ಭಾರತವು ವಾಯುದಾಳಿಯ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಈ ದಾಳಿಯಲ್ಲಿ, ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿರುವ 9 ಭಯೋತ್ಪಾದಕ ಅಡಗುತಾಣಗಳು ನಾಶವಾದವು. ಅಲ್ಲದೆ, ಈ ದಾಳಿಯಲ್ಲಿ ನಮ್ಮ 26 ಜನರು ಸಾವನ್ನಪ್ಪಿದ್ದಾರೆ, 46 ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News