ಈರುಳ್ಳಿಗೆ ಸಂಬಂಧಿಸಿದಂತೆ Good news ನೀಡಿದ ಮೋದಿ ಸರ್ಕಾರ!

ಇತ್ತೀಚೆಗೆ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಚಿವರ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ. ಈ ವೇಳೆ ಮುಂದಿನ ವರ್ಷಕ್ಕೆ ಸುಮಾರು ಒಂದು ಲಕ್ಷ ಟನ್ ಈರುಳ್ಳಿ ಬಫರ್ ಸ್ಟಾಕ್ ರಚಿಸಲು ನಿರ್ಧರಿಸಲಾಗಿದೆ.

Last Updated : Dec 31, 2019, 07:07 AM IST
ಈರುಳ್ಳಿಗೆ ಸಂಬಂಧಿಸಿದಂತೆ Good news ನೀಡಿದ ಮೋದಿ ಸರ್ಕಾರ!  title=

ನವದೆಹಲಿ: ಹೆಚ್ಚುತ್ತಿರುವ ಈರುಳ್ಳಿ ಬೆಲೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಶೀಘ್ರದಲ್ಲೇ ದೊಡ್ಡ ಪರಿಹಾರ ಸಿಗಲಿದೆ. ಅದೇ ಸಮಯದಲ್ಲಿ, ಏರುತ್ತಿರುವ ಬೆಲೆಗಳು ಮತ್ತು ಈರುಳ್ಳಿ(Onion) ದಾಸ್ತಾನುಗಳ ಕೊರತೆ ನಿವಾರಿಸಲು ಮೋದಿ ಸರ್ಕಾರ ಈರುಳ್ಳಿ ಬಗ್ಗೆ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ.  ಇದಕ್ಕಾಗಿ ಸರ್ಕಾರ ಒಂದು ಯೋಜನೆಯನ್ನು ಸಿದ್ಧಪಡಿಸಿದೆ. ಮುಂದಿನ ವರ್ಷ ಒಂದು ಲಕ್ಷ ಟನ್ ಈರುಳ್ಳಿ ಬಫರ್ ಸ್ಟಾಕ್ ರಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇತ್ತೀಚೆಗೆ ತಲೆದೋರಿರುವ ಈರುಳ್ಳಿ ಬೆಲೆ ಏರಿಕೆ ಅಂತಹ ಪರಿಸ್ಥಿತಿಯನ್ನು ನಿಭಾಯಿಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಪ್ರಸಕ್ತ ವರ್ಷದಲ್ಲಿ ಸರ್ಕಾರವು 56,000 ಟನ್ ಈರುಳ್ಳಿ ಬಫರ್ ಸ್ಟಾಕ್ ಅನ್ನು ಸಿದ್ಧಪಡಿಸಿದೆ. ಆದಾಗ್ಯೂ, ಇದು ಏರುತ್ತಿರುವ ಈರುಳ್ಳಿ ಬೆಲೆಯನ್ನು ಹಿಡಿದಿಡಲು ಸಾಧ್ಯವಾಗಿಲ್ಲ. ಹೆಚ್ಚಿನ ನಗರಗಳಲ್ಲಿ ಈರುಳ್ಳಿ ಬೆಲೆ ಇನ್ನೂ ಕೆಜಿಗೆ 100 ರೂ.ಗಳ ಗಡಿ ದಾಟಿದೆ. ಇದರ ಪರಿಣಾಮವಾಗಿ, ಸಾರ್ವಜನಿಕ ವಲಯದ ಎಂಎಂಟಿಸಿ ಮೂಲಕ ಈರುಳ್ಳಿ ಆಮದು ಮಾಡಿಕೊಳ್ಳಲು ಸರ್ಕಾರವನ್ನು ಒತ್ತಾಯಿಸಲಾಯಿತು.

ಇತ್ತೀಚೆಗೆ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಸಚಿವರ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗಿದೆ. ಮುಂದಿನ ವರ್ಷಕ್ಕೆ ಸುಮಾರು ಒಂದು ಲಕ್ಷ ಟನ್ ಈರುಳ್ಳಿ ಬಫರ್ ಸ್ಟಾಕ್ ರಚಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಮಾರುಕಟ್ಟೆಯಲ್ಲಿ ಈರುಳ್ಳಿ ದಾಸ್ತಾನು ಕಡಿಮೆ ಇದ್ದರೂ ಬೆಲೆ ಹೆಚ್ಚಾಗುವುದಿಲ್ಲ ಎಂದು ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಸರ್ಕಾರದ ಪರವಾಗಿ ಬಫರ್ ಸ್ಟಾಕ್ ಹೊಂದಿರುವ ನಾಫೆಡ್ (ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ) ಗೆ ಮುಂದಿನ ವರ್ಷ ಈ ಜವಾಬ್ದಾರಿಯನ್ನು ನೀಡಲಾಗಿದೆ. ಮಾರ್ಚ್-ಜುಲೈನಲ್ಲಿ ಉತ್ಪಾದಿಸಲಾದ ಈರುಳ್ಳಿಯನ್ನು ನಾಫೆಡ್ ಖರೀದಿಸುತ್ತದೆ. ಈ ಈರುಳ್ಳಿ ಹೆಚ್ಚು ಜೀವಿತಾವಧಿಯನ್ನು ಹೊಂದಿರುತ್ತದೆ.

ಮಳೆಗಾಲದ ನಂತರದ ಋತುವಿನಲ್ಲಿ ಉತ್ಪಾದನಾ ಪ್ರದೇಶಗಳಲ್ಲಿ ಬಂದ ಅಕಾಲಿಕ ಮಳೆಯಿಂದಾಗಿ ಈ ವರ್ಷ ಈರುಳ್ಳಿ ಉತ್ಪಾದನೆಯು ಶೇಕಡಾ 26 ರಷ್ಟು ಕುಸಿದಿದೆ. ಇದು ಈರುಳ್ಳಿ ಬೆಲೆಯ ಮೇಲೆ ಪರಿಣಾಮ ಬೀರಿದೆ. ಈರುಳ್ಳಿ ಬೆಲೆ ಏರಿಕೆಯನ್ನು ತಡೆಯಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ರಫ್ತು ಮೇಲಿನ ನಿರ್ಬಂಧಗಳು, ವ್ಯಾಪಾರಿಗಳ ಮೇಲೆ ಬಫರ್ ಸ್ಟಾಕ್, ಆಮದು ಮೂಲಕ ಅಗ್ಗದ ದರದಲ್ಲಿ ಬಫರ್ ಸ್ಟಾಕ್ ಮತ್ತು ಈರುಳ್ಳಿ ಮಾರಾಟ ಸೇರಿದಂತೆ ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡಿದೆ.

ಸರ್ಕಾರವು ಹೊಂದಿದ್ದ ಬಫರ್ ಸ್ಟಾಕ್ ಪ್ರಸ್ತುತ ಮುಗಿದಿದೆ. ಆಮದು ಮಾಡಿದ ಈರುಳ್ಳಿಯನ್ನು ಗ್ರಾಹಕರಿಗೆ ಅಗ್ಗದ ದರದಲ್ಲಿ ಲಭ್ಯವಾಗುವಂತೆ ಮಾರಾಟ ಮಾಡಲಾಗುತ್ತಿದೆ.  ಆದರೆ ಟರ್ಕಿ, ಈಜಿಪ್ಟ್‌ನಿಂದ ಮಾರುಕಟ್ಟೆ ತಲುಪಿರುವ ಈರುಳ್ಳಿಯನ್ನು ಕೊಳ್ಳಲು ಜನ ಇಷ್ಟಪಡುತ್ತಿಲ್ಲ.

Trending News