24 ವರ್ಷದಿಂದ ಪ್ರಧಾನಿ ಮೋದಿ ಬದಲಾಗಿಲ್ಲ ಎಂದ ಸಹೋದರಿ!

ರಕ್ಷಾ ಬಂಧನ್ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಹೋದರಿ ಖಮರ್ ಮೊಹ್ಸಿನ್ ಶೇಖ್ ಅವರು ತಮ್ಮ ನಿವಾಸದಲ್ಲಿ ಭಾನುವಾರದಂದು ರಾಖಿಯನ್ನು ಕಟ್ಟಿದರು.

Last Updated : Aug 26, 2018, 06:39 PM IST
24 ವರ್ಷದಿಂದ ಪ್ರಧಾನಿ ಮೋದಿ ಬದಲಾಗಿಲ್ಲ ಎಂದ ಸಹೋದರಿ! title=
Photo:ANI

ನವದೆಹಲಿ: ರಕ್ಷಾ ಬಂಧನ್ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಹೋದರಿ ಖಮರ್ ಮೊಹ್ಸಿನ್ ಶೇಖ್ ಅವರು ಪ್ರಧಾನಿ ನಿವಾಸದಲ್ಲಿ ಭಾನುವಾರದಂದು ರಾಖಿಯನ್ನು ಕಟ್ಟಿದರು.

ಕಳೆದ 24 ವರ್ಷಗಳಿಂದ ತಾನು ರಾಖಿಯೊಂದನ್ನು ಕಟ್ಟುತ್ತಿರುವುದಾಗಿ ಪಾಕಿಸ್ತಾನ ಮೂಲದ ಮಹಿಳೆ ಪ್ರಧಾನ ಮಂತ್ರಿಯೊಂದಿಗೆ ತನ್ನ ಬಂಧವನ್ನು ನೆನಪಿಸಿಕೊಂಡರು.ಈ ಕುರಿತಾಗಿ ಎಎನ್ಐ ಗೆ ಪ್ರತಿಕ್ರಿಯಿಸಿದ ಖಮರ್ ಮೊಹ್ಸಿನ್ ಶೇಖ್ "ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಕಾರ್ಯಕರ್ತರಾಗಿದ್ದರು,ಅವರಿಗೆ ಕಳೆದ 24 ವರ್ಷಗಳಿಂದ ರಾಖಿಯನ್ನು ಕಟ್ಟುತ್ತಿದ್ದೇನೆ .ಆದರೆ ಅವರ ಕಾರ್ಯಚಟುವಟಿಕೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಅವರು ಕೆಲಸದಲಿ ಬ್ಯೂಸಿಯಾಗಿರುವುದರಿಂದ ನಮಗೆ ಸ್ವಲ್ಪ ಸಮಯ ಮಾತ್ರ  ದೊರೆಯುತ್ತದೆ  ಉಳಿದಂತೆ, ಎಲ್ಲವೂ ಒಂದೇ" ಎಂದು ಶೇಖ್ ಹೇಳಿದರು.

"ಈ ಬಾರಿ ನಾನು ಪ್ರಧಾನಿ ಮೋದಿ ಕೆಲಸದಲ್ಲಿ ಬ್ಯೂಸಿಯಾಗಿದ್ದರೆಂದು ಭಾವಿಸಿದ್ದೆ,ಆದರೆ ಎರಡು ದಿನಗಳ ಹಿಂದೆ ಕರೆ ಮಾಡಿದರು ,ಇದು ಅವರು ರಕ್ಷಾ ಬಂಧನಕ್ಕಾಗಿ ಕಾಯುತ್ತಿದ್ದಾರೆಂದು ತಿಳಿದು ನನಗೆ ಸಂತಸವಾಗಿದೆ" ಎಂದು ಹೇಳಿದರು. ಖಮರ್ ವಿವಾಹವಾದ ನಂತರ ಭಾರತಕ್ಕೆ ಬಂದರು ಮತ್ತು ಅಂದಿನಿಂದ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ.
 

Trending News