ನವದೆಹಲಿ: ಮೋದಿ ಸರ್ಕಾರ ವಿದೇಶದಲ್ಲಿನ ಕಪ್ಪು ಹಣವನ್ನು ಭಾರತಕ್ಕೆ ತರುವಲ್ಲಿ ಯಾವುದೇ ಸೂಕ್ತ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಿಡಿ ಕಾರಿದರು.


COMMERCIAL BREAK
SCROLL TO CONTINUE READING

ಶುಕ್ರವಾರದಂದು ನೋಟು ನಿಷೇದ ಮತ್ತು ಉದ್ಯೋಗ ಸೃಷ್ಟಿ ವಿಚಾರವಾಗಿ ಮಾತನಾಡುತ್ತಾ "ಉದ್ಯೋಗ ಸೃಷ್ಟಿ ವಿಚಾರವಾಗಿ ಮೋದಿ ಸರ್ಕಾರ  ಬಿಡುಗಡೆ ಮಾಡಿರುವ ಅಂಕಿ ಅಂಶದ  ಬಗ್ಗೆ ಜನರಿಗೆ ತೃಪ್ತಿ ತಂದಿಲ್ಲ ಎಂದರು.ಅಲ್ಲದೆ 2016 ರಲ್ಲಿನ ನೋಟ್ ಬ್ಯಾನ್ ವಿಚಾರವಾಗಿ ಮಾತನಾಡಿದ ಮನಮೋಹನ್ ಸಿಂಗ್ "ವಿದೇಶದಲ್ಲಿರುವ  ಕಪ್ಪು ಹಣವನ್ನು ಭಾರತಕ್ಕೆ ತರಲು ಯಾವುದೇ ರೀತಿಯ ಸೂಕ್ತ ಕ್ರಮಗಳನ್ನು ತಂದಿಲ್ಲ" ಎಂದು ತಿಳಿಸಿದರು.


ಇದೇ ಸಂದರ್ಭದಲ್ಲಿ ಜಿಎಸ್ಟಿ ಬಗ್ಗೆ ಮಾತನಾಡಿದ ಅದನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ವಿಫಲವಾಗಿದೆ. ಮೇಕ್ ಇನ್ ಇಂಡಿಯಾ ಮತ್ತು ಸ್ಟ್ಯಾಂಡ್ ಅಪ್ ಇಂಡಿಯಾ ದಂತಹ ಕಾರ್ಯಕ್ರಮಗಳು ಇನ್ನು ಕೈಗಾರಿಕಾ ಪ್ರಗತಿಯ ಮೇಲೆ ಪರಿಣಾಮ ಬೀರಬೇಕಾಗಿದೆ ಎಂದು ತಿಳಿಸಿದರು.


ಇದೆ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಆಗುತ್ತಿರುವ ದಾಳಿಯನ್ನು ಸಿಂಗ್ ಖಂಡಿಸಿದರು