ಪರೀಕ್ಷೆಯ ದಿನವೇ ತಾಯಿ ಸಾವು; ಮೃತದೇಹದ ಬಳಿ ಹಾಲ್‌ ಟಿಕೆಟ್ ಇಟ್ಟು ಕೈಮುಗಿದು ಪರೀಕ್ಷೆ ಬರೆದ ಮಗ

ತಮಿಳುನಾಡಿನ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಅವರ ತಂಡವು ಸುನಿಲ್ ಜೊತೆಗೆ ಮಾತನಾಡಿ ಬೆಂಬಲ ನೀಡಿತು. ಆತನಿಗೆ ಧೈರ್ಯ ತುಂಬಿದ್ದಲ್ಲದೆ, ಸಚಿವರು ನಿಮ್ಮೊಂದಿಗಿದ್ದಾರೆ ಮತ್ತು ಅಗತ್ಯವಿರುವ ಎಲ್ಲಾ ಸಹಾಯವನ್ನು ಮಾಡುವುದಾಗಿ ತಿಳಿಸಿದ್ದರು.

Written by - Puttaraj K Alur | Last Updated : Mar 7, 2025, 06:40 PM IST
  • ತಾಯಿ ಸಾವಿನ ದುಃಖದಲ್ಲಿಯೇ ಪರೀಕ್ಷೆ ಬರೆದ ಮಗ
  • ಮೃತದೇಹದ ಬಳಿ ಹಾಲ್‌ ಟಿಕೆಟ್ ಇಟ್ಟು ಕೈಮುಗಿದ ಪುತ್ರ
  • ವಿದ್ಯಾರ್ಥಿಗೆ ಬೆಂಬಲ ನೀಡಿದ ಸಿಎಂ ಮತ್ತು ಶಿಕ್ಷಣ ಸಚಿವರು
ಪರೀಕ್ಷೆಯ ದಿನವೇ ತಾಯಿ ಸಾವು; ಮೃತದೇಹದ ಬಳಿ ಹಾಲ್‌ ಟಿಕೆಟ್ ಇಟ್ಟು ಕೈಮುಗಿದು ಪರೀಕ್ಷೆ ಬರೆದ ಮಗ
ಪರೀಕ್ಷೆಯ ದಿನವೇ ತಾಯಿ ಸಾವು!!

Sad Story: 12ನೇ ತರಗತಿಯ ಬೋರ್ಡ್ ಪರೀಕ್ಷೆಗೂ ಕೆಲವೇ ಗಂಟೆ ಮೊದಲು ವಿದ್ಯಾರ್ಥಿಯ ತಾಯಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಪರೀಕ್ಷೆಯನ್ನ ಬರೆಯಬೇಕಿದ್ದ ವಿದ್ಯಾರ್ಥಿ ವಿಚಲಿತನಾದರೂ, ಕಣ್ಣಲ್ಲಿ ನೀರು ತುಂಬಿಕೊಂಡೇ ಕಾಲೇಜಿಗೆ ತೆರಳಿದ್ದಾನೆ. ಅದಕ್ಕೂ ಮುನ್ನ ತಾಯಿಯ ಮೃತದೇಹಕ್ಕೆ ನಮಸ್ಕರಿಸಿದ್ದಾನೆ.

Add Zee News as a Preferred Source

ಈ ಘಟನೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ನಡೆದಿದೆ. ವಲಿಯೂರಿನ ವಿದ್ಯಾರ್ಥಿ ಸುನಿಲ್ ಕುಮಾರ್‌ಗೆ ಮಾರ್ಚ್ 3ರಂದು 12ನೇ ತರಗತಿಯ ಪಬ್ಲಿಕ್ ಪರೀಕ್ಷೆ ಇತ್ತು. ಪರೀಕ್ಷೆಯ ಮೊದಲ ದಿನವೇ ಬೆಳಗ್ಗೆ ಅವರ ತಾಯಿ ಸುಬ್ಬಲಕ್ಷ್ಮೀಯವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಸುನಿಲ್ ಕುಮಾರ್‌ ಅವರ ತಂದೆ ಕೃಷ್ಣಮೂರ್ತಿ ಆರು ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದರು. ಸುನೀಲ್ ಮತ್ತು ಅವರ ಸಹೋದರಿ ಸುಹಾಸಿನಿಯನ್ನು ಬೆಳೆಸುವ ಜವಾಬ್ದಾರಿ ಸುಬ್ಬಲಕ್ಷ್ಮೀ ಅವರ ಮೇಲಿತ್ತು.

ಇದನ್ನೂ ಓದಿ: ಸೌಜನ್ಯಾ ಹತ್ಯೆ: ಕಳಂಕಿತವಾದ ನ್ಯಾಯ ವ್ಯವಸ್ಥೆ

ತೀವ್ರ ಖಿನ್ನತೆಗೆ ಒಳಗಾಗಿದ್ದರೂ ಸಹ ಸುನಿಲ್‌ನ ಸಂಬಂಧಿಕರು ಮತ್ತು ನೆರೆಹೊರೆಯವರು ಪರೀಕ್ಷೆ ಬರೆಯಲು ಪ್ರೋತ್ಸಾಹಿಸಿದರು. ತನ್ನ ಮಕ್ಕಳಿಗೆ ಶಿಕ್ಷಣ ನೀಡುವ ತಾಯಿಯ ದೃಢಸಂಕಲ್ಪವನ್ನು ನೆನಪಿಸಿಕೊಂಡರು.  ತಾಯಿ ಸಾವನ್ನಪ್ಪಿದ ದುಃಖದ ನಡುವೆಯೇ ಪರೀಕ್ಷೆಗೆ ಹೊರಡುವ ಮೊದಲು ಭಾವುಕನಾದ ಸುನಿಲ್ ತನ್ನ ಹಾಲ್ ಟಿಕೆಟ್ ಅನ್ನು ಮೃತ ತಾಯಿಯ ಪಾದಗಳ ಬಳಿ ಇಟ್ಟು ಕಣ್ಣೀರು ಸುರಿಸುತ್ತಾ ಅಳಲು ಪ್ರಾರಂಭಿಸಿದ. ಈ ವೇಳೆ ‌ಕುಟುಂಬ ಸದಸ್ಯರು ಆತನಿಗೆ ಸಮಾಧಾನಪಡಿಸಿದರು.

ತಮಿಳುನಾಡಿನ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಅವರ ತಂಡವು ಸುನಿಲ್ ಜೊತೆಗೆ ಮಾತನಾಡಿ ಬೆಂಬಲ ನೀಡಿತು. ಆತನಿಗೆ ಧೈರ್ಯ ತುಂಬಿದ್ದಲ್ಲದೆ, ಸಚಿವರು ನಿಮ್ಮೊಂದಿಗಿದ್ದಾರೆ ಮತ್ತು ಅಗತ್ಯವಿರುವ ಎಲ್ಲಾ ಸಹಾಯವನ್ನು ಮಾಡುವುದಾಗಿ ತಿಳಿಸಿದ್ದರು.

ಇದನ್ನೂ ಓದಿ: 6 ತಿಂಗಳಲ್ಲಿ 34 ಕೆಜಿ ತೂಕ ಇಳಿಸಿಕೊಂಡ 26 ವರ್ಷದ ಯುವಕ! ಇವರ ವೆಯಿಟ್ ಲಾಸ್ ಗೆ ಸಹಾಯ ಮಾಡಿದ್ದು ಈ ಸಿಂಪಲ್ ವಿಧಾನ 

ಇದಲ್ಲದೆ ಈ ವಿಷಯ ತಿಳಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಇದೇ ಘಟನೆಯ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಇದು ತಮಿಳು ಸಮುದಾಯ ಶಿಕ್ಷಣ ನಮ್ಮ ಜೀವಕ್ಕಿಂತ ಮುಖ್ಯ ಎಂದು ಬರೆದಿದ್ದಾರೆ. ತಮಿಳುನಾಡು ಹೈಯರ್ ಸೆಕೆಂಡರಿ ಸರ್ಟಿಫಿಕೆಟ್ ಪರೀಕ್ಷೆಯು ಮಾರ್ಚ್ 3ರಿಂದ ಮಾರ್ಚ್ 25ರವರೆಗೆ ನಡೆಯಲಿದ್ದು, 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗುವ ನಿರೀಕ್ಷೆಯಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News