ನವದೆಹಲಿ: ಶನಿವಾರದಂದು ಸಂಸದ ಶ್ಯಾಮ ಚರಣ್ ಗುಪ್ತಾ ಬಿಜೆಪಿ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರಿಕೊಂಡರು. 2019 ರ ಲೋಕಸಭೆ ಚುನಾವಣೆಯಲ್ಲಿ ಬಂಡಾ ಕ್ಷೇತ್ರದಿಂದ ಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ಇದುವರೆಗೆ ಆರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ನಾಲ್ಕನೇ ಪಟ್ಟಿಯಲ್ಲಿ ರಾಣಿರಾಮ್ ಬನ್ಸಾಲ್ ಅವರ ಹೆಸರನ್ನು ಪ್ರಕಟಿಸಿದೆ.ಅವರು ಟಿಕಾಮ್ ಗಡ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.



ಐದನೇ ಪಟ್ಟಿಯಲ್ಲಿ, ನಾಲ್ಕು ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಲಾಗಿದೆ.ಗೊಂಡಾದಿಂದ ವಿನೋದ್ ಕುಮಾರ್ ಅಲಿಯಾಸ್ ಪಂಡಿತ್ ಸಿಂಗ್, ಬರಾಬಂಕಿ ಯಿಂದ ರಾಮ್ ಸಾಗರ್ ರಾವತ್, ಮತ್ತು ಸಂಭಲ್ನಿಂದ ಸಫಿಕೂರ್ ರೆಹಮಾನ್ ಸ್ಪರ್ಧಿಸಲಿದ್ದಾರೆ. ಇನ್ನು ರಾಷ್ಟ್ರೀಯ ಲೋಕ ದಳ (ಆರ್ಎಲ್ಡಿ) ಸಂಸದೆ ತಬಾಸ್ಸಂ ಹಸನ್ ಕೈರಾನಾದಿಂದ ಸ್ಪರ್ಧಿಸಲಿದ್ದಾರೆ.ಆರನೇ ಪಟ್ಟಿಯಲ್ಲಿ ಗಾಜಿಯಾಬಾದ್ ಕ್ಷೇತ್ರದಿಂದ ಸುರೇಂದ್ರ ಕುಮಾರಿ ಅಲಿಯಾಸ್ ಮುನ್ನಿ ಶರ್ಮಾ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ.


ಈ ಬಾರಿ ಉತ್ತರಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿ ಪಕ್ಷಗಳು ಮೈತ್ರಿಯನ್ನು ಮಾಡಿಕೊಂಡಿವೆ.ಅಚ್ಚರಿಯೆಂದರೆ ರಾಯಬರೇಲಿ ಮತ್ತು ಅಮೇಥಿ ಕ್ಷೇತ್ರಗಳನ್ನು ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡಲಾಗಿದೆ.