ನೂತನ ಬಿಹಾರ ಸಿಎಂ ಪ್ರಮಾಣ ವಚನಕ್ಕೆ ಮಹೂರ್ತ ಫಿಕ್ಸ್..! ಸಚಿವ ಸಂಪುಟದಲ್ಲಿ ಯಾರಿಗೆ ಎಷ್ಟು ಸ್ಥಾನ.?

ಈ ಬಾರಿ ಬಿಹಾರದಲ್ಲಿ ಬಿಜೆಪಿ 89 ಸ್ಥಾನಗಳನ್ನು ಗೆದ್ದರೆ, ಜೆಡಿಯು 85 ಸ್ಥಾನಗಳನ್ನು ಗೆದ್ದಿದೆ. ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷವು ಸಹ ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದು, 19 ಸ್ಥಾನಗಳನ್ನು ಗೆದ್ದಿದೆ.

Written by - Manjunath Naragund | Last Updated : Nov 16, 2025, 09:11 PM IST
  • ಬಿಜೆಪಿ 89 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ
  • ನಿತೀಶ್ ಕುಮಾರ್ 10ನೇ ಬಾರಿಗೆ ಮುಖ್ಯಮಂತ್ರಿ ಪ್ರಮಾಣ ಸ್ವೀಕಾರ
  • ಬಿಜೆಪಿ ಪ್ರಾಬಲ್ಯದೊಂದಿಗೆ ಎನ್‌ಡಿಎ ಸರ್ಕಾರ ರಚನೆ
ನೂತನ ಬಿಹಾರ ಸಿಎಂ ಪ್ರಮಾಣ ವಚನಕ್ಕೆ ಮಹೂರ್ತ ಫಿಕ್ಸ್..! ಸಚಿವ ಸಂಪುಟದಲ್ಲಿ ಯಾರಿಗೆ ಎಷ್ಟು ಸ್ಥಾನ.?

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಭಾರೀ ಬಹುಮತ ದೊರೆತ ಹಿನ್ನೆಲೆಯಲ್ಲಿ ಸರ್ಕಾರ ರಚನೆಗೆ ಮುಂದಾಗಿದೆ.ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ನವೆಂಬರ್ 17 ರಂದು ಪಾಟ್ನಾದ ರಾಜಭವನದಲ್ಲಿ ತಮ್ಮ ರಾಜೀನಾಮೆ ಸಲ್ಲಿಸುವ ನಿರೀಕ್ಷೆಯಿದೆ.ಈ ಬಾರಿ ಸಂಪುಟದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಲಿದ್ದು, ಉನ್ನತ ಮಟ್ಟದ ಎನ್‌ಡಿಎ ಸಭೆಯಲ್ಲಿ ಈ ಸೂತ್ರವನ್ನು ಅಂತಿಮಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Add Zee News as a Preferred Source

ಚುನಾವಣಾ ಫಲಿತಾಂಶ ಮತ್ತು ಸೀಟುಗಳ ವಿಂಗಡಣೆ:

ಬಿಹಾರದ 243 ಸ್ಥಾನಗಳ ವಿಧಾನಸಭೆಯಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿದೆ. ಬಿಜೆಪಿ 89 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಜೆಡಿಯು 85 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) 19 ಸ್ಥಾನಗಳನ್ನು ಗೆದ್ದು ಉತ್ತಮ ಸ್ಟ್ರೈಕ್ ರೇಟ್ ದಾಖಲಿಸಿದೆ. ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನ್ ಅವಾಮ್ ಮೋರ್ಚಾ ಮತ್ತು ಉಪೇಂದ್ರ ಕುಶ್ವಾಹ ಅವರ ಪಕ್ಷ ತಲಾ 5 ಸ್ಥಾನಗಳನ್ನು ಗೆದ್ದಿವೆ.ವಿರೋಧ ಪಕ್ಷಗಳಾದ ಮಹಾಘಟಬಂಧನ್ ಕೇವಲ 35 ಸ್ಥಾನಗಳಿಗೆ ಸೀಮಿತವಾಗಿದೆ. ಆರ್‌ಜೆಡಿ 25 ಸ್ಥಾನಗಳನ್ನು ಗೆದ್ದರೆ, ಪ್ರಶಾಂತ್ ಕಿಶೋರ್ ಅವರ ಪಕ್ಷ 238 ಸ್ಥಾನಗಳಲ್ಲಿ ಸ್ಪರ್ಧಿಸಿ ಖಾತೆ ತೆರೆಯಲು ವಿಫಲವಾಗಿದೆ. ಈ ಫಲಿತಾಂಶಗಳು ವಿರೋಧ ಪಕ್ಷಗಳ ನೀತಿಗಳಿಗೆ ಪಾಠವಾಗಿದ್ದು, ತೇಜಸ್ವಿ ಯಾದವ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ. 

ಇದನ್ನೂ ಓದಿ: ಕರ್ನಾಟಕದ ಮುಖ್ಯಮಂತ್ರಿ, ಸಚಿವರು & ಶಾಸಕರ ವೇತನ ಎಷ್ಟು? ಯಾವೆಲ್ಲ ಭತ್ಯೆಗಳು ಸಿಗುತ್ತವೆ ಗೊತ್ತಾ?

ಸಂಪುಟದಲ್ಲಿ ಬಿಜೆಪಿ ಪ್ರಾಬಲ್ಯ:

ಹೊಸ ಸರ್ಕಾರದ ಸಂಪುಟದಲ್ಲಿ ಬಿಜೆಪಿ 15ರಿಂದ 16 ಸಚಿವ ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಜೆಡಿಯು ಸುಮಾರು 14 ಸಚಿವ ಸ್ಥಾನಗಳನ್ನು ಪಡೆಯಲಿದೆ. ಹಲವು ಪ್ರಮುಖ ಸಚಿವಾಲಯಗಳು ಜೆಡಿಯುಗೆ ಹೋಗಲಿವೆ ಎಂದು ಊಹಿಸಲಾಗಿದೆ. ಎಲ್‌ಜೆಪಿ, ಮಾಂಝಿ ಮತ್ತು ಕುಶ್ವಾಹ ಅವರ ಪಕ್ಷಗಳು ತಲಾ ಒಂದು ಸಚಿವ ಸ್ಥಾನ ಪಡೆಯುವ ಸಾಧ್ಯತೆಯಿದೆ.ಪ್ರಮಾಣವಚನ ಸ್ವೀಕಾರ ಸಮಾರಂಭ ನವೆಂಬರ್ 19 ಅಥವಾ 20ರಂದು ನಡೆಯುವ ನಿರೀಕ್ಷೆಯಿದ್ದು, ಇದರ ಕುರಿತು ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

ನಿತೀಶ್ ಕುಮಾರ್: 10ನೇ ಬಾರಿಗೆ ಮುಖ್ಯಮಂತ್ರಿ ಪಟ್ಟ:

ನಿತೀಶ್ ಕುಮಾರ್ ಬಿಹಾರದ ದೀರ್ಘಕಾಲದ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದಾರೆ. 2005ರಿಂದ (2014-15ರ ಅಲ್ಪಾವಧಿಯನ್ನು ಹೊರತುಪಡಿಸಿ) ಸತತ ಅಧಿಕಾರದಲ್ಲಿರುವ ಅವರು, ಒಂಬತ್ತು ಬಾರಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರಲ್ಲಿ ಆರು ಬಾರಿ ಎನ್‌ಡಿಎ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿದ್ದಾರೆ. ಈ ಬಾರಿ 10ನೇ ಪ್ರಮಾಣವಚನದೊಂದಿಗೆ ಬಿಹಾರದ ಮೊದಲ ನಾಯಕ ಎಂಬ ದಾಖಲೆಯನ್ನು ಬರೆಯಲಿದ್ದಾರೆ.ಎನ್‌ಡಿಎಯ ಈ ಗೆಲುವು ಬಿಹಾರ ರಾಜಕಾರಣದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

About the Author

Trending News