ಲವ್‌ ಸ್ಟೋರಿ ಸಿನಿಮಾ ನೋಡಿ ಹಳೆ ಲವರ್‌ ನೆನಪಾಯ್ತಾ? ಚಿಂತೆ ಮಾಡ್ಬೇಡಿ ಇನ್ಮುಂದೆ ಥಿಯೇಟರ್‌ನಲ್ಲೆ ಸಿಗುತ್ತಂತೆ ಎಣ್ಣೆ!

Liquor in Theater: ಆದಾಯ ಹೆಚ್ಚಿಸುವ ಉದ್ದೇಶದಿಂದ ಚಿತ್ರಮಂದಿರಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೋರಿರುವ ವಿಷಯ ವಿವಾದಕ್ಕೆ ಕಾರಣವಾಗಿದೆ.

Written by - Savita M B | Last Updated : Apr 10, 2025, 10:19 AM IST
  • ಹಿಂದೆ, ನೀವು ಹೊಸ ಸಿನಿಮಾಗಳನ್ನು ವೀಕ್ಷಿಸಲು ಬಯಸಿದರೆ ಚಿತ್ರಮಂದಿರಕ್ಕೆ ಹೋಗಬೇಕಾಗಿತ್ತು
  • ಆದರೆ ಪ್ರಸ್ತುತ ಯುಗದಲ್ಲಿ, ನೀವು ನಿಮ್ಮ ಮನೆಯಿಂದಲೇ OTT ನಲ್ಲಿ ಹೊಸ ಚಲನಚಿತ್ರಗಳನ್ನು ವೀಕ್ಷಿಸಬಹುದು
ಲವ್‌ ಸ್ಟೋರಿ ಸಿನಿಮಾ ನೋಡಿ ಹಳೆ ಲವರ್‌ ನೆನಪಾಯ್ತಾ? ಚಿಂತೆ ಮಾಡ್ಬೇಡಿ ಇನ್ಮುಂದೆ ಥಿಯೇಟರ್‌ನಲ್ಲೆ ಸಿಗುತ್ತಂತೆ ಎಣ್ಣೆ!

Multiplex Theatres: ಹಿಂದೆ, ನೀವು ಹೊಸ ಸಿನಿಮಾಗಳನ್ನು ವೀಕ್ಷಿಸಲು ಬಯಸಿದರೆ ಚಿತ್ರಮಂದಿರಕ್ಕೆ ಹೋಗಬೇಕಾಗಿತ್ತು. ಆದರೆ ಪ್ರಸ್ತುತ ಯುಗದಲ್ಲಿ, ನೀವು ನಿಮ್ಮ ಮನೆಯಿಂದಲೇ OTT ನಲ್ಲಿ ಹೊಸ ಚಲನಚಿತ್ರಗಳನ್ನು ವೀಕ್ಷಿಸಬಹುದು. ಚಿತ್ರಗಳು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಒಂದು ತಿಂಗಳೊಳಗೆ OTTಯಲ್ಲಿ ಬಿಡುಗಡೆಯಾಗುತ್ತವೆ. ಇದರಿಂದಾಗಿ ಚಿತ್ರಮಂದಿರಕ್ಕೆ ಹೋಗುವವರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗುತ್ತಿದೆ. ಆದರೆ ಕೆಲವು ಚಿತ್ರಗಳು ನೇರವಾಗಿಯೇ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ.

Add Zee News as a Preferred Source

ಇದರಿಂದಾಗಿ ಚಿತ್ರಮಂದಿರಗಳು ಕ್ರಮೇಣ ಮುಚ್ಚುವ ಪರಿಸ್ಥಿತಿ ಉಂಟಾಗುತ್ತಿದೆ. ಮಲ್ಟಿಪ್ಲೆಕ್ಸ್‌ಗಳ ಆಗಮನದೊಂದಿಗೆ Single-screen ಚಿತ್ರಮಂದಿರಗಳು ಕ್ರಮೇಣ ಕಣ್ಮರೆಯಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಜನರು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಮಾತ್ರ ಸಿನಿಮಾ ನೋಡುತ್ತಾರೆ. ಮಲ್ಟಿಪ್ಲೆಕ್ಸ್ ಕಂಪನಿಗಳು ಪ್ರೇಕ್ಷಕರ ಹಾಜರಾತಿಯನ್ನು ಹೆಚ್ಚಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಆ ನಿಟ್ಟಿನಲ್ಲಿ, ಪಿವಿಆರ್ ಐನಾಕ್ಸ್ ಮಾಡಿದ ಇತ್ತೀಚಿನ ವಿನಂತಿಯು ಚರ್ಚೆಯ ವಿಷಯವಾಗಿದೆ.

ಇದನ್ನೂ ಓದಿ: ಮುಂದಿನ ಮೂರು ದಿನದಲ್ಲಿ ಪುಷ್ಯಾ ನಕ್ಷತ್ರದಲ್ಲಿ ಮಂಗಳನ ಸಂಚಾರ.. ಈ ರಾಶಿಯ ಜನರು ಇನ್ನು ಮುಂದೆ  ಕೈಯಲ್ಲಿ ಕಸ ಹಿಡಿದರೂ ಚಿನ್ನ! ಬದುಕಾಗಲಿದೆ ಬಂಗಾರ  

ಬೆಂಗಳೂರು ಮತ್ತು ಗುರಗಾಂವ್‌ನಲ್ಲಿರುವ ಪಿವಿಆರ್ ಐನಾಕ್ಸ್ ಚಿತ್ರಮಂದಿರಗಳಲ್ಲಿ ಮದ್ಯ ಮಾರಾಟ ಮಾಡಲು ಅನುಮತಿ ಕೋರುತ್ತಿದ್ದಾರೆ. ಆದಾಯ ಹೆಚ್ಚಿಸುವ ಮತ್ತು ಅಭಿಮಾನಿಗಳಿಗೆ ಪ್ರೀಮಿಯರ್ ಅನುಭವವನ್ನು ಒದಗಿಸುವ ಉದ್ದೇಶದಿಂದ ಥಿಯೇಟರ್‌ನಲ್ಲಿ ಮದ್ಯ ಸಿಗುವಂತೆ ಮಾಡಲು ಕಂಪನಿ ಮುಂದೆ ಬಂದಿದೆ ಎಂದು ಹೇಳಲಾಗುತ್ತಿದೆ.. ಇದು ಆರಂಭವಾಗಿರುವುದಿರಂದ ಕೆಲವು ನಿರ್ದಿಷ್ಟ ಚಿತ್ರಮಂದಿರಗಳಲ್ಲಿ ಮಾತ್ರ ಜಾರಿಗೆ ತರಲು ಅನುಮತಿ ಕೋರುತ್ತಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ವಿಷಯವಾಗಿದೆ.

ಇಲ್ಲಿಯವರೆಗೆ, ಮದ್ಯ ಸೇವಿಸಿದ ಜನರಿಗೆ ಚಿತ್ರಮಂದಿರದೊಳಗೆ ಪ್ರವೇಶವಿರಲಿಲ್ಲ. ಆದರೆ ಈ ರೀತಿಯ ನಿಯಮ ಜಾರಿಗೆ ಬಂದರೆ ಚಿತ್ರಮಂದಿರಗಳು ಬಾರ್‌ಗಳಾಗಿ ಬದಲಾಗುತ್ತವೆ ಎಂದು ನೆಟಿಜನ್‌ಗಳು ಅಭಿಪ್ರಾಯಪಟ್ಟಿದ್ದಾರೆ.. ಚಿತ್ರಮಂದಿರಗಳಲ್ಲಿ ಮದ್ಯ ಮಾರಾಟ ಮಾಡುವುದರಿಂದ ಮಹಿಳೆಯರಿಗೆ ಚಿತ್ರಮಂದಿರಗಳು ಅಸುರಕ್ಷಿತವಾಗುತ್ತವೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ಇದನ್ನು ಅನುಮತಿಸಬಾರದು ಎಂಬ ವಿರೋಧದ ಧ್ವನಿಗಳು ಈಗ ಕೇಳಿಬರುತ್ತಿವೆ. 

ಇದನ್ನೂ ಓದಿ: ಮುಂದಿನ ಮೂರು ದಿನದಲ್ಲಿ ಪುಷ್ಯಾ ನಕ್ಷತ್ರದಲ್ಲಿ ಮಂಗಳನ ಸಂಚಾರ.. ಈ ರಾಶಿಯ ಜನರು ಇನ್ನು ಮುಂದೆ  ಕೈಯಲ್ಲಿ ಕಸ ಹಿಡಿದರೂ ಚಿನ್ನ! ಬದುಕಾಗಲಿದೆ ಬಂಗಾರ  

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

...Read More

Trending News