ಪರಸ್ಪರ ಅಪ್ಪಿಕೊಳ್ಳದೆ ಪವಿತ್ರ ಹಬ್ಬ ಬಕ್ರೀದ್ ಆಚರಿಸಿದ ಮುಸ್ಲಿಂ ಬಾಂಧವರು

ಮುಸ್ಲಿಂ ಬಾಂಧವರಿಗೆ ಬಹಳ‌ ಪವಿತ್ರವೂ ದೊಡ್ಡ ಹಬ್ಬವೂ ಆದ ಬಕ್ರೀದ್ ಆಚರಣೆಯಲ್ಲಿ ಮಸೀದಿಗಳಲ್ಲಿ ನಮಾಜ್ ಮಾಡಲು ಅವಕಾಶ ನೀಡುವ ಬಗ್ಗೆ ಸರ್ಕಾರಗಳು ವ್ಯಾಪಕವಾದ ಚಿಂತನೆ ನಡೆಸಿ, ಸಮುದಾಯದ ನಾಯಕರೊಂಂದಿಗೆ ಸಮಾಲೋಚನೆ ನಡೆಸಿ ಅಂತಿಮವಾಗಿ ಹಸಿರು ನಿಶಾನೆ ತೋರಲಾಗಿತ್ತು.

Last Updated : Aug 1, 2020, 10:01 AM IST
ಪರಸ್ಪರ ಅಪ್ಪಿಕೊಳ್ಳದೆ ಪವಿತ್ರ ಹಬ್ಬ ಬಕ್ರೀದ್ ಆಚರಿಸಿದ ಮುಸ್ಲಿಂ ಬಾಂಧವರು title=
Image courtesy: ANI

ನವದೆಹಲಿ: ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮತ್ತು ಆನಂತರ ಭಾಂಧ್ಯವ್ಯದ ಪ್ರತೀಕವಾದ ಪರಸ್ಪರ ಅಪ್ಪುಗೆ ಸಹಜವಾದ ಸಂಗತಿಗಳಾಗಿದ್ದವು.‌ ಆದರೆ ಈ ಬಾರಿ‌ ಕೊರೊನಾ ಕಾರಣಕ್ಕೆ ದೇಶದೆಲ್ಲೆಡೆ ಮುಸ್ಲಿಂ ಬಾಂಧವರು ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರಾರ್ಥನೆ ನಡೆಸಿದ್ದಾರೆ. ಮತ್ತು ಇದೇ ಮೊದಲ ಬಾರಿಗೆ ಪರಸ್ಪರ ಅಪ್ಪಿಕೊಳ್ಳದೆ ತಮ್ಮ ಪ್ರೀತಿ ಮತ್ತು ಶುಭಾಶಯವನ್ನು ವಿನಂತಿಮಾಡಿಕೊಂಡಿದ್ದಾರೆ.

ಮುಸ್ಲಿಂ ಬಾಂಧವರಿಗೆ ಬಹಳ‌ ಪವಿತ್ರವೂ ದೊಡ್ಡ ಹಬ್ಬವೂ ಆದ ಬಕ್ರೀದ್ ಆಚರಣೆಯಲ್ಲಿ ಮಸೀದಿಗಳಲ್ಲಿ ನಮಾಜ್ ಮಾಡಲು ಅವಕಾಶ ನೀಡುವ ಬಗ್ಗೆ ಸರ್ಕಾರಗಳು ವ್ಯಾಪಕವಾದ ಚಿಂತನೆ ನಡೆಸಿ, ಸಮುದಾಯದ ನಾಯಕರೊಂಂದಿಗೆ ಸಮಾಲೋಚನೆ ನಡೆಸಿ ಅಂತಿಮವಾಗಿ ಹಸಿರು ನಿಶಾನೆ ತೋರಲಾಗಿತ್ತು.  ಸಾಮೂಹಿಕ ಪ್ರಾರ್ಥನೆಯಿಂದ COVID-19 ಹರಡಬಹುದು ಎಂಬ ಭಯ ವ್ಯಕ್ತವಾಗಿತ್ತು. ಆದರೆ ಸಮುದಾಯದ ನಾಯಕರು 'ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಸೇರಿದಂತೆ ಸರ್ಕಾರದ ಎಲ್ಲಾ ನಿಯಮಾವಳಿಗಳನ್ನು ಚಾಚೂತಪ್ಪದೆ ಪಾಲಿಸಲಾಗುವುದು' ಎಂದು ಭರವಸೆ ನೀಡಿದ ಹಿನ್ನಲೆಯಲ್ಲಿ ಅನುಮತಿ ಕೊಡಲಾಗಿತ್ತು.

ಇಂದು ಮುಸ್ಲಿಂ ಬಾಂಧವರು ಎಲ್ಲೆಡೆ 'ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಸೇರಿದಂತೆ ಸರ್ಕಾರದ ಎಲ್ಲಾ ನಿಯಮಾವಳಿಗಳನ್ನು ಚಾಚೂತಪ್ಪದೆ ಪಾಲಿಸಲಾಗಿದ್ದು' ಬಕ್ರೀದ್ ಹಬ್ಬವನ್ನು ಯಶಸ್ವಿಯಾಗಿ ಆಚರಿಸಿದ್ದಾರೆ. ದೇಶದೆಲ್ಲೆಡೆ  ಪ್ರಾರ್ಥನೆಯ ಬಳಿಕ ಯಾರೊಬ್ಬರೂ ಇನ್ನೊಬ್ಬರನ್ನು ಅಪ್ಪಿಕೊಂಡ ದೃಶ್ಯವೂ ಕಂಡುಬಂದಿಲ್ಲ.

ಹೂ‌ ನೀಡಿ ಅಭಿನಂದನೆ
ಈ‌ ರೀತಿಯಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿ, ಸರ್ಕಾರದ ಎಲ್ಲಾ ನಿಯಮಾವಳಿಗಳನ್ನು ಪಾಲಿಸಿ ಬಕ್ರೀದ್ ಪ್ರಾರ್ಥನೆಯನ್ನು ಅರ್ಥಪೂರ್ಣಗೊಳಿಸಿ ಮಸೀದಿಯದ ಹೊರಬಂದ ಮುಸ್ಲಿಂ ಬಾಂಧವರಿಗೆ ರಾಷ್ಟ್ರ ರಾಜಧಾನಿ ದೆಹಲಿ ಪೊಲೀಸರು ಹೂ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.

ಥ್ಯಾಂಕ್ಸ್ ಹೇಳಿದ ಜಮೀರ್
ಬೆಂಗಳೂರಿನಲ್ಲಿ ನಮಾಜ್ ಮುಗಿಸಿ ಹೊರಬಂದು ಮಾತನಾಡಿದ ಶಾಸಕ ಜಮೀರ್ ಅಹ್ನದ್, ಬಕ್ರೀದ್ ಹಬ್ಬಕ್ಕೆ ಅವಕಾಶ ನೀಡಿದ ರಾಜ್ಯ ಸರ್ಕಾರಕ್ಕೆ ಮುಸ್ಲಿಂ ಸಮುದಾಯದ ಪರವಾಗಿ ಧನ್ಯವಾದ. ಸರ್ಕಾರದ ನಿಯಮಾವಳಿಗಳನ್ನು ಪಾಲನೆ ಮಾಡಿದ ಬಗ್ಗೆ ಸಂತೋಷವಾಗಿದೆ. ಇವತ್ತು ಬಕ್ರಿದ್ ಹಬ್ಬ ಜೊತೆಗೆ ನನ್ನ ಹುಟ್ಟಿದ ಹಬ್ಬ. ಈ ಹಿನ್ನಲೆಯಲ್ಲಿ ಎರಡು ದಿನಗಳ ಹಿಂದೆಯೇ ಕಾರ್ಯಕರ್ತರಿಗೆ ತಮ್ಮ ಮನೆಯ ಬಳಿ ಬರಬೇಡಿ, ನೀವು ಖರ್ಚು ಮಾಡುವ ಹಣವನ್ನು ಬಡವರಿಗೆ ಕೊಡಿ ಎಂದು‌ ವಿನಂತಿಸಿಕೊಂಡಿದ್ದೆ ಎಂದರು.

ಗದಗದಲ್ಲಿ ತಾಳಿ ಅಡವಿಟ್ಟು ಮಹಿಳೆ ಮಕ್ಕಳ ಆನ್ ಲೈನ್ ಕ್ಲಾಸ್ ಗೆ ಟಿವಿ ತೆಗೆದುಕೊಂಡು ಬಂದ ಬಗ್ಗೆ ಬೇಸರ ವ್ಯಕ್ತಪಡಿಸಿದ ಶಾಸಕ ಜಮೀರ್ ಅಹಮದ್, ತಮ್ಮ ಸ್ನೇಹಿತನ ಮೂಲಕ ಐವತ್ತು ಸಾವಿರ ರೂಪಾಯಿಯನ್ನು ಮಹಿಳೆಗೆ ತಲುಪಿಸಿ ಆದರ್ಶಪ್ರಾಯರಾಗಿದ್ದಾರೆ.
 

Trending News