close

News WrapGet Handpicked Stories from our editors directly to your mailbox

ದೆಹಲಿಯ ಪ್ರಧಾನಿ ನಿವಾಸದಲ್ಲಿ ಅವರ ತಾಯಿ ನೆಲೆಸದಿರುವ ಕಾರಣ ಬಿಚ್ಚಿಟ್ಟ ಮೋದಿ!

ನಿಮ್ಮ ವೇತನದ ಸ್ವಲ್ವ ಭಾಗವನ್ನು ನಿಮ್ಮ ತಾಯಿಗೆ ನೀಡುವಿರಾ ಎಂಬ ಅಕ್ಷಯ್ ಕುಮಾರ್ ಅವರ ಪ್ರಶ್ನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉತ್ತರ ತಿಳಿದರೆ ಆಶ್ಚರ್ಯ ಆಗುತ್ತೆ.  

Updated: Apr 24, 2019 , 01:15 PM IST
ದೆಹಲಿಯ ಪ್ರಧಾನಿ ನಿವಾಸದಲ್ಲಿ ಅವರ ತಾಯಿ ನೆಲೆಸದಿರುವ ಕಾರಣ ಬಿಚ್ಚಿಟ್ಟ ಮೋದಿ!

ನವದೆಹಲಿ: ನಟ ಅಕ್ಷಯ್ ಕುಮಾರ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿರುವ ವಿಶೇಷ ಸಂದರ್ಶನದಲ್ಲಿ ಮುಕ್ತವಾಗಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ದೆಹಲಿಯ ಪ್ರಧಾನಿ ನಿವಾಸದಲ್ಲಿ ತಮ್ಮ ತಾಯಿ ನೆಲೆಸದಿರಲು ಕಾರಣ ಏನು ಎಂಬುದನ್ನು ಹಂಚಿಕೊಂಡಿದ್ದಾರೆ.

ಸಂದರ್ಶನದ ವೇಳೆ, ನೀವು ನಿಮ್ಮ ಕುಟುಂಬವನ್ನು ಮಿಸ್ ಮಾಡಿಕೊಳ್ಳುವುದಿಲ್ಲವೇ ಎಂದು ಅಕ್ಷಯ್ ಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮೋದಿ, "ನಾನು ಬಹಳ ಚಿಕ್ಕ ವಯಸ್ಸಿನಲ್ಲೇ ನನ್ನ ಕುಟುಂಬದಿಂದ ಹೊರಬಂದೆ. ಮೊದಲಿಗೆ ಮನೆಯಿಂದ ದೂರ ಬಂದಾಗ ಬಹಳ ಬೇಸರವಾಗುತ್ತಿತ್ತು. ಆದರೆ ಈಗ ನಾನು ಈ ಜೀವನಕ್ಕೆ ಹೊಂದಿಕೊಂಡಿದ್ದೇನೆ" ಎಂದರು.

ಇದೇ ವೇಳೆ ನಾನು ನನ್ನ ತಾಯಿಯನ್ನು ಬಂದು ಇಲ್ಲೇ(ದೆಹಲಿಯ ಪ್ರಧಾನಿ ನಿವಾಸ) ಇರುವಂತೆ ಕೇಳಿದೆ. "ನನ್ನ ಮಾತಿಗೆ ಇಲ್ಲ ಎನ್ನದ ನನ್ನ ತಾಯಿ ಕೆಲದಿನ ನನ್ನೊಂದಿಗೆ ಬಂದಿದ್ದರು. ಆದರೆ ಒಂದೆರಡು ದಿನವಷ್ಟೇ ರಾತ್ರಿಯ ಭೋಜನವನ್ನು ಒಟ್ಟಿಗೆ ಸವಿದೆವು. ನನ್ನ ಕೆಲಸದ ಒತ್ತಡದಿಂದಾಗಿ ಸಾಮಾನ್ಯವಾಗಿ ರಾತ್ರಿ ಸುಮಾರು 12 ಗಂಟೆ ಹೊತ್ತಿಗೆ ನಾನು ಮನೆಗೆ ಬರುತ್ತೇನೆ. ನಾನು ಬರುವುದು ತಡವಾದಾಗಲೆಲ್ಲಾ ಅವರು ಚಿಂತೆಗೀಡಾಗುತ್ತಾರೆ. ಗ್ರಾಮದ ಜನರು ಆಗಾಗ್ಗೆ ಮನೆಗೆ ಬರುತ್ತಾರೆ ಮತ್ತು ಅವರು ಆಶ್ರಯದಲ್ಲಿದ್ದಾರೆಂದು ಅವರು ಗುಜರಾತ್ಗೆ ತೆರಳಲು ಬಯಸಿದ್ದರು". ಹಾಗಾಗಿ ನಾನು ನನ್ನ ಅಮ್ಮ ಜೊತೆಗಿರಲು ಆಗುತ್ತಿಲ್ಲ ಎಂದು ಅವರು ತಮ್ಮ ವಯಕ್ತಿಕ ವಿಚಾರವನ್ನು ಹಂಚಿಕೊಂಡರು.

ನಿಮ್ಮ ವೇತನದ ಸ್ವಲ್ವ ಭಾಗವನ್ನು ಏನಾದರೂ ನಿಮ್ಮ ತಾಯಿಗೆ ನೀಡುವಿರಾ ಎಂಬ ಅಕ್ಷಯ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ನನ್ನ ತಾಯಿ ಈಗಲೂ ನನಗೆ ಹಣ ನೀಡುತ್ತಾರೆ ಎಂಬ ಆಶ್ಚರ್ಯಕರ ಪ್ರತಿಕ್ರಿಯೆ ನೀಡಿದರು. "ನನ್ನ ತಾಯಿ ಇಂದಿಗೂ ಕೂಡ ನನಗೆ ಹಣ ನೀಡುತ್ತಾರೆ. ಅವರು ನನ್ನಿಂದ ಏನನ್ನೂ ಬಯಸುವುದಿಲ್ಲ. ನಾನು ಅವರನ್ನು ಭೇಟಿ ಆದಾಗಲೆಲ್ಲಾ ಅವರು ನನಗೆ 1.25ರೂ. ನೀಡುತ್ತಾರೆ. ಪ್ರಧಾನಿಯಾಗಿ ಮತ್ತು ಮುಖ್ಯಮಂತ್ರಿಯಾಗಿದ್ದಾಗಲೂ ವೈಯಕ್ತಿಕ ಖರ್ಚುಗಳಿಗಾಗಿ ನಾನೆಂದೂ ಸರ್ಕಾರದ ಹಣ ಬಳಸಿಲ್ಲ ಎಂದರು.

ನಟ ಅಕ್ಷಯ್ ಕುಮಾರ್ ಅವರು ನಡೆಸಿದ ಸಂದರ್ಶನದಲ್ಲಿ ಇಂತಹ ಹಲವು ರಾಜಕೀಯೇತರ ವಿಷಯಗಳನ್ನೂ ಪ್ರಧಾನಮಂತ್ರಿ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ.