ಮೌಲಾನಾ ಅಬುಲ್ ಕಲಾಂ ಆಜಾದ್ ಸ್ಮರಣೆಯಲ್ಲಿ ರಾಷ್ಟ್ರೀಯ ಶಿಕ್ಷಣ ದಿನ

ಭಾರತದಲ್ಲಿ ಪ್ರತಿ ವರ್ಷ ನವೆಂಬರ್ 11 ರಂದು ರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸಲಾಗುತ್ತದೆ.ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮ ದಿನಾಚರಣೆಯ ನೆನಪಿಗಾಗಿ ಇದನ್ನು ಆಚರಿಸಲಾಗುತ್ತದೆ.

Updated: Nov 11, 2019 , 02:20 PM IST
 ಮೌಲಾನಾ ಅಬುಲ್ ಕಲಾಂ ಆಜಾದ್ ಸ್ಮರಣೆಯಲ್ಲಿ ರಾಷ್ಟ್ರೀಯ ಶಿಕ್ಷಣ ದಿನ
Photo courtesy: Twitter (BSNL India)

ನವದೆಹಲಿ: ಭಾರತದಲ್ಲಿ ಪ್ರತಿ ವರ್ಷ ನವೆಂಬರ್ 11 ರಂದು ರಾಷ್ಟ್ರೀಯ ಶಿಕ್ಷಣ ದಿನವನ್ನು ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮ ದಿನಾಚರಣೆಯ ನೆನಪಿಗಾಗಿ ಇದನ್ನು ಆಚರಿಸಲಾಗುತ್ತದೆ. ಸ್ವಾತಂತ್ರ್ಯ ಹೋರಾಟಗಾರ, ಖ್ಯಾತ ಬರಹಗಾರ, ಕವಿ ಮತ್ತು ಪತ್ರಕರ್ತರಾಗಿದ್ದ ಅಬುಲ್ ಕಲಾಂ ಗುಲಾಮ್ ಮುಹಿಯುದ್ದೀನ್ 1888 ರ ನವೆಂಬರ್ 11 ರಂದು ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಜನಿಸಿದರು.

ಮೌಲಾನಾ ಅಬುಲ್ ಕಲಾಂ ಆಜಾದ್ ಸ್ಮರಣೆಯಲ್ಲಿ ಸೆಪ್ಟೆಂಬರ್ 11, 2008 ರಂದು, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಪ್ರತಿ ವರ್ಷ ನವೆಂಬರ್ 11 ಅನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಈ ದಿನದ ಹಿಂದಿನ ಮುಖ್ಯ ಧ್ಯೇಯವೆಂದರೆ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಪ್ರತಿಯೊಬ್ಬ ವ್ಯಕ್ತಿಯನ್ನು ಸಾಕ್ಷರರನ್ನಾಗಿ ಮಾಡುವುದು. ಮೌಲಾನಾ ಅಬುಲ್ ಕಲಾಂ ಆಜಾದ್ ನಾಯಕತ್ವದಲ್ಲಿ ಮೊದಲ ಐಐಟಿ - ಐಐಟಿ ಖರಗ್‌ಪುರವನ್ನು1951 ರಲ್ಲಿ ಸ್ಥಾಪಿಸಲಾಯಿತು. ಅಬುಲ್ ಕಲಾಂ ಆಜಾದ್ ಶಿಕ್ಷಣ ತಜ್ಞರಾಗಿ ನೀಡಿದ ಕೊಡುಗೆಗಾಗಿ 1992 ರಲ್ಲಿ ಅವರಿಗೆ ಭಾರತ್ ರತ್ನ ಪ್ರಶಸ್ತಿ ನೀಡಲಾಯಿತು. ಅವರು 1958 ರಲ್ಲಿ ಕೊನೆಯುಸಿರೆಳೆದರು.

ರಾಷ್ಟ್ರೀಯ ಶಿಕ್ಷಣ ದಿನ 2019:

ಇಂದು ಶಿಕ್ಷಣವು ಬಹಳ ಅವಶ್ಯಕವಾಗಿದೆ, ಇದು ಎಲ್ಲಾ ವೈಯಕ್ತಿಕ ಮತ್ತು ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಅಂತಿಮ ಮಾರ್ಗವಾಗಿದೆ. ಈ ಹಿನ್ನಲೆಯಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.

ಈ ರಾಷ್ಟ್ರೀಯ ಶಿಕ್ಷಣ ದಿನದಂದು ಮೌಲಾನಾ ಅಬುಲ್ ಕಲಾಂ ಆಜಾದ್ ಕೆಲವು ಸ್ಫೂರ್ತಿ ನೀಡುವ ನುಡಿಗಟ್ಟುಗಳು: 

  • ನಾವು ಯಾರನ್ನೂ ಆಕ್ರಮಿಸಿಲ್ಲ. ನಾವು ಯಾರನ್ನೂ ಜಯಿಸಿಲ್ಲ. ನಾವು ಅವರ ಭೂಮಿ, ಸಂಸ್ಕೃತಿ, ಇತಿಹಾಸವನ್ನು ಕಸಿದುಕೊಂಡಿಲ್ಲ ಮತ್ತು ನಮ್ಮ ಜೀವನ ವಿಧಾನವನ್ನು ಅವರ ಮೇಲೆ ಜಾರಿಗೊಳಿಸಲು ಪ್ರಯತ್ನಿಸಲಿಲ್ಲ. - ಮೌಲಾನಾ ಅಬುಲ್ ಕಲಾಂ ಆಜಾದ್
  • ನಿಮ್ಮ ಧ್ಯೇಯದಲ್ಲಿ ಯಶಸ್ವಿಯಾಗಲು, ನಿಮ್ಮ ಗುರಿಯ ಬಗ್ಗೆ ನೀವು ಏಕ ಚಿತ್ತದ ಭಕ್ತಿ ಹೊಂದಿರಬೇಕು.- ಮೌಲಾನಾ ಅಬುಲ್ ಕಲಾಂ ಆಜಾದ್.
  • ನಿಮ್ಮ ಕನಸುಗಳು ನನಸಾಗುವ ಮುನ್ನ ನೀವು ಕನಸು ಕಾಣಬೇಕು.- ಮೌಲಾನಾ ಅಬುಲ್ ಕಲಾಂ ಆಜಾದ್
  • ಶಿಕ್ಷಣ ತಜ್ಞರು ವಿದ್ಯಾರ್ಥಿಗಳಲ್ಲಿ ವಿಚಾರಣೆ, ಸೃಜನಶೀಲತೆ, ಉದ್ಯಮಶೀಲತೆ ಮತ್ತು ನೈತಿಕ ನಾಯಕತ್ವದ ಮನೋಭಾವವನ್ನು ಬೆಳೆಸಬೇಕು ಮತ್ತು ಆದರ್ಶಪ್ರಾಯರಾಗಬೇಕು.- ಮೌಲಾನಾ ಅಬುಲ್ ಕಲಾಂ ಆಜಾದ್
  • ಸ್ವಾಭಿಮಾನವು ಸ್ವಾವಲಂಬನೆಯೊಂದಿಗೆ ಬರುತ್ತದೆ ಎಂದು ನಮಗೆ ತಿಳಿದಿಲ್ಲವೇ? - ಮೌಲಾನಾ ಅಬುಲ್ ಕಲಾಂ ಆಜಾದ್