ಭಾರತದ ರಾಷ್ಟ್ರೀಯ ತರಕಾರಿ ಯಾವುದು ಗೊತ್ತಾ? ತರಕಾರಿ ಮತ್ತು ಹಣ್ಣು ಎರಡರ ವರ್ಗದಲ್ಲಿಯೂ ಬರುವ ವಿಶ್ವದ ಏಕೈಕ ಫಲವಿದು...

National Vegetable of India: ಪ್ರಕೃತಿ ಹಣ್ಣುಗಳು ಮತ್ತು ತರಕಾರಿಗಳು ಸೇರಿದಂತೆ ಅನೇಕ ಆಹಾರ ಪದಾರ್ಥಗಳನ್ನು ನಮಗೆಂದು ನೀಡಿದೆ. ಅಂತಹ ತರಕಾರಿಗಳಲ್ಲಿ ನಮ್ಮ ದೇಶದ ರಾಷ್ಟ್ರೀಯ ತರಕಾರಿಯ ಯಾವುದೆಂದು ನಿಮಗೆ ತಿಳಿದಿದೆಯೇ?  

Written by - Bhavishya Shetty | Last Updated : Mar 14, 2025, 05:25 PM IST
    • ದೇಶದ ರಾಷ್ಟ್ರೀಯ ತರಕಾರಿಯ ಯಾವುದೆಂದು ನಿಮಗೆ ತಿಳಿದಿದೆಯೇ?
    • ನಮ್ಮ ಸುತ್ತಲೂ ನಮಗೆ ತಿಳಿದಿಲ್ಲದ ಅನೇಕ ವಿಷಯಗಳಿವೆ
    • ಜನರು ಅತಿ ಹೆಚ್ಚು ಮುಖ ಮುರಿಯುವ ತರಕಾರಿಯೆಂದರೆ...
ಭಾರತದ ರಾಷ್ಟ್ರೀಯ ತರಕಾರಿ ಯಾವುದು ಗೊತ್ತಾ? ತರಕಾರಿ ಮತ್ತು ಹಣ್ಣು ಎರಡರ ವರ್ಗದಲ್ಲಿಯೂ ಬರುವ ವಿಶ್ವದ ಏಕೈಕ ಫಲವಿದು...
India Pumpkin

National Vegetable of India: ಪ್ರಕೃತಿ ಹಣ್ಣುಗಳು ಮತ್ತು ತರಕಾರಿಗಳು ಸೇರಿದಂತೆ ಅನೇಕ ಆಹಾರ ಪದಾರ್ಥಗಳನ್ನು ನಮಗೆಂದು ನೀಡಿದೆ. ಅಂತಹ ತರಕಾರಿಗಳಲ್ಲಿ ನಮ್ಮ ದೇಶದ ರಾಷ್ಟ್ರೀಯ ತರಕಾರಿಯ ಯಾವುದೆಂದು ನಿಮಗೆ ತಿಳಿದಿದೆಯೇ?

Add Zee News as a Preferred Source

ಇದನ್ನೂ ಓದಿ:  ಮಧುಮೇಹಿಗಳಿಗೆ ಪುನರ್ಜನ್ಮ ನೀಡುವ ನೇರಳೆ ಹಣ್ಣು ಈ ಆರೋಗ್ಯ ಸಮಸ್ಯೆಗಳಿರುವವರಿಗೆ ವಿಷ..! ತಿನ್ನಲೇಬಾರದು..

ನಮ್ಮ ಸುತ್ತಲೂ ನಮಗೆ ತಿಳಿದಿಲ್ಲದ ಅನೇಕ ವಿಷಯಗಳಿವೆ. ಹಲವು ಬಾರಿ ನಾವು ಈ ವಿಷಯಗಳನ್ನು ತಿಳಿದುಕೊಳ್ಳುವುದು ಅಗತ್ಯವೆಂದು ಪರಿಗಣಿಸುವುದಿಲ್ಲ. ಆದ್ದರಿಂದಲೇ ಅದರ ಬಗ್ಗೆ ಚರ್ಚಿಸುವುದಿಲ್ಲ. ನಮ್ಮ ದೇಶದ ರಾಷ್ಟ್ರೀಯ ಧ್ವಜ, ರಾಷ್ಟ್ರೀಯ ಮರ, ರಾಷ್ಟ್ರೀಯ ಹೂವು, ಪ್ರಾಣಿ, ಪಕ್ಷಿ ಮತ್ತು ಹಣ್ಣಿನ ಬಗ್ಗೆ ತಿಳಿದುಕೊಂಡಿದ್ದೇವೆ. ಆದರೆ ರಾಷ್ಟ್ರೀಯ ತರಕಾರಿ ಯಾವುದು ನಿಮಗೆ ಗೊತ್ತಾ?

ಇದು ನಮ್ಮ ರಾಷ್ಟ್ರೀಯ ತರಕಾರಿ!
ಜನರು ಅತಿ ಹೆಚ್ಚು ಮುಖ ಮುರಿಯುವ ತರಕಾರಿಯೆಂದರೆ ಅದು ಕುಂಬಳಕಾಯಿ. ಈ ಕುಂಬಳಕಾಯಿ ನಮ್ಮ ದೇಶದ ರಾಷ್ಟ್ರೀಯ ತರಕಾರಿ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಕೆಲವರಿಗೆ ಕುಂಬಳಕಾಯಿ ಇಷ್ಟವಾದರೆ ಇನ್ನು ಕೆಲವರಿಗೆ ಇಷ್ಟವಾಗುವುದಿಲ್ಲ. ಆಯುರ್ವೇದದಲ್ಲಿ ಇದಕ್ಕೆ ಔಷಧೀಯ ಹಣ್ಣಿನ ಸ್ಥಾನಮಾನ ನೀಡಲಾಗಿರುವುದರಿಂದ, ಭಾರತದ ಬಹುತೇಕ ಮನೆಯಲ್ಲೂ ಈ ತರಕಾರಿಯನ್ನು ಒಂದು ವಾರ ಅಥವಾ ಹತ್ತು ದಿನಗಳಲ್ಲಿ ಬಳಕೆ ಮಾಡಲಾಗುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಮಧುಮೇಹ ಮತ್ತು ಹೃದಯ ಸಂಬಂಧಿತ ಕಾಯಿಲೆಗಳಲ್ಲಿಯೂ ಸಹ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ:  ಎಷ್ಟೇ ಬೊಜ್ಜು ಇರಲಿ... ಕಲ್ಲಂಗಡಿ ಹಣ್ಣನ್ನು ಈ ಪುಡಿಯ ಜೊತೆ ಅದ್ದಿ ತಿಂದರೆ ಬೆಣ್ಣೆ ಕರಗಿದಂತೆ ಕರಗಿ ಹೋಗುವುದು ಹೊಟ್ಟೆ ಮತ್ತು ಸೊಂಟದ ಕೊಬ್ಬು

ತರಕಾರಿ ಮತ್ತು ಹಣ್ಣು ಎರಡರ ವರ್ಗದಲ್ಲಿಯೂ ಇರುವ ವಿಶ್ವದ ಏಕೈಕ ಹಣ್ಣು ಕುಂಬಳಕಾಯಿ. ಭಾರತೀಯ ಕುಂಬಳಕಾಯಿ ಮತ್ತು ವಿದೇಶಿ ಕುಂಬಳಕಾಯಿ ನಡುವೆ . ಭಾರತವನ್ನು ಹೊರತುಪಡಿಸಿ, ಇದನ್ನು ಹೆಚ್ಚಾಗಿ ಅಮೆರಿಕ, ಮೆಕ್ಸಿಕೊ ಮತ್ತು ಚೀನಾದಲ್ಲಿ ಬೆಳೆಯಲಾಗುತ್ತದೆ. 19 ನೇ ಶತಮಾನದಲ್ಲಿ ಅಮೆರಿಕದಲ್ಲಿ ಇದನ್ನು ಬಳಕೆ ಮಾಡಲಾಯಿತು. ಇಲ್ಲಿನ ಜನರು ಹ್ಯಾಲೋವೀನ್ ಎಂಬ ಹಬ್ಬದಲ್ಲಿ ದುಷ್ಟಶಕ್ತಿಗಳನ್ನು ಹೆದರಿಸಲು ದೊಡ್ಡ ಕುಂಬಳಕಾಯಿಗಳನ್ನು ಬಳಸುತ್ತಾರೆ. ಸಂಸ್ಕೃತದಲ್ಲಿ ಇದನ್ನು ಕೂಷ್ಮಾಂಡ, ಪುಷ್ಪಲ, ವಲ್ಲಿಫಲ ಮತ್ತು ವೃಹತ್ಫಲ ಎಂದು ಕರೆಯಲಾಗುತ್ತದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

 

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News