ಪ್ರಧಾನಿ ಮೋದಿ ದೊಡ್ಡ ಸುಳ್ಳುಗಾರ ಎಂದ ಸಿಧುಗೆ ಚುನಾವಣಾ ಆಯೋಗ ನೋಟಿಸ್

 ಏಪ್ರಿಲ್ 17 ರಂದು ಅಹಮದಾಬಾದ್ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಡೆಸಿದ ಟೀಕಾ ಪ್ರಹಾರ ವಿಚಾರವಾಗಿ ಈಗ ಚುನಾವಣಾ ಆಯೋಗ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧುಗೆ ನೋಟೀಸ್ ಜಾರಿ ಮಾಡಿದೆ.    

Last Updated : May 1, 2019, 08:40 PM IST
ಪ್ರಧಾನಿ ಮೋದಿ ದೊಡ್ಡ ಸುಳ್ಳುಗಾರ ಎಂದ ಸಿಧುಗೆ ಚುನಾವಣಾ ಆಯೋಗ ನೋಟಿಸ್  title=
file photo

ನವದೆಹಲಿ: ಏಪ್ರಿಲ್ 17 ರಂದು ಅಹಮದಾಬಾದ್ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಡೆಸಿದ ಟೀಕಾ ಪ್ರಹಾರ ವಿಚಾರವಾಗಿ ಈಗ ಚುನಾವಣಾ ಆಯೋಗ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧುಗೆ ನೋಟೀಸ್ ಜಾರಿ ಮಾಡಿದೆ.    

ಅಂದು ನವಜೋತ್ ಸಿಂಗ್ ಸಿಧು ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿಯನ್ನು ಅತಿ ದೊಡ್ಡ ಸುಳ್ಳುಗಾರ ಎಂದು ಹೇಳಿಕೆ ನೀಡಿದ್ದರು.ಈ ಹಿನ್ನಲೆಯಲ್ಲಿ ಈಗ ಚುನಾವಣಾ ಆಯೋಗ ಈ ಹೇಳಿಕೆ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದೆ ಎಂದು ಹೇಳಿ ನೋಟಿಸ್ ಜಾರಿ ಮಾಡಿದೆ.

ಇದಕ್ಕೂ ಮೊದಲು ಕಳೆದ ತಿಂಗಳು ಬಿಹಾರದ ಕತಿಹಾರ್ ಜಿಲ್ಲೆಯ ಸಾರ್ವಜನಿಕ ಸಭೆಯಲ್ಲಿ ಸಿಧು ಮುಸ್ಲಿಮರಿಗೆ ತಮ್ಮ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳಲು ಹೇಳಿದ್ದರು.ಈ ಹಿನ್ನಲೆಯಲ್ಲಿ ಅವರಿಗೆ ಚುನಾವಣಾ ಪ್ರಚಾರದಿಂದ 72 ಗಂಟೆಗಳ ನಿಷೇಧವನ್ನು ಹೇರಲಾಗಿತ್ತು. ಆಗ ಸಿಧು ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸಚಿವರಾದ ಜೆಪಿ ನಾದಾ, ವಿ.ಕೆ.ಸಿಂಗ್ ಮತ್ತು ಮುಖ್ತಾರ್ ಅಬ್ಬಾಸ್ ನಖ್ವಿ ಸೇರಿದಂತೆ ಬಿಜೆಪಿ ನಿಯೋಗವು ಚುನಾವಣಾ ಆಯೋಗಕ್ಕೆ ಆಗ್ರಹಿಸಿತ್ತು. 

Trending News