ಮುಂದಿನ ಬಾರಿ ಮೋದಿಗೆ ಮಣ್ಣಿನ ಉಂಡೆಯಲ್ಲಿ ಹರಳು ಸೇರಿಸಿ ಸಿಹಿ ಗಿಫ್ಟ್ ನೀಡುವೆ- ಮಮತಾ ಬ್ಯಾನರ್ಜೀ

ಇತ್ತೀಚಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ನೀಡಿರುವ ಸಂದರ್ಶನದಲ್ಲಿ ಪ್ರಧಾನಿ ಮೋದಿ ತಮಗೆ ಮಮತಾ ಬ್ಯಾನರ್ಜೀ ಪ್ರತಿವರ್ಷ ಉಡುಗೊರೆಗಳನ್ನು ಕಳುಹಿಸುತ್ತಾರೆ ಎಂದು ಹೇಳಿದ್ದರು.ಈಗ ಇದಕ್ಕೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜೀ ಮುಂದಿನ ಬಾರಿ ಮಣ್ಣಿನ ಉಂಡೆಯೊಳಗೆ ಗೋಡಂಬಿ ಒಣದ್ರಾಕ್ಷಿಯಂತೆ ಹರಳುಗಳನ್ನು ಸೇರಿಸುತ್ತೇವೆ.ಆಗ ಹಲ್ಲುಗಳು ಮುರಿಯುತ್ತವೆ ಎಂದು ಹೇಳಿದ್ದಾರೆ.

Updated: Apr 26, 2019 , 05:03 PM IST
ಮುಂದಿನ ಬಾರಿ ಮೋದಿಗೆ ಮಣ್ಣಿನ ಉಂಡೆಯಲ್ಲಿ ಹರಳು ಸೇರಿಸಿ ಸಿಹಿ ಗಿಫ್ಟ್ ನೀಡುವೆ- ಮಮತಾ ಬ್ಯಾನರ್ಜೀ

ನವದೆಹಲಿ: ಇತ್ತೀಚಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ನೀಡಿರುವ ಸಂದರ್ಶನದಲ್ಲಿ ಪ್ರಧಾನಿ ಮೋದಿ ತಮಗೆ ಮಮತಾ ಬ್ಯಾನರ್ಜೀ ಪ್ರತಿವರ್ಷ ಉಡುಗೊರೆಗಳನ್ನು ಕಳುಹಿಸುತ್ತಾರೆ ಎಂದು ಹೇಳಿದ್ದರು.ಈಗ ಇದಕ್ಕೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜೀ ಮುಂದಿನ ಬಾರಿ ಮಣ್ಣಿನ ಉಂಡೆಯೊಳಗೆ ಗೋಡಂಬಿ ಒಣದ್ರಾಕ್ಷಿಯಂತೆ ಹರಳುಗಳನ್ನು ಸೇರಿಸುತ್ತೇವೆ.ಆಗ ಹಲ್ಲುಗಳು ಮುರಿಯುತ್ತವೆ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಅಸಾನೋಲ್ ನಲ್ಲಿ ಮಾತನಾಡಿದ ಮಮತಾ ಬ್ಯಾನರ್ಜೀ "ಮೋದಿ ಅವರು ಈ ಮೊದಲು ಬಂಗಾಳಕ್ಕೆ ಬಂದಿರಲಿಲ್ಲ, ಆದರೆ ಈಗ ಅವರಿಗೆ ಚುನಾವಣೆಯಲ್ಲಿ ಬಂಗಾಳದ ಮತಗಳು ಬೇಕಾಗಿದೆ. ಅವರಿಗೆ ನಾವು ಬಂಗಾಳದ ರಸಗುಲ್ಲಾವನ್ನು ನೀಡುತ್ತೇವೆ. ಮಣ್ಣಿನಲ್ಲಿ ಸಿಹಿ ತಿಂಡಿಗಳನ್ನು ತಯಾರಿಸಿ ಅದರಲ್ಲಿ ಗೋಡಂಬಿ ಮತ್ತು ಒಣ ದ್ರಾಕ್ಷಿಗಳನ್ನು ಲಡ್ಡುಗಳಲ್ಲಿ ಬಳಸಿದ ಹಾಗೆ ಹರಳುಗಳನ್ನು ಹಾಕುತ್ತೇವೆ, ಆಗ ಹಲ್ಲುಗಳು ಮುರಿಯುತ್ತವೆ ಎಂದು ಹೇಳಿದರು.
 
ಬಾಲಿವುಡ್ ನಟ ಅಕ್ಷಯ ಕುಮಾರ್ ಅವರಿಗೆ ಮೋದಿ ನೀಡಿರುವ ಸಂದರ್ಶನದಲ್ಲಿ ದೀದಿ ತಮಗೆ ವರ್ಷಕ್ಕೊಮ್ಮೆ ಕುರ್ತಾ ಮತ್ತು ಸಿಹಿ ತಿಂಡಿಗಳನ್ನು ಕಳುಹಿಸುತ್ತಾರೆ ಎಂದು ಹೇಳಿದ್ದರು.ಈ ಹಿನ್ನಲೆಯಲ್ಲಿ ಈಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಪ್ರಧಾನಿ ವಿರುದ್ಧ ಕಿಡಿ ಕಾರಿದ್ದಾರೆ.