NITI Aayog : ಭಾರತದಲ್ಲಿ 'ಅತ್ಯಂತ ಹಿಂದುಳಿದ ಜಿಲ್ಲೆ' ಯಾವುದು ಗೊತ್ತಾ? ಅದಕ್ಕೆ ನೀತಿ ಆಯೋಗದ ಉತ್ತರ ಇಲ್ಲಿದೆ  ನೋಡಿ!

ದೇಶದಾದ್ಯಂತ ಹಿಂದುಳಿದ ಜಿಲ್ಲೆಗಳ ಜೂನ್ ತಿಂಗಳ ಪಟ್ಟಿಯನ್ನು ನೀತಿ ಆಯೋಗ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ, ಮಣಿಪುರದ ಚಂದೇಲ್ ಜಿಲ್ಲೆಯು ಅಗ್ರ ಸ್ಥಾನದಲ್ಲಿದೆ.

Written by - Channabasava A Kashinakunti | Last Updated : Aug 3, 2021, 11:29 PM IST
  • ದೇಶದಾದ್ಯಂತ ಹಿಂದುಳಿದ ಜಿಲ್ಲೆಗಳ ಜೂನ್ ತಿಂಗಳ ಪಟ್ಟಿಯನ್ನು ನೀತಿ ಆಯೋಗ
  • ಈ ಪಟ್ಟಿಯಲ್ಲಿ, ಮಣಿಪುರದ ಚಂದೇಲ್ ಜಿಲ್ಲೆಯು ಅಗ್ರ ಸ್ಥಾನದಲ್ಲಿದೆ
  • 'ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ ಜಾರ್ಖಂಡ್‌ನ ಸಾಹೇಬ್‌ಗಂಜ್
NITI Aayog : ಭಾರತದಲ್ಲಿ 'ಅತ್ಯಂತ ಹಿಂದುಳಿದ ಜಿಲ್ಲೆ' ಯಾವುದು ಗೊತ್ತಾ? ಅದಕ್ಕೆ ನೀತಿ ಆಯೋಗದ ಉತ್ತರ ಇಲ್ಲಿದೆ  ನೋಡಿ! title=

ನವದೆಹಲಿ : ದೇಶದಾದ್ಯಂತ ಹಿಂದುಳಿದ ಜಿಲ್ಲೆಗಳ ಜೂನ್ ತಿಂಗಳ ಪಟ್ಟಿಯನ್ನು ನೀತಿ ಆಯೋಗ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ, ಮಣಿಪುರದ ಚಂದೇಲ್ ಜಿಲ್ಲೆಯು ಅಗ್ರ ಸ್ಥಾನದಲ್ಲಿದೆ.

ಈ ನಾಲ್ಕು ಜಿಲ್ಲೆಗಳು ಟಾಪ್ 5 ರಲ್ಲಿ ಸೇರಿಸಲಾಗಿದೆ :

ನೀತಿ ಆಯೋಗ(NITI Aayog)ವು ಮಂಗಳವಾರ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, 'ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ ಜಾರ್ಖಂಡ್‌ನ ಸಾಹೇಬ್‌ಗಂಜ್ ಮತ್ತು ಪಂಜಾಬ್‌ನ ಫಿರೋಜ್‌ಪುರ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ.

ಇದನ್ನೂ ಓದಿ : PMSYMY : ಈ ಸರ್ಕಾರಿ ಯೋಜನೆಯಲ್ಲಿ ₹2 ಹೂಡಿಕೆ ಮಾಡಿ ವೃದ್ಧಾಪ್ಯದಲ್ಲಿ ಸಿಗಲಿದೆ ₹36000 ಪಿಂಚಣಿ!

112 ಹಿಂದುಳಿದ ಜಿಲ್ಲೆಗಳು ಸ್ಥಾನ ಪಡೆದಿವೆ :

ನೀತಿ ಆಯೋಗವು ನಡೆಸಿದ ಈ ಡೆಲ್ಟಾ ಶ್ರೇಯಾಂಕದಲ್ಲಿ, 112 ಹಿಂದುಳಿದ ಜಿಲ್ಲೆಗಳಲ್ಲಿ(Districts) ಅಭಿವೃದ್ಧಿಗೆ ಸಂಬಂಧಿಸಿದ ಆರು ಕ್ಷೇತ್ರಗಳಲ್ಲಿನ ಪ್ರಗತಿಯನ್ನು ಪರಿಶೀಲಿಸಲಾಗಿದೆ. ಈ ಪ್ರದೇಶಗಳು ಆರೋಗ್ಯ ಮತ್ತು ಪೋಷಣೆ, ಶಿಕ್ಷಣ, ಕೃಷಿ ಮತ್ತು ಜಲ ಸಂಪನ್ಮೂಲಗಳು, ಆರ್ಥಿಕ ಸೇರ್ಪಡೆ, ಕೌಶಲ್ಯ ಅಭಿವೃದ್ಧಿ ಮತ್ತು ಮೂಲಸೌಕರ್ಯ ಅಭಿವೃದ್ಧಿ.

ಇದನ್ನೂ ಓದಿ : Narendra Modi : ಬಡವರ ಹಸಿವು ನೀಗಿಸಿದ 'ಉಚಿತ ಪಡಿತರ' : ಪ್ರಧಾನಿ ಮೋದಿ

ಪ್ರತಿ ತಿಂಗಳು ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ :

ಆಯೋಗವು (NITI Aayog) ಜನವರಿ 2018 ರಲ್ಲಿ ಹಿಂದುಳಿದ ಜಿಲ್ಲೆಗಳ(Backward Districts) ಕಾರ್ಯಕ್ರಮವನ್ನು ಆರಂಭಿಸಿತು. ಅಭಿವೃದ್ಧಿಯ ದೃಷ್ಟಿಯಿಂದ ಹಿಂದುಳಿದಿರುವ ಜಿಲ್ಲೆಗಳಲ್ಲಿ ಬದಲಾವಣೆ ತರುವುದು ಇದರ ಉದ್ದೇಶವಾಗಿದೆ. ಹಿಂದುಳಿದ ಜಿಲ್ಲೆಗಳ ಶ್ರೇಯಾಂಕವನ್ನು ಪ್ರತಿ ತಿಂಗಳು ಬಿಡುಗಡೆ ಮಾಡಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News