ನವದೆಹಲಿ: ಪಟಾಕಿ ಮಾರಾಟದ ಮೇಲೆ ನಿಷೇಧ ಹೇರಲು ನಿರಾಕರಿಸಿರುವ ಸುಪ್ರೀಂಕೋರ್ಟ್ ಕಡಿಮೆ ಮಾಲಿನ್ಯ ಮತ್ತು ಪರಿಸರ ಸ್ನೇಹಿ ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವಂತೆ ತಿಳಿಸಿದೆ. ಡೆಸಿಬೆಲ್ ಧ್ವನಿ ಮಿತಿಯನ್ನು ಹೊಂದಿರುವ ಹಸಿರು ಪಟಾಕಿಗಳನ್ನೂ ಮಾತ್ರ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುಮತಿಸಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ.



COMMERCIAL BREAK
SCROLL TO CONTINUE READING

ದೇಶಾದ್ಯಂತ ಪಟಾಕಿ ಮಾರಾಟ ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆ ಮುಗಿಸಿದ್ದ ಸುಪ್ರೀಂಕೋರ್ಟ್ ಮಂಗಳವಾರ ಮಹತ್ವದ ತೀರ್ಪು ಪ್ರಕಟಿಸಿದೆ.


ಪರವಾನಗಿ ಪಡೆದಿರುವ ವ್ಯಾಪಾರಿಗಳಿಗೆ ಮಾತ್ರ 'ಪಟಾಕಿ' ಮಾರಾಟಕ್ಕೆ ಅನುಮತಿ ನೀಡಲಾಗುವುದು ಎಂದು ತಿಳಿಸಿರುವ ನ್ಯಾಯಮೂರ್ತಿ ಅರ್ಜನ್ ಕುಮಾರ್ ಸಿಕ್ರಿ ಅವರಿದ್ದ ಪೀಠ ತಿಳಿಸಿದೆ.


ಪಟಾಕಿ ಹೊಡೆಯಲು ಸಮಯ ನಿಗದಿ:
ಪಟಾಕಿ ಹೊಡೆಯುವುದಕ್ಕೂ ಸಮಯ ನಿಗದಿಗೊಳಿಸಿರುವ ಸುಪ್ರೀಂಕೋರ್ಟ್ ದೀಪಾವಳಿ ಸಮಯದಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆ ವರೆಗೆ ಮಾತ್ರ ಪಟಾಕಿ ಹೊಡೆಯಲು ಅವಕಾಶವಿದ್ದು, ಕ್ರಿಸ್​ಮಸ್​ ಮತ್ತು ಹೊಸ ವರ್ಷ ಸಂಭ್ರಮ ವೇಳೆ ಜನರು ಮಧ್ಯರಾತ್ರಿ 11:45 ರಿಂದ 12:40ರ ವರೆಗೆ ಮಾತ್ರ ಅನುಮತಿಸಲಾಗುವುದು ಎಂದು ತಿಳಿಸಿದೆ.


ಕಳೆದ ವರ್ಷ ಅಕ್ಟೋಬರ್ 9 ರಂದು ಸರ್ವೋಚ್ಚ ನ್ಯಾಯಾಲಯ ತಾತ್ಕಾಲಿಕವಾಗಿ ದೀಪಾವಳಿಗೆ ಮುಂಚಿತವಾಗಿ ಪಟಾಕಿ ಮಾರಾಟವನ್ನು ನಿಷೇಧಿಸಿತು. ನಂತರ, ಅಕ್ಟೋಬರ್ 19, 2017 ರಂದು ದೀಪಾವಳಿಗೆ ಮುಂಚಿತವಾಗಿ ಕನಿಷ್ಟ ಒಂದು ದಿನ ಅಥವಾ ಎರಡು ದಿನಗಳವರೆಗೆ ಪಟಾಕಿ ಮಾರಲು ಅನುಮತಿ ಪಡೆದ ವ್ಯಾಪಾರಿಗಳ ಮನವಿಗೆ ಸ್ಪಂಧಿಸಿತ್ತು.