ಸರ್ಕಾರ ರಚನೆಗೆ 15 ದಿನ ಅಷ್ಟೇ ಯಾಕೆ ಒಂದು ತಿಂಗಳು ತಗೋಳಿ: ಶಿವಸೇನಾ ವ್ಯಂಗ್ಯ

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಚಾರವಾಗಿ ಶಿವಸೇನಾ-ಬಿಜೆಪಿ ನಡುವಿನ ಸಮರ ಹಾಗೆ ಮುಂದುವರೆದಿದ್ದು, ಈಗ ಶಿವಸೇನಾ ಸರ್ಕಾರ ರಚನೆ ವಿಚಾರವಾಗಿ ಬಿಜೆಪಿಯನ್ನು ವ್ಯಂಗ್ಯವಾಡಿದೆ.

Last Updated : Nov 8, 2019, 11:50 AM IST
ಸರ್ಕಾರ ರಚನೆಗೆ 15 ದಿನ ಅಷ್ಟೇ ಯಾಕೆ ಒಂದು ತಿಂಗಳು ತಗೋಳಿ: ಶಿವಸೇನಾ ವ್ಯಂಗ್ಯ  title=

ನವದೆಹಲಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಚಾರವಾಗಿ ಶಿವಸೇನಾ-ಬಿಜೆಪಿ ನಡುವಿನ ಸಮರ ಹಾಗೆ ಮುಂದುವರೆದಿದ್ದು, ಈಗ ಶಿವಸೇನಾ ಸರ್ಕಾರ ರಚನೆ ವಿಚಾರವಾಗಿ ಬಿಜೆಪಿಯನ್ನು ವ್ಯಂಗ್ಯವಾಡಿದೆ.

ಶಿವಸೇನಾ ವಕ್ತಾರ ಸಂಜಯ್ ರೌತ್ ಮಾತನಾಡಿ 'ಸರ್ಕಾರ ರಚನೆಗೆ 15 ದಿನಗಳು ಮಾತ್ರವಲ್ಲ, ಒಂದು ತಿಂಗಳು ತೆಗೆದುಕೊಳ್ಳಲಿ ಎಂದು ಅವರು ವ್ಯಂಗ್ಯವಾಡಿದ್ದಾರೆ. ಸರ್ಕಾರ ರಚನೆಗೆ ಶಿವಸೇನಾ ಶುಕ್ರವಾರ ಮಧ್ಯ ರಾತ್ರಿವರೆಗೆ ಗಡುವು ನೀಡಿದೆ.ಅಕ್ಟೋಬರ್ 24 ರ ಫಲಿತಾಂಶದ ನಂತರ ಶಿವಸೇನಾ ಮತ್ತು ಬಿಜೆಪಿ ನಡುವೆ ಸರ್ಕಾರ ರಚನೆ ವಿಚಾರ ಕಗ್ಗಂಟಾಗಿ ಉಳಿದಿದೆ.

'ಏಕೈಕ ಅತಿದೊಡ್ಡ ಪಕ್ಷವು ಮೊದಲು ಸರ್ಕಾರ ರಚಿಸುವ ಅವಕಾಶವನ್ನು ಪಡೆಯಬೇಕು. ಅದು ಬಿಜೆಪಿ. ಅವರಿಗೆ ಕೇವಲ 15 ದಿನಗಳು ಮಾತ್ರವಲ್ಲ, ವಿಧಾನಸಭೆಯಲ್ಲಿ ತಮ್ಮ ಬಹುಮತವನ್ನು ಸಾಬೀತುಪಡಿಸಲು ಒಂದು ತಿಂಗಳು ಸಿಗಬೇಕು" ಎಂದು ಸಂಜಯ್ ರೌತ್  ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಮೈತ್ರಿಪಕ್ಷವಾಗಿರುವ ಶಿವಸೇನಾ ಮುಖ್ಯಮಂತ್ರಿ ಹುದ್ದೆ ಸೇರಿದಂತೆ 50:50 ಸೂತ್ರವನ್ನು ಜಾರಿಗೊಳಿಸಲು ಪಟ್ಟು ಹಿಡಿದಿದೆ. ಈ ಹಿನ್ನಲೆಯಲ್ಲಿ ಈಗ ಉಭಯ ಪಕ್ಷಗಳ ನಡುವೆ ಈ ವಿಚಾರ ತಾರ್ಕಿಕ ಅಂತ್ಯ ಕಾಣದೆ ಹಾಗೆ ಉಳಿದಿದೆ.

Trending News