ನಾವೆಲ್ಲರೂ ಒಟ್ಟಾಗಿ ಭಾರತವನ್ನು ಇನ್ನು ಎತ್ತರಕ್ಕೆ ಕೊಂಡೊಯ್ಯಬೇಕಾಗಿದೆ- ರಾಷ್ಟ್ರಪತಿ
73 ನೇ ದೇಶದ ಸ್ವಾತ್ರಂತ್ರ ದಿನಾಚರಣೆ ಪ್ರಯುಕ್ತ ದೇಶವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೊವಿಂದ್ `ಈಗ ನಾವೆಲ್ಲರೂ ಒಟ್ಟಾಗಿ ಭಾರತದ ಇನ್ನು ಎತ್ತರಕ್ಕೆ ಕೊಂಡೊಯ್ಯಬೇಕಾಗಿದೆ ಎಂದು ಹೇಳಿದರು.
ನವದೆಹಲಿ: 73 ನೇ ದೇಶದ ಸ್ವಾತ್ರಂತ್ರ ದಿನಾಚರಣೆ ಪ್ರಯುಕ್ತ ದೇಶವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೊವಿಂದ್ 'ಈಗ ನಾವೆಲ್ಲರೂ ಒಟ್ಟಾಗಿ ಭಾರತದ ಇನ್ನು ಎತ್ತರಕ್ಕೆ ಕೊಂಡೊಯ್ಯಬೇಕಾಗಿದೆ ಎಂದು ಹೇಳಿದರು.
'ನಾವು 72 ವರ್ಷಗಳನ್ನು ಮುಕ್ತ ರಾಷ್ಟ್ರವಾಗಿ ವಿಶೇಷ ಹಂತದಲ್ಲಿ ಪೂರ್ಣಗೊಳಿಸುತ್ತೇವೆ. ಇನ್ನು ಕೆಲವು ವಾರಗಳಲ್ಲಿ, ಅಕ್ಟೋಬರ್ 2 ರಂದು, ನಮ್ಮ ರಾಷ್ಟ್ರದ ವಿಮೋಚನೆಗಾಗಿ ಹೋರಾಡಿದ ರಾಷ್ಟಪಿತ ಮಹಾತ್ಮ ಗಾಂಧಿಯವರ 150 ನೇ ಜನ್ಮದಿನಾಚರಣೆಯನ್ನು ಆಚರಿಸುತ್ತೇವೆ ಎಂದು ಹೇಳಿದರು.
ಈ ವರ್ಷ ಸಾರ್ವಕಾಲಿಕ ಶ್ರೇಷ್ಠ, ಬುದ್ಧಿವಂತ ಮತ್ತು ಪ್ರಭಾವಶಾಲಿ ಭಾರತೀಯರಲ್ಲಿ ಒಬ್ಬರಾದ ಗುರುನಾನಕ್ ದೇವ್ ಜಿ ಅವರ 550 ನೇ ಜನ್ಮದಿನವನ್ನು ಸೂಚಿಸುತ್ತದೆ. ಅವರು ಸಿಖ್ ಧರ್ಮದ ಸ್ಥಾಪಕರಾಗಿದ್ದರು. ಆದರೆ ಅವರ ಗೌರವವು ನಮ್ಮ ಸಿಖ್ ಸಹೋದರರು ಮತ್ತು ಸಹೋದರಿಯರನ್ನು ಮೀರಿದೆ ಎಂದು ರಾಷ್ಟ್ರಪತಿ ಸ್ಮರಿಸಿದರು.
ಇದೇ ವೇಳೆ ಕಾಶ್ಮಿರದಲ್ಲಾದ ಬೆಳವಣಿಗೆಗಳ ಬಗ್ಗೆ ಉಲ್ಲೇಖಿಸಿದ ರಾಷ್ಟ್ರಪತಿ ಕೊವಿಂದ್ 'ಜಮ್ಮು-ಕಾಶ್ಮೀರ ಮತ್ತು ಲಡಾಕ್‌ನಲ್ಲಿ ಇತ್ತೀಚೆಗೆ ಮಾಡಿದ ಬದಲಾವಣೆಗಳು ಆ ಪ್ರದೇಶಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತವೆ ಎಂದು ನನಗೆ ವಿಶ್ವಾಸವಿದೆ. ಅವರು ದೇಶದ ಇತರ ಭಾಗಗಳಲ್ಲಿ ತಮ್ಮ ಸಹವರ್ತಿ ನಾಗರಿಕರಂತೆಯೇ ಹಕ್ಕುಗಳು, ಸವಲತ್ತುಗಳು ಮತ್ತು ಸೌಲಭ್ಯಗಳನ್ನು ಪಡೆಯಲು ಅಲ್ಲಿನ ಜನರಿಗೆ ಅನುಕೂಲವಾಗಲಿದೆ' ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಂದು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಮತದಾರರ ಬಗ್ಗೆ ರಾಷ್ಟ್ರಪತಿ ಮೆಚ್ಚುಗೆ ಸೂಚಿಸಿದರು. ಈ ಭಾರಿಯ ಅಧಿವೇಶನದಲ್ಲಿ ಮಾಹಿತಿ ಹಕ್ಕು ಕಾಯ್ದೆ, ತ್ರಿವಳಿ ತಲಾಕ್, ಶಿಕ್ಷಣದಲ್ಲಿ ಮೀಸಲಾತಿಯಂತಹ ಕಾಯ್ದೆಗಳು ಸಮಾನ ಒಳಗೊಳ್ಳುವಿಕೆಗೆ ಪೂರಕವಾಗುತ್ತವೆ ಎಂದು ರಾಷ್ಟ್ರಪತಿ ಅಭಿಪ್ರಾಯಪಟ್ಟರು.