ಸಾಮಾಜಿಕ ಜಾಲತಾಣ ಟ್ವಿಟರ್ ತನ್ನ ಬಳಕೆದಾರರಿಗಾಗಿ ಅತಿ ಹೆಚ್ಚು ಬೇಡಿಕೆಯಲ್ಲಿರುವ ಸೇವೆಯೊಂದನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ. ಈ ಸೇವೆಯ ಮೂಲಕ, ಟ್ವಿಟರ್ ಬಳಕೆದಾರರು ಯಾವುದಾದರೊಂದು ನಿರ್ಧಾರಿತ ಸಮಯಕ್ಕೆ ತಮ್ಮ ಪೋಸ್ಟ್‌ಗಳನ್ನು ಶೆಡ್ಯೂಲ್ ಮಾಡಬಹುದಾಗಿದೆ. ವರದಿಯ ಪ್ರಕಾರ, ಈಗಾಗಲೇ ಕೆಲವು ಬಳಕೆದಾರರು ಈ ಸೇವೆಯನ್ನು ಬಳಸುತ್ತಿದ್ದಾರೆ. ಆದರೂ ಸಹ ಶೀಘ್ರದಲ್ಲೇ ಎಲ್ಲಾ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಈ ಸೇವೆ ಆರಂಭಿಸಲಾಗುತ್ತಿದೆ. ಕಂಪನಿಯು ಈ ಮೊದಲು ಅನೇಕ ವೈಶಿಷ್ಟ್ಯಗಳನ್ನು ಪರಿಚಯಿಸಿದ್ದು, ಈ ವೈಶಿಷ್ಟ್ಯ ಗಳನ್ನು ಬಳಸಿ ಇದೀಗ ಟ್ವೀಟ್ ಮಾಡುವುದು ಬಳಕೆದಾರರಿಗೆ ಇನ್ನಷ್ಟು ಸುಲಭವಾಗಿದೆ.


COMMERCIAL BREAK
SCROLL TO CONTINUE READING

ಮಾಧ್ಯಮ ವರದಿಗಳ ಪ್ರಕಾರ, ಶೆಡ್ಯೂಲ್ ಮಾಡಲಾಗಿರುವ ಟ್ವೀಟ್‌ಗಳ ಮೇಲೆ ನಿಗಾ ವಹಿಸಲು ಕಂಪನಿಯು ತನ್ನ ವೇದಿಕೆಯಲ್ಲಿ ಹೊಸಶೆಡ್ಯೂಲಿಂಗ್ ವಿಂಡೋವನ್ನು ಪರಿಚಯಿಸಿದೆ. ಅಲ್ಲದೆ, ಕಂಪನಿಯು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ದ್ವೇಷಪೂರಿತ ಹಾಗೂ ಟ್ರೋಲಿಂಗ್ ಅನ್ನು ತಡೆಗಟ್ಟುವ ವೈಶಿಷ್ಟ್ಯವನ್ನು ಸಹ ಪರೀಕ್ಷಿಸುತ್ತಿದೆ ಎನ್ನಲಾಗಿದೆ.


ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಅಸಭ್ಯ ಭಾಷೆಯ ಬಳಕೆಯಲ್ಲಿ  ಸಾಕಷ್ಟು ಹೆಚ್ಚಳವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕಂಪನಿ ಕೆಲ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇದರ ಜೊತೆಗೆ ಕಂಪನಿಯು ತನ್ನ ಒಂದು ವೈಶಿಷ್ಟ್ಯವೊಂದನ್ನು ಕೂಡ ಅಪ್ಡೇಟ್ ಮಾಡಿದೆ. ಸೆಲ್ಫ್ ಎಡಿಟ್ ಫೀಚರ್ ಹೆಸರಿನ ಇನ್ನೊಂದು ವೈಶಿಷ್ಟ್ಯವನ್ನು ಕಂಪನಿ ಈಗಾಗಲೇ ಪ್ರಕಟಿಸಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಅಸಭ್ಯ ಭಾಷೆ ಬಳಕೆಯನ್ನು ತಡೆಯಲು ಈ ವೈಶಿಷ್ಟ್ಯ ಪರಿಚಯಿಸಲಾಗಿದೆ.