Operation Sindoor: ಪಾಕಿಸ್ತಾನ್ ಒಳನುಸುಳಿ ದಾಳಿ ಬಳಿಕ ಭಾರತದ ಮುಂದಿನ ಯೋಜನೆ ಏನು? ಅಜಿತ್ ದೋವೆಲ್ ಹೇಳಿದ್ದೇನು?

Operation Sindoor: ಆಪರೇಷನ್ ಸಿಂಧೂರ್ ನಡೆಸಿ ಪಾಕಿಸ್ತಾನದಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿ ಉಗ್ರರ ಎದೆಯಲ್ಲಿ ನಡುಕ ಹುಟ್ಟಿಸಿರುವ ಭಾರತೀಯ ಸೇನೆಯ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ. 

Written by - Yashaswini V | Last Updated : May 8, 2025, 01:31 PM IST
  • ಪಾಕಿಸ್ತಾನದ ಏನೇ ಮಾಡಿದರೂ ತಕ್ಕ ಉತ್ತರ
  • ಪಾಪಿ ಪಾಕಿಸ್ತಾನಕ್ಕೆ ಅಜಿತ್ ದೋವಲ್ ಎಚ್ಚರಿಕೆ
Operation Sindoor: ಪಾಕಿಸ್ತಾನ್ ಒಳನುಸುಳಿ ದಾಳಿ ಬಳಿಕ ಭಾರತದ ಮುಂದಿನ ಯೋಜನೆ ಏನು? ಅಜಿತ್ ದೋವೆಲ್ ಹೇಳಿದ್ದೇನು?

Operation Sindoor: ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನದ ಮೇಲೆ ಪ್ರಬಲ ಏರ್‌ಸ್ಟ್ರೈಕ್‌ ನಡೆಸಿ ಪಹಲ್ಗಾಮ್ ಭಯೋತ್ಪಾದನ ದಾಳಿಗೆ ತಕ್ಕ ಉತ್ತರವನ್ನು ನೀಡಿದೆ. ಘಟನೆ ಬಳಿಕ ಪಾಕಿಸ್ತಾನದ ನಾಯಕರು ಪ್ರತೀಕಾರದ ಮಾತುಗಳನ್ನಾಡುತ್ತಿದ್ದಾರೆ. ಈ ಕುರಿತಂತೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. 

Add Zee News as a Preferred Source

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿ‌ಓ‌ಕೆ)ದ 9 ಭಯೋತ್ಮಾದಕ ಶಿಬಿರಗಳ ಮೇಲೆ ದಾಳಿ ನಡೆಸಿರುವ ಭಾರತ ಪಾಕಿಸ್ತಾನದ ಮಿಲಿಟರಿ ಪಡೆಯನ್ನಾಗಲಿ ಅಥವಾ ಅಲ್ಲಿನ ನಾಗರೀಕರಿಗೆ ಯಾವುದೇ ರೀತಿಯ ತೊಂದರೆ ಉಂಟು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ಪಾಕಿಸ್ತಾನ ಪ್ರತೀಕಾರದ ಕ್ರಮಕ್ಕಾಗಿ ಹವಣಿಸುತ್ತಿರುವ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಲಾಗುವುದು ಎಂದು ಅಜಿತ್ ದೋವಲ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. 

ಇದನ್ನೂ ಓದಿ- Operation Sindoor: ಬಿಕ್ಕಟ್ಟನ್ನು ರಾಜತಾಂತ್ರಿಕವಾಗಿ ಬಗೆಹರಿಸಿಕೊಳ್ಳಿ: ಇಂಡಿಯಾ-ಪಾಕ್​ಗೆ ಯುಕೆ ಒತ್ತಾಯ

ವಾಸ್ತವವಾಗಿ, ಈ ಹಿಂದೆ ಭಾರತದ ಬಾಲಕೋಟ್ ವೈಮಾನಿಕ ದಾಳಿಯ ಬಳಿಕ ಪಾಕಿಸ್ತಾನವೂ ದಾಳಿ ನಡೆಸಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಹಾಗಿಲ್ಲ. ಭಾರತದ ಆಪರೇಷನ್ ಸಿಂಧೂರ್ ಏರ್‌ಸ್ಟ್ರೈಕ್‌ ಬಳಿಕ ಅಸಿಮ್ ಮುನೀರ್ ಸೈನ್ಯದ ಎದೆಯಲ್ಲಿ ನಡುಕ ಹುಟ್ಟಿಸಿದೆ. ಏತನ್ಮಧ್ಯೆ, ಭಾರತದ ದಾಳಿಯ ಬಗ್ಗೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ಎಲ್‌ಎಟಿ ತನ್ನ ಪ್ರಧಾನ ಕಚೇರ್ಯ್ಯ ಮೇಲೆ ದಾಳಿ ನಡೆಸಿದೆ ಎಂದು ಹೇಳಿತ್ತು.  

ಇದನ್ನೂ ಓದಿ- Operation Sindoor: ಪಾಕಿಸ್ತಾನಿ ಉಗ್ರರ ಎದೆ ನಡುಗಿಸಿತ್ತು ಸ್ವದೇಶಿ 'ಸ್ಯೂಸೈಡ್‌ ಡ್ರೋನ್‌'! ಇದರ ತಯಾರಿಕೆಯ ಹಿಂದಿನ ಕೈ ಯಾರದ್ದು ಗೊತ್ತಾ?  

ಭಾರತದ ಮುಂದಿನ ನಡೆ ಏನು? 
ಈ ಎಲ್ಲಾ ಬೆಳವಣಿಗೆಗಳ ಹೊರತಾಗಿಯೂ, ಭಾರತ ಏರ್‌ಸ್ಟ್ರೈಕ್‌ ನಡೆಸಿರುವ ಲಷ್ಕರ್-ಎ-ತೋಯ್ಬಾ ಅಡಗುತಾಣವನ್ನು ಸಾಮಾನ್ಯ ನಾಗರೀಕರು ವಾಸಿಸುತ್ತಿದ್ದ ಪ್ರದೇಶ ಎಂದು ಪಾಕಿಸ್ತಾನ ಅಪಪ್ರಚಾರ ಮಾಡುತ್ತಿದೆ. ಈ ಬಗ್ಗೆ ಎಚ್ಚರಿಕೆ ನೀಡಿರುವ ಅಜಿತ್ ದೋವಲ್, ಪಾಕಿಸ್ತಾನಿ ಸೇನೆ ಮತ್ತು ಸರ್ಕಾರ ಯಾವುದೇ ರೀತಿಯ ತಪ್ಪು ಹೆಜ್ಜೆ ಇಟ್ಟರೂ, ಭಾರತವನ್ನು ಕೆಣಕಲು ಪ್ರಯತ್ನಿಸಿದರೂ ಅದನ್ನು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News