Operation Sindoor updates : ಬಹವಾಲ್ಪುರದಲ್ಲಿ ನಡೆದ ವಾಯುದಾಳಿಯಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಅವರ ಸಹೋದರಿ ಸೇರಿದಂತೆ ಹತ್ತು ಕುಟುಂಬ ಸದಸ್ಯರು ಸಾವನ್ನಪ್ಪಿದ್ದಾರೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಇಂದು ಬೆಳಗಿನ ಜಾವ ನಡೆದ ದಾಳಿಯಲ್ಲಿ ಅಜರ್ ಅವರ ಸೋದರ ಮಾವ ಸಹ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇದೀಗ ಈ ಕುರಿತು ಉಗ್ರ ಮಸೂದ್ ಅಜರ್ ಮಾತನಾಡಿದ್ದು.. ನನ್ನ ಕುಟುಂಬದ 10 ಸದಸ್ಯರು ಇಂದು ರಾತ್ರಿ ಅಲ್ಲಾನ ಪಾದ ಸೇರಿದರು. 5 ಮುಗ್ಧ ಮಕ್ಕಳು ಜನ್ನತುಲ್ ಫಿರ್ದೌಸ್‌ನ ಹೂವುಗಳಾದರು. ನನ್ನ ಅಕ್ಕ ಸಾಹಿಬಾ, ನನ್ನ ಜೀವಕ್ಕಿಂತ ಹೆಚ್ಚು, ಅವಳ ಪತಿ.. ನನ್ನ ಸೋದರಳಿಯ ಅಲಿಮ್ ಫಾಜಿಲ್ ಮತ್ತು ನನ್ನ ಸೊಸೆ ಆಲಂ ಫಾಜಿಲಾ... ಎಲ್ಲರೂ ಅಲ್ಲಾಹನಿ ಹತ್ತಿರವಾದರು" ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ದಾಳಿ ನಡೆದ ರಾತ್ರಿ ಮಸೀದಿಯೊಳಗೆ ಮಹಿಳೆಯರು ಉಪಸ್ಥಿತರಿದ್ದಿದ್ದೇಕೆ ?
ಮೋದಿ ಮುಗ್ಧ ಮಕ್ಕಳು, ಮಹಿಳೆಯರು ಮತ್ತು ವೃದ್ಧರನ್ನು ಗುರಿಯಾಗಿಸಿಕೊಂಡರು. ಆದರೆ ಯಾವುದೇ ವಿಷಾದವಿಲ್ಲ, ನಿರಾಶೆ ಅಥವಾ ಭಯವಿಲ್ಲ... ಈ 14 ಜನರಲ್ಲಿ ನಾನೂ ಸೇರಬೇಕಿತ್ತು ಎಂದು ಅನಿಸುತ್ತದೆ. ಆದರೆ ಅಲ್ಲಾಹನನ್ನು ಭೇಟಿಯಾಗುವ ಸಮಯ ನಿಶ್ಚಿತವಾಗಿರುತ್ತದೆ. ನಮ್ಮ ಮನೆಯಲ್ಲಿ 7 ವರ್ಷದಿಂದ 3 ವರ್ಷ ವಯಸ್ಸಿನ ಒಟ್ಟು ನಾಲ್ಕು ಮಕ್ಕಳಿದ್ದರು. ನಾಲ್ವರೂ ಒಟ್ಟಿಗೆ ಸ್ವರ್ಗಕ್ಕೆ ಹೋದರು. ಅಲ್ಲಾಹನು ಪ್ರೀತಿಸುವವರಿಗೆ ಹುತಾತ್ಮತೆಯನ್ನು ನೀಡಲಾಗುತ್ತದೆ ಎಂದು ಕುರಾನ್ ಹೇಳುತ್ತದೆ. ದೇವರು ಅವರಿಗೆ ಜೀವವನ್ನು ನೀಡಿದ್ದಾನೆ, ಸಾವನ್ನಲ್ಲ... ಮೋದಿಯವರ ಈ ದಬ್ಬಾಳಿಕೆ ಎಲ್ಲಾ ಮಾರ್ಗಗಳನ್ನು ಮುರಿದಿದೆ, ಈಗ ಯಾರೂ ವಿನಮ್ರತೆ ನಿರೀಕ್ಷಿಸಬಾರದು" ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ..
ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) 'ಆಪರೇಷನ್ ಸಿಂಧೂರ್' ಅನ್ನು ನಡೆಸಿವೆ. ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸಿವೆ, ಇದರಲ್ಲಿ ಜೈಶ್-ಎ-ಮೊಹಮ್ಮದ್ ಭದ್ರಕೋಟೆಯಾದ ಬಹಾವಲ್ಪುರ್ ಮತ್ತು ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾ ನೆಲೆ ಸೇರಿವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯು ಭಾರತ ಮತ್ತು ವಿದೇಶಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ಎರಡು ವಾರಗಳ ನಂತರ ಈ ಪ್ರತಿಕಾರ ತೀರಿಸಿಕೊಳ್ಳಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









