Operation Sindoor : ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸೇನೆ..! ಕುತಂತ್ರಿ ದೇಶದ ಅಸಲಿ ಬಣ್ಣ ಬಯಲು

Operation Sindoor : "ಆಪರೇಷನ್ ಸಿಂಧೂರ" ಹೆಸರಿನಲ್ಲಿ ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (POK) ದಲ್ಲಿನ ಹಲವಾರು ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದೆ. ಭಯೋತ್ಪಾದಕ ಕೃತ್ಯಗಳಿಗೆ ನಾವು ಬೆಂಬಲ ನೀಡುವುದಿಲ್ಲ ಎನ್ನುವ ಪಾಕ್‌ ಉನ್ನತ ಸೇನಾ ಅಧಿಕಾರಿಗಳು ಉಗ್ರರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿರುವ ಫೋಟೋಗಳು ವೈರಲ್ ಆಗುತ್ತಿವೆ. ಭಯೋತ್ಪಾದಕರ ಮೃತದೇಹಗಳಿಗೆ ಗೌರವ ಸಲ್ಲಿಸಿದ್ದಾರೆ..

Written by - Krishna N K | Last Updated : May 7, 2025, 11:36 PM IST
    • ಪಾಕಿಸ್ತಾನ ಬುದ್ದಿ ಬದಲಾಗುವಂತಿಲ್ಲ, ಅವರಲ್ಲಿ ಯಾವುದೇ ಸಾಕ್ಷಾತ್ಕಾರವಿಲ್ಲ.
    • ಪಾಕ್‌ ಭಯೋತ್ಪಾದಕರನ್ನು ಪೋಷಿಸುತ್ತಿದೆ ಎಂದು ಪ್ರಪಂಚವೇ ಆರೋಪಿಸುತ್ತಿದೆ.
    • ಸೇನಾ ಅಧಿಕಾರಿಗಳು ಉಗ್ರರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿರುವ ಫೋಟೋಗಳು ವೈರಲ್ ಆಗುತ್ತಿವೆ.
Operation Sindoor : ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸೇನೆ..! ಕುತಂತ್ರಿ ದೇಶದ ಅಸಲಿ ಬಣ್ಣ ಬಯಲು

Operation Sindoor Updates : ಪಾಕಿಸ್ತಾನ ಬುದ್ದಿ ಬದಲಾಗುವಂತಿಲ್ಲ. ಅವರಲ್ಲಿ ಯಾವುದೇ ಸಾಕ್ಷಾತ್ಕಾರವಿಲ್ಲ. ಪಾಕ್‌ ಭಯೋತ್ಪಾದಕರನ್ನು ಪೋಷಿಸುತ್ತಿದೆ ಎಂದು ಪ್ರಪಂಚವೇ ಆರೋಪಿಸುತ್ತಿದ್ದರೆ, ಪಾಕಿಸ್ತಾನ ಮಾತ್ರ ಭಯೋತ್ಪಾದನೆ ನಮ್ಮಲ್ಲಿ ಇಲ್ಲ ಅಂತ ಸುಳ್ಳು ಹೇಳುತ್ತಲೇ ಕೆಟ್ಟ ಕೆಲಸ ಮಾಡುತ್ತಿದೆ.. ಇದೀಗ "ಆಪರೇಷನ್ ಸಿಂಧೂರ" ಬಲಿಯಾದ ಭಯೋತ್ಪಾದಕರಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಿದ್ದಾರೆ.. ಈ ಕುರಿತ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

Add Zee News as a Preferred Source

ಹೌದು.. ಭಯೋತ್ಪಾದಕರು ಮತ್ತು ಪಾಕಿಸ್ತಾನಿ ಸೈನಿಕರು ಈ ಅಂತ್ಯಕ್ರಿಯೆಗಳನ್ನು ಒಟ್ಟಿಗೆ ಮಾಡಿದ್ದಾರೆ. ಇದಿರಂದ ಆ ದೇಶದಲ್ಲಿ ಉಗ್ರರ ಪೋಷಣೆ ಎಷ್ಟರ ಮಟ್ಟಿಗೆ ನಡೆಯುತ್ತಿದೆ ಎಂದು ಅರ್ಥವಾಗುತ್ತೆ. ಪಾಕಿಸ್ತಾನಿ ಸೇನೆ ಭಯೋತ್ಪಾದಕರನ್ನು ಪೋಷಿಸುತ್ತದೆ ಎಂಬುವುದಕ್ಕೆ ಇದಕ್ಕಿಂತ ದೊಡ್ಡ ಉದಾರಹಣೆ ಬೇಕಿಲ್ಲ.

ಇದನ್ನೂ ಓದಿ: Mock Drill Live: ಮೊಳಗಿತು ವಾರ್‌ ಸೈರನ್‌...! ದೇಶಾದ್ಯಂತ ಹೈ ಅಲರ್ಟ್‌, ಮುಂಜಾಗೃತ ಕ್ರಮವಾಗಿ "ಮಾಕ್‌ ಡ್ರೀಲ್‌"

ಆಪರೇಷನ್ ಸಿಂಧೂರ್‌ ಹೊಡೆತಕ್ಕೆ ಜೈಶ್-ಎ-ಮೊಹಮ್ಮದ್ ಧೂಳಿಪಟವಾಗಿದೆ. ಭಾರತ ನಡೆಸಿದ ಸೇಡಿನ ದಾಳಿಯಲ್ಲಿ ಮಸೂದ್ ಅಜರ್ ಅವರ ಇಡೀ ಕುಟುಂಬ ಸರ್ವನಾಶವಾಗಿದೆ. ಈ ದಾಳಿಯಲ್ಲಿ ಮಸೂದ್ ಅಜರ್ ಸಹೋದರಿ ಮತ್ತು ಮೌಲಾನಾ ಕಶಾಫ್ ಕುಟುಂಬ ಸೇರಿದಂತೆ ಒಟ್ಟು 14 ಜನರು ಪ್ರಾಣ ಕಳೆದುಕೊಂಡರು. 

ಆದರೆ ಮಸೂದ್ ಅಜರ್ ಈಗ ಎಲ್ಲಿದ್ದಾನೆ...? ಯಾವಾಗಲೂ ಹೆಚ್ಚಿನ ಭದ್ರತೆ ನೀಡುವ ಪಾಕಿಸ್ತಾನ ಸರ್ಕಾರ ಅವರಿಗೆ ಭದ್ರತೆ ಒದಗಿಸಿದೆಯೇ..? ಅಥವಾ ಅವನು ಬೇರೆಲ್ಲಿಯಾದರೂ ಅಡಗಿಕೊಂಡಿದ್ದಾನೆಯೇ.? ಎಂದು ತಿಳಿದು ಬರಬೇಕಿದೆ. ಬಹುಷಃ ಮಸೂದ್‌ ಬಲಿ ಪಡೆಯುವವರೆಗೂ ಆಪರೇಷನ್‌ ಸಿಂದೂರ್‌ ಅಂತ್ಯವಾಗಲ್ಲ ಅಂತ ಅನಿಸುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News