Operation Sindoor: ಆಪರೇಷನ್ ಸಿಂಧೂರ್ ನಡುವೆ ಇಂದು ದೇಶಾದ್ಯಂತ ಮಾಕ್‌ಡ್ರಿಲ್; ಏನೇನು ನಡೆಯುತ್ತೆ ಗೊತ್ತಾ?

Mock Drill: ಬುಧವಾರ ದೇಶಾದ್ಯಂತ ಅಣಕು ಕವಾಯತು (Mock Drill) ನಡೆಯಲಿದ್ದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಯುದಾಳಿ ಸೈರನ್‌ಗಳನ್ನು ಕಾರ್ಯಗತಗೊಳಿಸಲು ಮತ್ತು ಜನರಿಗೆ ಸ್ಥಳಾಂತರಿಸುವ ಪ್ರೋಟೋಕಾಲ್‌ಗಳ ಕುರಿತು ತರಬೇತಿ ನೀಡಲು ಸಿದ್ದತೆ ನಡೆದಿದೆ. 

Written by - Yashaswini V | Last Updated : May 7, 2025, 08:45 AM IST
  • ಒಂದೆಡೆ ಆಪರೇಷನ್ ಸಿಂಧೂರ್, ಮತ್ತೊಂದೆಡೆ ಮಾಕ್‌ಡ್ರಿಲ್
  • ಮಾಕ್‌ಡ್ರಿಲ್ ಎಂದರೇನು?
  • ಮಾಕ್‌ಡ್ರಿಲ್ ನಡೆಸುವುದರ ಉದ್ದೇಶವೇನು?
Operation Sindoor: ಆಪರೇಷನ್ ಸಿಂಧೂರ್ ನಡುವೆ ಇಂದು ದೇಶಾದ್ಯಂತ ಮಾಕ್‌ಡ್ರಿಲ್; ಏನೇನು ನಡೆಯುತ್ತೆ ಗೊತ್ತಾ?

#OperationSindoor #MockDrill: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಒಂದೆಡೆ 'ಆಪರೇಷನ್ ಸಿಂಧೂರ್' ನಡೆಸಿ ಪಾಕಿಸ್ತಾನದ 9 ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿ ಏರ್‌ಸ್ಟ್ರೈಕ್‌ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭಾರತ ಮತ್ತೊಂದೆಡೆ ಇಂದು ರಾಷ್ಟ್ರವ್ಯಾಪಿ ಅಣುಕು ಕವಾಯತು (Mock Drill) ನಡೆಸಲು ಸಜ್ಜಾಗಿದೆ. ಏನಿದು, ಅಣಕು ಕವಾಯತು, ಇದರ ಪ್ರಯೋಜನವೇನು ಎಂಬ ಮಾಹಿತಿ ಇಲ್ಲಿದೆ.
 
ಏನಿದು ಮಾಕ್‌ಡ್ರಿಲ್? 

ಪೆಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲೇಬೇಕು ಎಂದು ನಿರ್ಧರಿಸಿರುವ ಭಾರತ ಇಂದು ದೇಶಾದ್ಯಂತ ಮಾಕ್‌ಡ್ರಿಲ್ ನಡೆಸಲಿದ್ದು ವಾರ್ ಸೈರನ್ ಮೊಳಗಿಸಲಿದೆ. ಮಾಕ್‌ಡ್ರಿಲ್ ಎಂದರೆ ಯುದ್ಧ ಘೋಷಣೆಯಾದಾಗ ಸಾರ್ವಜನಿಕರು ಏನು ಮಾಡಬೇಕು? ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದು ತಿಳಿಸುವುದಾಗಿದೆ. 

Add Zee News as a Preferred Source

ದೇಶಾದ್ಯಂತ ನಡೆಯುವ ಅಣಕು ಕವಾಯತು (Mock Drill)/ವಾರ್ ಸೈರನ್ ವೇಳೆ ರಕ್ಷಣಾ ತಜ್ಞರು ಯುದ್ಧದ ವೇಳೆ ಯಾವ ರೀತಿ ವರ್ತಿಸಬೇಕು ಎಂದು  ಮಾಹಿತಿ ನೀಡುತ್ತಾರೆ. ಇಂದಿನ ತಲೆಮಾರಿಗೆ ಯುದ್ಧದ ಬಗ್ಗೆ ಗೊತ್ತಿಲ್ಲದಿರುವುದರಿಂದ ಇಂಥ ಅಭ್ಯಾಸ ಮಾಡಲಾಗುತ್ತಿದೆ. 1971ರ ನಂತರ ಇದೇ ಮೊದಲ ಬಾರಿಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಯುದಾಳಿ ಸೈರನ್‌ಗಳನ್ನು ಕಾರ್ಯಗತಗೊಳಿಸಲು "ಪ್ರತಿಕೂಲ ದಾಳಿ"ಯ ಸಂದರ್ಭದಲ್ಲಿ ಬಂಕರ್‌ಗಳು ಮತ್ತು ಕಂದಕಗಳಲ್ಲಿ ರಕ್ಷಣಾ ಕಾರ್ಯಾಚರಣೆ ಸೇರಿದಂತೆ ಇತರ ಹಂತಗಳ ಕುರಿತು ತರಬೇತಿ ನೀಡಲು ಸಿದ್ಧತೆ ನಡೆಸುತ್ತಿವೆ. 

ಇದನ್ನೂ ಓದಿ- Operation Sindoor Live Updates: ಆಪರೇಷನ್ 'ಸಿಂಧೂರ್' ಹೆಸರಿನಲ್ಲಿ ಪಾಕಿಸ್ತಾನದ 9 ಸ್ಥಳಗಳ ಮೇಲೆ ಭಾರತದ ಏರ್‌ಸ್ಟ್ರೈಕ್‌... ಗಡಿಯಲ್ಲಿ ಈ ಹೊತ್ತಿಗೆ ನಡೀತಿರೋದು ಏನು ಇಲ್ಲಿ ತಿಳಿಯಿರಿ 

ನಿಮಗೆಲ್ಲಾ ಗೊತ್ತು ಇಂದಿನ ತಲೆಮಾರಿಗೆ ಯುದ್ಧದ ಕರಾಳ ಮುಖ ಹೇಗಿರುತ್ತದೆ ಎನ್ನುವುದು ಗೊತ್ತಿಲ್ಲ. ಹಾಗಾಗಿಯೇ ಸರ್ಕಾರ ಯುದ್ಧ ಘೋಷಣೆಯಾದರೆ ಜನ ಯಾವ ರೀತಿಯಲ್ಲಿ ಅದನ್ನು ಎದುರುಗೊಳ್ಳಬೇಕು ಎಂಬುದನ್ನು ತಿಳಿಸಲು ಇಂದು ದೇಶಾದ್ಯಂತ ವಾರ್ ಸೈರನ್ ಮೊಳಗಿಸಲಿದೆ. 

ಇಂದು ದೇಶಾದ್ಯಂತ ವಾರ್ ಸೈರನ್ ಮೊಳಗಿಸಲಿರುವ ಕಾರಣಕ್ಕೆ ಏನೇನು ನಡೆಯುತ್ತೆ ಎನ್ನುವುದನ್ನು ನೋಡುವುದಾದರೆ... 
>> ವಾಯು ದಾಳಿ ವೇಳೆಯಲ್ಲಿ ಸೈರನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಪರೀಕ್ಷಿಸಲಾಗುತ್ತದೆ. 
>> ರಕ್ಷಣಾ ತಜ್ಞರು ಯುದ್ಧದ ವೇಳೆ ಯಾವ ರೀತಿ ವರ್ತಿಸಬೇಕು ಎಂದು ಸಾರ್ವಜನಿಕರಿಗೆ ಮಾಹಿತಿ ನೀಡುತ್ತಾರೆ. 
>> ಯುದ್ಧ ಮಾಡುವ ದೇಶಗಳ ವಿಮಾನಗಳಿಗೆ ಸ್ಥಳ, ಪ್ರಮುಖವಾಗಿ ನಗರಗಳನ್ನು ಗುರುತಿಸಲು ಸಾಧ್ಯವಾಗಬಾರದೆಂದು ರಾತ್ರಿಯಿಡೀ ವಿದ್ಯುತ್ ಕಟ್ ಮಾಡಲಾಗುತ್ತದೆ. 
>> ಭಾರತೀಯ ವಾಯುಪಡೆಯ ಹಾಟ್ ಲಿಂಕ್ ಮತ್ತು ರೇಡಿಯೋ ಸಂವಹನಗಳ ಕಾರ್ಯವೈಖರಿಯನ್ನು ಪರೀಕ್ಷೆ ಮಾಡಲಾಗುತ್ತದೆ. 
>> ತುರ್ತು ಸೇವೆ ಮತ್ತು ಸಮನ್ವಯಗಳಿಗೆ ರೂಪಿಸಲಾಗುವ ನಿಯಂತ್ರಣ ಕೊಠಡಿಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ಪರೀಕ್ಷಿಸಲಾಗುತ್ತದೆ. 
>> ಅಗ್ನಿಶಾಮಕ ದಳ, ಪೊಲೀಸ್ ಪಡೆ, ವಿಪತ್ತು ನಿರ್ವಹಣಾ ಪಡೆ ಮತ್ತು ಆರೋಗ್ಯ ಸೇವಾ ಸಂಸ್ಥೆಗಳ ಕಾರ್ಯವೈಖರಿಯನ್ನು ಖಾತರಿಪಡಿಸಿಕೊಳ್ಳಲಾಗುತ್ತದೆ.

ಇದನ್ನೂ ಓದಿ- Operation Sindoor: ಗಾಯ ಮಾಸಿತು... ಪೋಕ್‌ನಲ್ಲಿ 'ಆಪರೇಷನ್ ಸಿಂದೂರ್' ಬಳಿಕ ಭಾವುಕರಾದ ಶುಭಂ ದ್ವಿವೇದಿ ತಂದೆ 

ರಾಜ್ಯದ ಮಟ್ಟಿಗೆ ಹೇಳುವುದಾದರೆ ಕೈಗಾ ಅಣುಸ್ಥಾವರ ಇರುವ ಉತ್ತರ ಕನ್ನಡ, ಉಷ್ಣವಿದ್ಯುತ್ ಸ್ಥಾವರಗಳನ್ನು ಹೊಂದಿರುವ ರಾಯಚೂರಿನಲ್ಲಿ ನಡೆಸಬೇಕಾಗಿದ್ದ ವಾರ್ ಸೈರನ್ ಅನ್ನು ಕಡೆಯ ಘಳಿಗೆಯಲ್ಲಿ ಮುಂದೂಡಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಅಣಕು ಡ್ರಿಲ್ ಅಥವಾ ವಾರ್ ಸೈರನ್ ನಡೆಯಲಿದೆ ಎಂದು ತಿಳಿದುಬಂದಿದೆ.

ದೇಶಾದ್ಯಂತ ಒಟ್ಟು 244 ಜಿಲ್ಲೆಗಳ 259 ಸ್ಥಳಗಳಲ್ಲಿ ವಾರ್ ಸೈರನ್ ಮಾಡಲಾಗಿದ್ದು, ಅಲ್ಲೆಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ. ಇದಲ್ಲದೆ ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿಯಲ್ಲಿ ಇವತ್ತು ವಾಯುಪಡೆ ಡ್ರಿಲ್ ಮಾಡಲಿದೆ ಎಂದು ತಿಳಿದುಬಂದಿದೆ.

ಮಾಕ್‌ಡ್ರಿಲ್ ಹೇಗಿರುತ್ತದೆ ಎಂಬುದನ್ನೂ ತಿಳಿಯಲು ವಾರಣಾಸಿಯಲ್ಲಿ ನಡೆಯುತ್ತಿರುವ ಮಾಕ್‌ಡ್ರಿಲ್ ಪೂರ್ವಾಭ್ಯಾಸವನ್ನು ಇಲ್ಲಿ ವೀಕ್ಷಿಸಬಹುದು.... 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News