PM Modi speech in Lok Sabha: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಆಪರೇಷನ್ ಸಿಂಧೂರ ಗದ್ದಲ, ಕೋಲಾಹಲ ನಡೆದಿದೆ.. ವಿಪಕ್ಷಗಳ ಆರೋಪಕ್ಕೆ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕೌಂಟರ್ ನೀಡಿದ್ರೆ, ಇನ್ನು ರಾಜ್ಯಸಭೆಯಲ್ಲಿ ರಾಜನಾಥ್ ಸಿಂಗ್ ಉತ್ತರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕಿಡಿಕಾರಿದ್ದಾರೆ..

ನವದೆಹಲಿ: ಆಪರೇಷನ್ ಸಿಂಧೂರ ಬಗ್ಗೆ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಮಾತಾಡಿದ್ದು, ವಿಪಕ್ಷಗಳ ಆರೋಪಕ್ಕೆ ಉತ್ತರ ನೀಡಿದ್ರು.. ಪಾಕಿಸ್ತಾನ ವಿರುದ್ಧದ ಹೋರಾಟಕ್ಕೆ ಬಹುತೇಕ ಮಿತ್ರ ರಾಷ್ಟ್ರಗಳು ಸಾಥ್ ನೀಡಿದ್ದವು. ಆದ್ರೆ ಕಾಂಗ್ರೆಸ್ ಪಾರ್ಟಿ ಬೆಂಬಲ ನೀಡಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ರು.. ಪಾಕಿಸ್ತಾನ ದುಸ್ಸಾಹಸದ ಕಲ್ಪನೆಗೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ.. ಆಪರೇಷನ್ ಸಿಂಧೂರ ಇನ್ನೂ ನಿಂತಿಲ್ಲ ಎಂದು ಪಾಕಿಸ್ತಾನಕ್ಕೆ ಖಡಕ್ ವಾರ್ನ್ ನೀಡಿದ್ರು..
ಸಂಸತ್ ಕಲಾಪದಲ್ಲಿ ರಾಹುಲ್ ಗಾಂಧಿ ಅಬ್ಬರಿಸಿದ್ದಾರೆ.. ಭಾರತ ಹಾಗೂ ಪಾಕಿಸ್ತಾನ ಯುದ್ಧ ನಿಲ್ಲಿಸಿದ ಕ್ರೆಡಿಟ್ ಟ್ರಂಪ್ ಪಡೆಯುತ್ತಿದ್ದಾರೆ.. ಪ್ರಧಾನಿ ಮೋದಿಗೆ ತಾಕತ್ತು ಇದ್ರೆ ಯುದ್ಧ ನಿಲ್ಲಸಿದ್ದು, ಕದನ ವಿರಾಮ ಘೋಷಣೆ ಮಾಡಿದ್ದು ನಾನೇ ಎಂದು ಹೇಳಲಿ ಎಂದು ಸವಾಲ್ ಎಸೆದ್ರು.. ಯುದ್ದ ನಿಲ್ಲಿಸಿದ್ದು ನಾನೇ ಎಂದು ಟ್ರಂಪ್ ಹೇಳಿದ್ದಾರೆ. ಟ್ರಂಪ್ ಹೇಳಿಕೆ ಸುಳ್ಳು ಎನ್ನುವ ತಾಕತ್ತು ಮೋದಿಗೆ ಇಲ್ಲ ಎಂದು ಆಕ್ರೋಶ ಹೊರ ಹಾಕಿದ್ರು.
20 ವರ್ಷಗಳ ಕಾಲ ವಿಪಕ್ಷದಲ್ಲೇ ಇರುತ್ತೀರಿ.. ಚಾಣಕ್ಯ ಚಾಟಿ..!
ಮುಂಗಾರು ಅಧಿವೇಶನದಲ್ಲಿ ಆಪರೇಷನ್ ಸಿಂಧೂರ ವಿಚಾರದ ಬಗ್ಗೆ ಕಾಂಗ್ರೆಸ್ ನಾಯಕರು ಟೀಕೆ ಮಾಡಿದ್ದಕ್ಕೆ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯಿಸಿದ್ದು, ಇನ್ನೂ ಇಪ್ಪತ್ತು ವರ್ಷಗಳ ಕಾಲ ನೀವು ವಿಪಕ್ಷದಲ್ಲೇ ಇರುತ್ತೀರಿ ಎಂದು ಕಾಲೆಳೆದಿದ್ದಾರೆ. ಸಂಸತ್ತಿನಲ್ಲಿ ಆಪರೇಷನ್ ಸಿಂಧೂರ ಕುರಿತ ಚರ್ಚೆ ಜೋರಾಗಿತ್ತು. ಅಮಿತ್ ಶಾ ಅವ್ರು ಮಾತಾಡಿ, ಕಾಂಗ್ರೆಸ್ ನಾಯಕರಿಗೆ ನಮ್ಮದೇ ವಿದೇಶಾಂಗ ಸಚಿವರ ಮೇಲೆ ನಂಬಿಕೆಯಿಲ್ಲ.. ಅದೇ ಯಾವುದೋ ಬೇರೆ ದೇಶದವರ ಮೇಲೆ ನಂಬಿಕೆ ಹೊಂದಿದ್ದಾರೆ ಎಂಬುದರ ಬಗ್ಗೆ ನನಗೆ ಆಕ್ಷೇಪವಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದಲ್ಲಿ ವಿದೇಶಿಯರ ಪ್ರಮುಖ್ಯತೆಯನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ.. ಆದರೆ ಪಕ್ಷದ ಎಲ್ಲಾ ವಿಷಯವನ್ನು ಸದನದಲ್ಲಿ ಹೇರಿಕೆ ಮಾಡಬೇಕು ಎಂದಲ್ಲ.. ಇದೇ ಕಾರಣಕ್ಕೆ ಅವರಿನ್ನೂ ವಿಪಕ್ಷಗಳ ಸ್ಥಾನದಲ್ಲಿ ಕೂತಿದ್ದಾರೆ. ಅಲ್ಲದೇ ಮುಂದಿನ 20 ವರ್ಷಗಳ ಕಾಲ ಅವರು ಅಲ್ಲೇ ಕೂತಿರುತ್ತಾರೆ ಎಂದು ಅಮಿತ್ ಶಾ ಟಾಂಗ್ ನೀಡಿದರು.
ಭದ್ರತಾ ಲೋಪಕ್ಕೆ ಅಮಿತ್ ಶಾ ಅವರೇ ಹೊಣೆ
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಕೂಡಾ ಭದ್ರತಾ ಲೋಪಗಳನ್ನು ಒಪ್ಪಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಸಾಕಷ್ಟು ಭದ್ರತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ವಿಫಲವಾದ ಕಾರಣ ಗೃಹ ಸಚಿವ ಅಮಿತ್ ಶಾ ಅವರೇ ಹೊಣೆ ಹೊರಬೇಕು ಎಂದು ಖರ್ಗೆ ಒತ್ತಾಯಿಸಿದರು. ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಬೈಸರನ್ ಪ್ರದೇಶದಲ್ಲಿ ಉಗ್ರರು ಅಮಾಯಕರ ಮೇಲೆ ದಾಳಿ ನಡೆಸಿದ್ದರು. ಮೆಹೆಂದಿಯಿಂದ ಅಲಂಕೃತಗೊಂಡಿರುವ ಕೈಗಳಲ್ಲಿ ಗಂಡನ ರಕ್ತಸಿಕ್ತ ದೇಹವನ್ನು ಹಿಡಿಯಬೇಕಾಯಿತು. ಅಸಹಾಯಕತೆಯಿಂದ ಅಳುವ ಮಕ್ಕಳು, ಹತಾಶೆಯಿಂದ ಕುಸಿದಿದ್ದ ಹೆಣ್ಣುಮಕ್ಕಳನ್ನು ನೋಡಿದ್ದೇವೆ ಎಂದರು.
ಬೈಸರನ್ ಕಣಿವೆಗೆ ಉಗ್ರರು ಹೇಗೆ ಹೋದ್ರು..?
ಲೋಕಸಭೆ ಕಲಾಪದಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಪಹಲ್ಗಾಮ್ ದಾಳಿಯ ಬಗ್ಗೆ ಸರ್ಕಾರಕ್ಕೆ ತೀಕ್ಷ್ಮವಾದ ಪ್ರಶ್ನೆಗಳನ್ನು ಹಾಕಿದರು. ಆಪರೇಷನ್ ಸಿಂಧೂರ್ ಕುರಿತ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಮೊದಲು ಭಾರತೀಯ ಸಶಸ್ತ್ರ ಪಡೆಗಳ ಶೌರ್ಯವನ್ನು ಶ್ಲಾಘಿಸಿದರು. ಬಳಿಕ ಪಹಲ್ಗಾಮ್ ದಾಳಿ ಹೇಗೆ ಸಂಭವಿಸಿತು? ಕಾಶ್ಮೀರದಲ್ಲಿ ಭಯೋತ್ಪಾದನೆ ಕೊನೆಗೊಂಡಿದೆ ಎಂದು ಸರ್ಕಾರ ಪ್ರಚಾರ ಮಾಡುತ್ತಲೇ ಇತ್ತು. ಹಾಗಾದರೆ ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.
ಒಟ್ಟಾರೆ ಪಹಲ್ಗಾಮ್ ದಾಳಿಕೋರರ ಹೆಡೆಮುರಿ ಕಟ್ಟಲು ಆಪರೇಷನ್ ಮಹದೇವ್ ಶುರುವಾಗಿದೆ.. ಇನ್ನೊಂದು ಕಡೆ ಕಲಾಪದಲ್ಲಿ ರಾಜಕೀಯ ನಾಯಕರ ಕಚ್ಚಾಟ ಜೋರಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.