ಇಂದಿರಾಗಾಂಧಿ ವಿಶ್ವವಿದ್ಯಾಲಯದಿಂದ ಪದವಿ ಪಡೆಯುತ್ತಿದ್ದ ವಿದ್ಯಾರ್ಥಿಯೇ ಪಹಲ್ಗಾಮ್ ದಾಳಿಯ ಉಗ್ರ..! ಉಂಡ ಮನೆಗೆ ದ್ರೋಹ ಬಗೆದಾತ ಇವನೇ ನೋಡಿ

Pahalgam attack: ಕಾಶ್ಮೀರದ ಸ್ಥಳೀಯ ನಿವಾಸಿ ಆದಿಲ್ ಹುಸೇನ್ ಥೋಕರ್ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದೆ.  

Written by - Bhavishya Shetty | Last Updated : Apr 27, 2025, 03:39 PM IST
    • ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ
    • ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್
    • ಕಾಶ್ಮೀರದ ಸರ್ಕಾರಿ ಪದವಿ ಕಾಲೇಜಿನಿಂದ ಪದವಿ ಪಡೆದಿದ್ದ ಆದಿಲ್
ಇಂದಿರಾಗಾಂಧಿ ವಿಶ್ವವಿದ್ಯಾಲಯದಿಂದ ಪದವಿ ಪಡೆಯುತ್ತಿದ್ದ ವಿದ್ಯಾರ್ಥಿಯೇ ಪಹಲ್ಗಾಮ್ ದಾಳಿಯ ಉಗ್ರ..! ಉಂಡ ಮನೆಗೆ ದ್ರೋಹ ಬಗೆದಾತ ಇವನೇ ನೋಡಿ
Pahalgam attack mastermind Adil Hussain Thokar

Adil Hussain Thokar: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕಾಶ್ಮೀರದ ಸ್ಥಳೀಯ ನಿವಾಸಿ ಆದಿಲ್ ಹುಸೇನ್ ಥೋಕರ್‌ ಹೆಸರು ಕೇಳಿಬಂದಿದೆ. ಅಚ್ಚರಿಯ ಪ್ರಶ್ನೆ ಏನೆಂದರೆ ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿ ಹೇಗೆ ಇಷ್ಟೊಂದು ಅಪಾಯಕಾರಿ ಭಯೋತ್ಪಾದಕನಾದ? ಎಂಬುದು. ಆದಿಲ್ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ (ಇಗ್ನೌ) ಸ್ನಾತಕೋತ್ತರ ಪದವಿ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ.

Add Zee News as a Preferred Source

ಇದನ್ನೂ ಓದಿ:  ನಟಿ ಸುಹಾಸಿನಿ ತಂದೆ ಕನ್ನಡದ ಹೆಸರಾಂತ ಹಿರಿಯ ನಟ: ರಾಷ್ಟ್ರಪ್ರಶಸ್ತಿ ಗೆದ್ದ ಈ ʼಹೀರೋʼ ಕಮಲ್‌ ಹಾಸನ್‌ ಅಣ್ಣನೂ ಹೌದು... ಯಾರು ಅಂತಾ ಗೆಸ್‌ ಮಾಡಿ

ಕಾಶ್ಮೀರದ ಸರ್ಕಾರಿ ಪದವಿ ಕಾಲೇಜಿನಿಂದ ಪದವಿ ಪಡೆದಿದ್ದ ಆದಿಲ್, ಒಂದು ಕಾಲದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಕೂಡ ಹೇಳುತ್ತಿದ್ದನಂತೆ. ಆದರೆ ಈಗ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದಾನೆ

ಪ್ರತಿಭಾನ್ವಿತ ವಿದ್ಯಾರ್ಥಿಯಿಂದ ಭಯಾನಕ ಭಯೋತ್ಪಾದಕನವರೆಗೆ...
ಆದಿಲ್ ಕುಟುಂಬವು ತಮ್ಮ ಮಗ ಚೆನ್ನಾಗಿ ಓದಿ ತಮ್ಮ ಹೆಸರಿಗೆ ಕೀರ್ತಿ ತರುತ್ತಾನೆ ಎಂದು ಕನಸು ಕಂಡಿತ್ತು. ಆದರೆ ಅವರ ಭರವಸೆಯ ಮಗ ಒಂದು ದಿನ ತಮ್ಮ ಹೆಸರನ್ನು ಹಾಳು ಮಾಡುತ್ತಾನೆ ಎಂದು ಅವರಿಗೆ ತಿಳಿದಿರಲಿಲ್ಲ. ಅಧ್ಯಯನದ ಜೊತೆಗೆ, ಆದಿಲ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿ ನಡೆಸುತ್ತಿದ್ದ. ಆತನದ್ದು ಶಾಂತ ಸ್ವಭಾವ ಎಂದು ಅಲ್ಲಿನ ಜನರು ಮಾತನಾಡುತ್ತಾರೆ. ಆದರೆ ಇದೀಗ ಅದೇ ಸ್ವಭಾವದ ಹುಡುಗ ಅದೆಷ್ಟೊ ಜನರ ಪ್ರಾಣವನ್ನೇ ಕಸಿದುಕೊಂಡಿದೆ ಎಂದರೆ ನಂಬುವುದೇ ಕಷ್ಟ ಸಾಧ್ಯ. ಇನ್ನು ಆದಿಲ್ ಇರುವ ಸ್ಥಳದ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನ ಘೋಷಿಸಲಾಗಿದೆ.

ಗುಪ್ತಚರ ಮೂಲಗಳ ಪ್ರಕಾರ, ಆದಿಲ್ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾವನ್ನು ಸೇರಿಕೊಂಡಿದ್ದಾನೆ. ಅಲ್ಲಿ ಆತನನ್ನು ನಿರ್ವಾಹಕರನ್ನಾಗಿ ಮಾಡಲಾಗಿದೆ. ಮಿಲಿಟರಿ ತರಬೇತಿ ಪಡೆದು ಭೂಗತನಾಗಿದ್ದು, ಅವನೊಂದಿಗೆ ಭಯೋತ್ಪಾದಕರ ತಂಡ ರಚನೆಯಾಗಿದೆ. ಆತ ಕಾಶ್ಮೀರದ ಸ್ಥಳೀಯನಾಗಿದ್ದರಿಂದ ಮತ್ತು ಮಾರ್ಗಗಳನ್ನು ಚೆನ್ನಾಗಿ ತಿಳಿದಿದ್ದರಿಂದ, ಇದರ ಲಾಭವನ್ನು ಪಡೆದುಕೊಂಡಿದ್ದಾರೆ. ಪೂಂಚ್-ರಾಜೌರಿ ವಲಯದ ದುರ್ಗಮ ಪ್ರದೇಶಗಳಿಂದ ಎಲ್‌ಒಸಿಯನ್ನು ದಾಟಿ, ತನ್ನ ಸಹ ಭಯೋತ್ಪಾದಕರೊಂದಿಗೆ ಭಾರತ ಪ್ರವೇಶಿಸಿ ಈ ಕುಕೃತ್ಯ ಎಸಗಿರಬಹುದು ಎಂದು ಸದ್ಯ ಹೇಳಲಾಗುತ್ತಿದೆ.

ಇದನ್ನೂ ಓದಿ:  ಕ್ರೆಡಿಟ್ ಕಾರ್ಡ್‌ಗಳನ್ನು Google Pay ಗೆ ಲಿಂಕ್ ಮಾಡುವ ಸುಲಭ ವಿಧಾನ ಇಲ್ಲಿದೆ

20 ಲಕ್ಷ ಬಹುಮಾನ ಮೊತ್ತ
ಆದಿಲ್ ಹಲವು ದಿನಗಳ ಕಾಲ ಅನಂತನಾಗ್‌ನಲ್ಲಿ ಅಡಗಿಕೊಂಡಿದ್ದು, ತನ್ನ ಸಹಚರರೊಂದಿಗೆ, ದೊಡ್ಡ ದಾಳಿ ನಡೆಸಲು ಸರಿಯಾದ ಸ್ಥಳವನ್ನು ಹುಡುಕುತ್ತಿದ್ದ. ಆದಿಲ್ ಅನಂತನಾಗ್‌ನವನು. ಸುಮಾರು 4 ಸಾವಿರ ಜನರು ವಾಸಿಸುವ ಗ್ರಾಮದವ. ಆದಿಲ್ ಮಧ್ಯಮ ಕುಟುಂಬವನ್ನು ಹೊಂದಿದ್ದು, ಅವರ ಸಹೋದರರಲ್ಲಿ ಒಬ್ಬರು ವರ್ಣಚಿತ್ರಕಾರರಾಗಿದ್ದರೆ, ಇನ್ನೊಬ್ಬರು ಆಟೋಮೊಬೈಲ್ ಶೋ ರೂಂನಲ್ಲಿ ಉದ್ಯೋಗಿಯಾಗಿದ್ದಾರೆ. ಆದಿಲ್ ತಾಯಿ ಶಹಜಾದಾ ಬಾನೋ, ತನ್ನ ಮಗ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂಬುದನ್ನು ನಂಬಲು ಸಿದ್ಧವಿಲ್ಲ. ಆದರೆ "ಇದರಲ್ಲಿ ನನ್ನ ಮಗ ಭಾಗಿಯಾಗಿದ್ದರೆ ಅವನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಆದಿಲ್ ಬಂಧನಕ್ಕೆ 20 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News