)
Pahalgam News in Kannada: ಪಹಲ್ಗಾಮ್ ಉಗ್ರ ದಾಳಿಯ ಬೆನ್ನಲ್ಲೇ ಹಲವು ಕಠಿಣ ನಿರ್ಧಾರಗಳನ್ನು ಕೈಗೊಂಡಿರುವ ಭಾರತ ಸರ್ಕಾರ ಪಾಕಿಸ್ತಾನ ಪ್ರಜೆಗಳ ವೀಸಾ ಗಡುವನ್ನು ಕೊನೆಗೊಳಿಸಿದೆ. ಪಾಕಿಸ್ತಾನ ಪ್ರಜೆಗಳಿಗೆ ತಮ್ಮ ದೇಶಕ್ಕೆ ವಾಪಸ್ ತೆರಳಲು ನೀಡಿದ್ದ ಗಡುವು ನಿನ್ನೆಯೇ (ಏಪ್ರಿಲ್ 27) ಕೊನೆಗೊಂಡಿದೆ. ಏತನ್ಮಧ್ಯೆ, ಕಳೆದ ಹಲವು ದಶಕಗಳಿಂದ ಭಾರತದಲ್ಲಿ ವಾಸಿಸುತ್ತಿರುವ ಪಾಕ್ ಪ್ರಜೆಯೊಬ್ಬರು "ನಾವೇನಾದರೂ ತಪ್ಪು ಮಾಡಿದ್ದರೆ ಸರ್ಕಾರ ನಮಗೆ ಗುಂ*ಡುಹಾರಿಸಲಿ. ಆದರೆ, ದೇಶದಿಂದ ಮಾತ್ರ ಹೊರಹಾಕಬೇಡಿ" ಎಂದು ಮನವಿ ಮಾಡಿದ್ದಾರೆ. 72ವರ್ಷ ವಯಸ್ಸಿನ ರಜಿಯಾ ಸುಲ್ತಾನ ಮೋದಿ ಸರ್ಕಾರಕ್ಕೆ ಈ ರೀತಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.
ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ ತೊರೆಯುವಂತೆ ನೋಟೀಸ್ ನೀಡಲಾದ ಪಾಕಿಸ್ತಾನಿ ಪ್ರಜೆಗಳಲ್ಲಿ ಒಡಿಶಾದ ಬಾಲಸೋರ್ ಜಿಲ್ಲೆಯ ಸೊರೊ ಪಟ್ಟಣದ ನಿವಾಸಿಯಾಗಿರುವ ರಜಿಯಾ ಸುಲ್ತಾನ ಕೂಡ ಒಬ್ಬರು.
ರಜಿಯಾ ಸುಲ್ತಾನ ಅವರು ನಾಲ್ಕು ವರ್ಷದವರಿದ್ದಾಗಲೇ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಭಾರತಕ್ಕೆ ಬಂದು ನೆಲೆಸಿದ್ದಾರೆ. ಕಳೆದ 68ವರ್ಷಗಳಿಂದಲೂ ಭಾರತದಲ್ಲೇ ವಾಸಿಸುತ್ತಿರುವ ಅವರು ಪ್ರಸ್ತುತ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದಾರೆ. 2025ರ ಮೇ 10ರಂದು ರಜಿಯಾ ಸುಲ್ತಾನ ಒಡಿಶಾದ ಭುವನೇಶ್ವರದಲ್ಲಿ ನಿರ್ಣಾಯಕ ವೈದ್ಯಕೀಯ ಅಪಾಯಿಂಟ್ಮೆಂಟ್ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಮೋದಿ ಸರ್ಕಾರಕ್ಕೆ ಮನವಿ ಮಾಡಿರುವ ರಜಿಯಾ ಸುಲ್ತಾನ ಅವರ ಕುಟುಂಬ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಹಾಗೂ ತಮಗೆ ನೀಡಿರುವ ನೋಟಿಸ್ ಅನ್ನು ಹಿಂಪಡೆಯುವಂತೆ ಮನೆವಿ ಮಾಡಿದೆ.
VIDEO | Balasore, Odisha: The family of 72-year-old Razia Sultana is in shock after the Balasore district administration issued a notice to her to leave India and return to Pakistan in the wake of the Centre scrapping the long-term VISA following #Pahalgam terror attack.#Odisha… pic.twitter.com/hfkS4JYs4I
— Press Trust of India (@PTI_News) April 28, 2025
ರಜಿಯಾ ಸುಲ್ತಾನ ಅವರ ತಂದೆ ಹೈದರ್ ಮೂಲತಃ ಭಾರತದವರೇ....
ರಜಿಯಾ ಸುಲ್ತಾನ ಅವರ ತಂದೆ ಹೈದರ್ ಅಲಿ ಮೂಲತಃ ಬಿಹಾರದವರು. ಸ್ವಾತಂತ್ರ್ಯ ಸಮಯದಲ್ಲಿ ದೇಶ ವಿಭಜನೆಯಾದಾಗ ಬಾಂಗ್ಲಾದೇಶದಲ್ಲಿದ್ದ ಅವರು ಅಲ್ಲಿಂದ ಪಾಕಿಸ್ತಾನಕ್ಕೆ ತೆರಳಿದ್ದರು. 1953ರಲ್ಲಿ ಪಾಕಿಸ್ತಾನದಲ್ಲಿ ಜನಿಸಿದ ರಜಿಯಾ ಸುಲ್ತಾನ, ಕೇವಲ ನಾಲ್ಕು ವರ್ಷದವರಿದ್ದಾಗ ಅವರ ತಂದೆ ಭಾರತಕ್ಕೆ ಮರಳಿದರು. ಅಂದಿನಿಂದ ಒಡಿಶಾದ ಬಾಲಸೋರ್ ಜಿಲ್ಲೆಯ ಸೊರೊ ಪಟ್ಟಣದಲ್ಲಿ ವಾಸಿಸುತ್ತಿರುವ ರಜಿಯಾ ಸುಲ್ತಾನ, ಸೊರೊ ನಿವಾಸಿ ಶೇಖ್ ಶಂಸುದ್ದೀನ್ ಅವರನ್ನು ಮದುವೆಯಾಗಿದ್ದರು. ರಜಿಯಾ ಅವರ ಪತಿ 2023ರಲ್ಲಿ ನಿಧನರಾಗಿದ್ದು, ರಜಿಯಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.